HomePage_Banner
HomePage_Banner
HomePage_Banner
HomePage_Banner

ಪುತ್ತೂರು ಕಮ್ಯುನಿಟಿ ಸೆಂಟರ್ ನೇತೃತ್ವ, ಬಿ.ಇ.ಒ ಲೊಕೇಶ್‌ರವರ ಮಾರ್ಗದರ್ಶನ | ಬನ್ನೂರು ಮಸೀದಿ ಖತೀಬ್ ಮಲ್ಲಿ ಸಖಾಫಿಯವರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮನೆ-ಮನೆ ಭೇಟಿ

ಪುತ್ತೂರು: ಮುಂಬರುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳು ಈಗಾಗಲೇ ಪೂರ್ವ ತಯಾರಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಸಲು ಹಾಗೂ ಪರೀಕ್ಷೆಯ ಭಯದಿಂದ ತನ್ನ ಅತ್ಮಸೈರ್ಯ ಕುಗ್ಗದಂತೆ ಪ್ರೋತ್ಸಾಹ ನೀಡುವ ಸಲುವಾಗಿ ಪುತ್ತೂರು ಕಮ್ಯುನಿಟಿ ಸೆಂಟರ್ ನೇತೃತ್ವದಲ್ಲಿ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಫಲಿತಾಂಶ ಉನ್ನತೀಕರಣಕ್ಕೆ ಮತ್ತು ಶಾಲೆ ಡ್ರಾಪೌಟ್ ಆಗಿರುವ ವಿಧ್ಯಾರ್ಥಿಗಳನ್ನು ಮರಳಿ ಶಾಲೆಗೆ ಸೇರಿಸುವ ವಿನೂತನ ಕಾರ್ಯಕ್ರಮ ನಡೆಯುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ .ಸಿ ರವರ ಮಾರ್ಗದರ್ಶನದಲ್ಲಿ, ಮುಸ್ಲಿಂ ಸಮುದಾಯದ ಉಲಮಾಗಳು ಕೂಡ ತಮ್ಮ ಜಮಾಅತಿನ ವ್ಯಾಪ್ತಿಯ ವಿಧ್ಯಾರ್ಥಿಗಳ ಮನೆ-ಮನೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಬನ್ನೂರು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಮಜೀದ್ ಮಲ್ಲಿ ಸಖಾಫಿಯವರು ಜಮಾಅತ್‌ನ ವ್ಯಾಪ್ತಿಯಲ್ಲಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಪರೀಕ್ಷೆ ಬಗೆಗಿನ ತಯಾರಿ ಕುರಿತು ವಿದ್ಯಾರ್ಥಿಗಳೊಂದಿಗೆ ವಿಚಾರಿಸಿದರು.

ಒಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಉತ್ತಮ ಫಲಿತಾಂಶಕ್ಕಾಗಿ ಶ್ರಮವಹಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೆಶ್ ಸಿ. ಯವರೊಂದಿಗೆ ಎಲ್ಲರೂ ಕೈಜೋಡಿಸಿಕೊಂಡು ವಿದ್ಯಾರ್ಥಿಗಳಿಗೆ ಪ್ರೇರಪಿಸಬೇಕಾಗಿದೆ ಎಂದು ಜಮಾಅತ್ ಕಮಿಟಿಗಳ ಆಭಿಪ್ರಾಯವಾಗಿದೆ. ಮುಂದಿನ ವರ್ಷದ ಆರಂಭದಿಂದಲ್ಲೇ ವಿಧ್ಯಾರ್ಥಿಗಳ ಮೇಲೆ ನಿಗಾ ಇರಿಸಿ ಅವರಿಗೆ ಸರಿಯಾದ ಗುರಿ ಮತ್ತು ಪ್ರೋತ್ಸಾಹ ಕೊಡಲು ಈಗಾಗಲೇ ಹಲವು ಜಮಾಅತ್‌ಗಳು ಮುಂದೆ ಬಂದಿವೆ. ಪುತ್ತೂರು ಕಮ್ಯುನಿಟಿ ಸೆಂಟರ್ ಈಗಾಗಲೇ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಹಕಾರಕ್ಕಾಗಿ ಸೆಂಟರ್‌ವೊಂದನ್ನು ತೆರೆದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.