HomePage_Banner
HomePage_Banner
HomePage_Banner
HomePage_Banner

ಬಡಗನ್ನೂರು: `ತುಳು ಪಂಚಮ ವಿನದನ’ ಸಭಾ ಕಾರ್ಯಕ್ರಮ

ಬಡಗನ್ನೂರು: ಸಂಸ್ಕ್ರತಿ ಇದ್ದ ಪುಷ್ಪ ಅರಳಬೇಕಾದರೆ ಸಂಸ್ಕಾರದ ಅಗತ್ಯ ಎಂದು   ಒಡಿಯೂರು ಶ್ರೀಗಳು ಹೇಳಿದರು ಅವರು  ಷಷ್ಟ್ಯಬ್ಧ ಸಂಭ್ರಮ ಸಮಿತಿ 2021 , ವಿಶ್ವಕಲಾನಿ ಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ & ಕಲ್ಚರ್( ರಿ )ಪದಡ್ಕ ಮತ್ತು ಒಡಿಯೂರು ಗ್ರಾಮ ವಿಕಾಸ ಯೋಜನೆ ಬಡಗನ್ನೂರು, ಪಡುವನ್ನೂರು, ನೆಟ್ಟನಿಗೆ ಇವುಗಳ ಆಶ್ರಯದಲ್ಲಿ “ತುಳು ಪಂಚಮ ವಿನದನ’ ,ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವರ್ಷ ಪರ್ಬ ಕಾರ್ಯಕ್ರಮವನ್ನು ದೀಪ ಉದ್ದೀಪನ ಮಾಡಿ ಮಾತನಾಡಿದರು.

ತುಳುನಾಡು ಶಬ್ದ ನೋಡಬೇಕಾದರೆ  ವಿಶ್ವನಾಥ ರೈ ರವರ ನೆನಪಾಗುತ್ತದೆ. ಯಾವುದೇ ಕಾರ್ಯಕ್ರಮದ ಒಂದು ಗಂಟೆ ಮೊದಲು ಬಂದು ಕಾರ್ಯಕ್ರಮ ಪೂರ್ಣ ಗೊಂಡ ಬಳಿಕ ತೆರಳುತ್ತಿದ್ದರು ಇದು ಅವರಲ್ಲಿದ್ದ ತುಳು ಭಾಷೆ ಬಗ್ಗೆಗಿನ ಕಾಳಜಿ.ಎಂದು ಅವರು  ತುಳು ಭಾಷೆ ಮತ್ತು ಸಂಸ್ಕೃತಿ ಉಳಿಯುವ ಬಗ್ಗೆ ಚಿಂತನಾ ಮಂಥನ ನೆಡೆದು ಮತ್ತು ಅದು ಬದುಕಿನಲ್ಲಿ ಆಚರಣೆ ಬರಬೇಕು. ಧರ್ಮಸ್ಪರ್ಧೆಯೇ ಸಂಸ್ಕಾರಕ್ಕೆ ಆಧಾರ ಭವ್ಯ ಭಾರತ ನಿರ್ಮಾಣ ಮಾಡುವ ಸಾಮಾರ್ಥ್ಯ ಹೊಂದಿರುವ ಮಕ್ಕಳಿಗೆ  ಉತ್ತಮ ಸಂಸ್ಕಾರ ನೀಡಿ ಬೆಳೆಸುವ ಕರ್ತವ್ಯ ನಮ್ಮೆಲ್ಲರಲಿದೆ  ಎಂದ ಅವರು ಸನಾತನ ಧರ್ಮದಲ್ಲಿ ಭರತನಾಟ್ಯ ಒಂದು ಶ್ರೇಷ್ಠ ಕಲೆ, ಇದು ಮಕ್ಕಳ ಅಂತರ್ಯ ಜಾಗೃತಿ ಮೂಡಿಸುತ್ತದೆ ಮತ್ತು ಶಿಸ್ತು ಸಂಯಮ ಕಾಪಾಡುತ್ತದೆ..ಸಂಸ್ಕ್ರತಿ ಇದ್ದ ಪುಷ್ಪ ಅರಳಬೇಕಾದರೆ ಸಂಸ್ಕಾರದ ಅಗತ್ಯ ಇದೆ.ಅದರಲ್ಲೂ ತುಳುವ ಸಂಸ್ಕೃತಿ ಹೆಚ್ಚು ಮಹತ್ವದ್ದಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದಾಗ ಭವ್ಯ ಭಾರತ ನಿರ್ಮಾಣಕ್ಕೆ ಹೆಚ್ಚು ಕಾಲ ಬೇಕಿಲ್ಲ ಎಂದು ಹೇಳಿದರು.

ಒಡಿಯೂರು ಶ್ರೀ ಮಾತಾಜೀ ಮಾತನಾಡಿ, ಒಳ್ಳೆಯ ಮನಸ್ಸು ಮತ್ತು ಸಂಸ್ಕಾರ ಸೇರಿ ಬೆಳೆದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ
ಕಲೆ ಮತ್ತು ಕಲಾವಿದನ ಸಂಬಂಧ ತಾಯಿ ಮಕ್ಕಳ ಸಂಬಂಧಿಸಿದಂತೆ.ಕಲೆ ಇಲ್ಲದವರು ಪಶುವಿಗೆ ಸಮಾನ  ಕಲೆ ಎಲ್ಲರೂ ಇರುತ್ತದೆ ಅದನ್ನು ಪ್ರಕಟಗೊಳಿಸುವಲ್ಲಿ ವಿಶ್ವಕಲಾನೀಕೇತನ ಆಶ್ರಯತಾನಾಗಿ ನಿಂತಿದೆ ಮುಂದೆ ಈ ಕಲಾ ಸಂಸ್ಥೆ ಇಡಿ ವಿಶ್ವದಲ್ಲೇ ಹೆಸರು ಪ್ರಸರಿಸಲಿ ಎಂದು ಆಶೀರ್ವದಿಸಿದರು.

