HomePage_Banner
HomePage_Banner
HomePage_Banner
HomePage_Banner

ಪುತ್ತೂರು ಉಪ ಕೃಷಿ ನಿರ್ದೇಶಕರ ಕಚೇರಿ ಅಧೀಕ್ಷಕ ಪದ್ಮಯ್ಯ ಗೌಡ ಪರಣೆ ಸೇವಾ ನಿವೃತ್ತಿ

ಪುತ್ತೂರು: ಪುತ್ತೂರು ಉಪ ಕೃಷಿ ನಿರ್ದೇಶಕರ ಕಚೇರಿ ಅಧೀಕ್ಷಕ ಪದ್ಮಯ್ಯ ಗೌಡ ಪರಣೆರವರು ಮಾ. ೩೧ ರಂದು ಸೇವಾ ನಿವೃತ್ತಿ ಹೊಂದಿದರು.

ಪದ್ಮಯ್ಯ ಗೌಡರವರು ೧೯೮೫ ರಿಂದ ೮೮ ತನಕ ಭೂಸಾರ ಸಂರಕ್ಷಣೆ ಉಪವಿಭಾಗ ಉಡುಪಿಯಲ್ಲಿ ಕೃಷಿ ಅಧಿಕಾರಿ, ೧೯೮೮ ರಿಂದ ೨೦೦೪ ರತನಕ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪುತ್ತೂರು, ೨೦೦೪ ರಿಂದ ೨೦೦೭ ರತನಕ ಪುತ್ತೂರು ತಾ.ಪಂ ಹಾಗೂ ಉಪಕೃಷಿ ನಿರ್ದೇಶಕರ ಕಚೇರಿ ಪುತ್ತೂರು, ೨೦೦೭ ರಿಂದ ೨೦೧೨ ರತನಕ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯ ಬೆಳ್ತಂಗಡಿ, ೨೦೧೨-೨೦೧೪ ರತನಕ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮಂಗಳೂರು, ೨೦೧೪ ರಿಂದ ೨೦೨೧ ಮಾ. ೩೧ ರತನಕ ಪುತ್ತೂರು ಉಪ ಕೃಷಿ ನಿರ್ದೇಶಕರ ಕಚೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ, ಸೇವಾ ನಿವೃತ್ತಿ ಹೊಂದಿದರು. ಇವರು ಕೃಷಿ ಸಹಿತ ವಿವಿಧ ಇಲಾಖೆ ಸೇರಿದಂತೆ ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ಪದ್ಮಯ್ಯ ಗೌಡ ಪರಣೆರವರು ಕುಮಾರಮಂಗಲ ಮತ್ತು ಸವಣೂರಿನಲ್ಲಿ ಪ್ರಾಥಮಿಕ, ಕಿನ್ನಿಗೋಳಿಯಲ್ಲಿ ಪ್ರೌಢ ಶಿಕ್ಷಣ ಹಾಗೂ ಸುಬ್ರಹ್ಮಣ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಮಂಗಳೂರಿನಲ್ಲಿ ತರಬೇತಿ ಹೊಂದಿದ್ದರು.

ಪದ್ಮಯ್ಯ ಗೌಡರವರು ಕಳೆದ ೨೫ ವರ್ಷಗಳಿಂದ ಸವಣೂರು ಗ್ರಾಮದ ಪರಣೆ ತುಳುಸಿಪುರಂ ಎಂಬಲ್ಲಿ ಕಟೀಲು ಶ್ರೀ ದೇವಿಯ ಸೇವಾ ಬಯಲಾಟವನ್ನು ನಡೆಸಿಕೊಂಡು, ಬರುತ್ತಿದ್ದಾರೆ. ಇವರು ಕಳೆದ ಹಲವಾರು ವರ್ಷಗಳಿಂದ ಜಾಂಡೀಸ್ ಖಾಯಿಲೆಗೆ ಔಷದಿಯನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹೆಸರನ್ನು ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.