ಕಾರ್ಯಕ್ರಮವು ಪದಡ್ಕ ವಿಶ್ವಕಲಾನಿ ಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ & ಕಲ್ಚರ್( ರಿ ) ಇದರ ಸಭಾಂಗಣದಲ್ಲಿ ಮಾ.29 ರಂದು ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು  ಪುತ್ತೂರು ,ಒಡಿಯೂರು ಶ್ರೀ ಗಳ ಷಷ್ಟ್ಯಬ್ಧ ಸಂಭ್ರಮ ಸವಿತಿ  ಅಧ್ಯಕ್ಷ ಸವಣೂರು ಸೀತಾರಾಮ ರೈ, ಮಾತನಾಡಿ ಅಗಸ್ಟ್ 8 ಕ್ಕೆ ಪೂಜ್ಯ ಸ್ವಾಮೀಜಿಯವರ ಷಷ್ಟ್ಯಬ್ಧ ಸಂಭ್ರಮ ಅಂಗವಾಗಿ ಮಂಗಳೂರು, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಯ ಶ್ರೀಗಳ ಬಗ್ಗೆ ತಿಳುವಳಿಕೆ ಮೂಡಿಸುವ  ಕಾರ್ಯಕ್ರಮ ನಡೆಸಲಾಗುತ್ತದೆ. ಪುತ್ತೂರು ತಾಲೂಕಿನಲ್ಲಿ 60 ಕಾರ್ಯಕ್ರಮ ಮಾಡುವ ಬಗ್ಗೆ ತಿಳಿಸಲಾಗಿದೆ ಅದರಲ್ಲಿ ತಾಲೂಕಿನ ಹೊರಗೆ 59  ಹಾಗೂ ಪುತ್ತೂರು ಕೇಂದ್ರ ಸ್ಥಳದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನ  ಮೇ  2 ರಂದು ಪುತ್ತೂರು ಒಕ್ಕಲಿಗ ಸಂಘದ ಸಭಾಂಗಣದಲ್ಲಿ  ನಡೆಸಲಾಗುವುದು  ಈ ಕಾರ್ಯಕ್ರಮದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಹೇಳಿದರು.

ಈಶ್ವರಮಂಗಲ ಗಜಾನನ ಸಂಸ್ಥೆ  ಉಪಾಧ್ಯಕ್ಷ ನಾರಾಯಣ ರೈ ಕುದ್ಕಾಡಿ ಕಟ್ಟೆ, ಸಂದಭೋಚಿತ ಮಾತನಾಡಿದರು.
ವೇದಿಕೆಯಲ್ಲಿ  ಪುತ್ತೂರು ಯುವ ರೋಟರಿ ಕ್ಲಬ್ ಅಧ್ಯಕ್ಷ  ಡಾ ಹರ್ಷ ಕುಮಾರ್ ರೈ ಮಾಡಾವು,  ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಮಾಜಿ ಉಪಾಧ್ಯಕ್ಷ  ಗಂಗಾಧರ ರೈ ಎಂ.ಜಿ, ,ಪುತ್ತೂರು ಉದ್ಯಮಿ ಸತೀಶ್ ರೈ ಕಟ್ಟಾವು, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ಉಪಸ್ಥಿತರಿದ್ದರು

 ಕಾರ್ಯಕ್ರಮದಲ್ಲಿ ರಾಮಣ್ಣ ಗೌಡ, ಪುತ್ತೂರು ಪಶುವೈದ್ಯ ಸತೀಶ್ ಭಟ್ ಹಾಗೂ ಒಡಿಯೂರು ಗ್ರಾಮ ವಿಕಾಸ ಸಂಘದ  ಅಧ್ಯಕ್ಷರುಗಳು,ಸದಸ್ಯರು, ಸೇವಾಧಿಕ್ಷರು ಹಾಗೂ ವಿವಿಧ ಭಾಗದ ಭರತನಾಟ್ಯ ಕಲಾವಿದರು ಮತ್ತು ಗ್ರಾಮಾಸ್ತರು  ಭಾಗವಹಿಸಿದರು
ವಿದುಷಿ ನಯಾನ ವಿ ರೈ  ಸ್ವಾಗತಿಸಿ ವಂದಿಸಿದರು. ವಿದ್ಯಾಶ್ರೀ ಎಸ್ ರೈ  ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ  
ಭರತನಾಟ್ಯ ಕಲಾವಿದೆ ಆಂಗಿಕಾ,  ದಾನಿ ನಾರಾಯಣ ರೈ ಕುದ್ಕಾಡಿ, ಹಾಗೂ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಗಂಗಾಧರ ರೈ ಎನ್ ಜಿ ಸುಳ್ಯಪದವು ಇವರು ಶಾಲು ಹೊದಿಸಿ ಕಾಲುದೀಪ ನೀಡಿ ಗೌರವಿಸಲಾಯಿತು ಬಳಿಕ  ಭರತನಾಟ್ಯ ಕಾರ್ಯಕ್ರಮ ,ಹಾಗೂ  ದಿವಂಗತ  ಕವಿಗಳು ಬರಹಗರಾದ  ಕುದ್ಕಾಡಿ ವಿಶ್ವನಾಥ ರೈ ರವರು ರಚಿಸಿದ ತುಳು ಗೀತಾಂಜಲಿ ನಡೆಯಿತು.
ಚಿತ್ರ ಸ್ವಾಮೀಜಿ ಅರ್ಶಿವಚನ ನೀಡಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.