HomePage_Banner
HomePage_Banner
HomePage_Banner
HomePage_Banner

ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತುಳುನಾಡಿನ ಪುರಾತನ ತುಳು ಸಂಸ್ಕೃತಿ ಮನಸ್ಸಿಗೆ ಬಹಳ ಖುಷಿಕೊಡುವ ಸಂಸ್ಕೃತಿ. ತುಳು ಪತ್ರಿಕೆಗಳ ಮೂಲಕ ತುಳು ಭಾಷೆಯು ರಾಷ್ಟ್ರೀಯವಾಗಿ ಬೆಳೆದು, ಅದರ ಮುಖಾಂತರ ತುಳು ಭಾಷೆಯು ಹೆಸರುಗಳಿಸಬೇಕು. ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಳನದ ಮುಖಾಂತರ ತುಳು ಭಾಷೆ ೮ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗುವ ದೊಡ್ಡ ಕನಸು ನನಸಾಗಲು ಸಹಕಾರಿಯಾಗಲಿ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನ ಸಾಧ್ವಿ ಮಾತಾನಂದಮಯಿ ಹೇಳಿದರು.ಪೂವರಿ ಪತ್ರಿಕಾ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಒಡಿಯೂರು ಗುರುದೇವ ಸ್ವಾಮಿಜಿಯವರ ಷಷ್ಠ್ಯಬ್ಧಿ ಸಂಭ್ರಮ ತಾಲೂಕ ಸಮಿತಿಯ ಸಹಯೋದೊಂದಿಗೆ ಎ.೨ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ತುಳು ಸಾಹಿತ್ಯ, ಸಂಸ್ಕೃತಿ ಉಳಿಯಬೇಕಾದರೆ ತುಳುನಾಡಿ ಪ್ರತಿಯೊಬ್ಬರು ಆಸಕ್ತಿ ವಹಿಸಬೇಕು. ಸಾಹಿತ್ಯಗಳು ಪಡೆದುಕೊಂಡು ಓದುವ ಮೂಲಕ ಪ್ರೋತ್ಸಾಹಿಸಬೇಕು. ತುಳುನಾಡಿನ ಹೆಮ್ಮೆಯನ್ನು ಇಮ್ಮಡಿಗೊಳಿಸಬೇಕು. ತುಳುವಿನಲ್ಲಿ ಸುಮಾರು ೭೩ ಪತ್ರಿಕೆಗಳು ಪ್ರಾರಂಭಗೊಂಡಿದ್ದವು. ಪತ್ರಿಕೆಗಳು ಉಳಿಯಬೇಕಾದರೆ ಜನರ ಆಸಕ್ತಿ ಅಗತ್ಯ. ಪತ್ರಿಕೆಗಳಿಂದ ತುಳು ಸಾಹಿತ್ಯ ಸಂಸ್ಕೃತಿಗಳು ಉಳಿಯ ಸಾಧ್ಯ ಎಂದರು. ಪತ್ರಿಕೆಗಳು ಸಮಾಜದ ಕೈಕನ್ನಡಿ, ಜ್ಞಾನಪ್ರಸಾರ ಮಾಡುವ ಮಾಧ್ಯಮ. ವಿವಿಧ ಕ್ಷೇತ್ರಗಳ ಎಲ್ಲಾ ವಿಚಾರಗಳು ಮಾಧ್ಯಮಗಳು ಮೂಲಕ ಜನರಿಗೆ ತಿಳಿಸಲಾಗುತ್ತಿದೆ. ತುಳು ಪತ್ರಿಕೆಗಳು ಉಳಿಯಬೇಕು. ಪತ್ರಿಕೆಯ ಹಿಂದಿರುವ ಭಾಷೆ ಹಿಂದಿರುವ ಸಂಸ್ಕೃತಿಗಳು ಇನ್ನಷ್ಟು ಉಳಿಯಬೇಕು. ತುಳು ಭಾಷೆ ಮರೆತುಹೋಗಬಾರದು ಎಂಬ ಸಧುದ್ದೇಶದಿಂದ ಪೂವರಿ ಬಳಗದ ಸಮ್ಮಿಲನವನ್ನು ಆಯೋಜಿಸಿಕೊಂಡಿದೆ. ಇದರ ಮೂಲಕ ಇನ್ನಷ್ಟು ಪತ್ರಿಕೆಗಳು ಇನ್ನಷ್ಟು ಬೆಳೆಯಲು ಸಹಕಾರಿಯಾಗಬೇಕು ಎಂದ ಅವರು ತುಳುವಿನಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸ್ವಾಮಿಜಿಯವರ ನೇತೃತ್ವದಲ್ಲಿ ಕ್ಷೇತ್ರದಲ್ಲಿ ನಿರಂತರ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆಯುತ್ತಿದೆ.

ಪೂವರಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ ಮಾತನಾಡಿ, ಪ್ರತಿಯೊಬ್ಬರ ತುಳು ಕಲಿತಾಗ ಮಾತ್ರ ತುಳು ಪತ್ರಿಕೆಗಳು ಬೆಳೆಯಬಹುದು. ಪತ್ರಿಕೆಗಳಿಗೆ ಲೇಖನಗಳು ಬರಬಹುದು. ಓದುವವರ ಸಂಖ್ಯೆಯೂ ಅಧಿಕವಾಗಿ ಪತ್ರಿಕೆಗಳು ಬೆಳೆಯಬಹುದು. ಹೀಗಾಗಿ ಪ್ರತಿಯೊಬ್ಬರ ತುಳು ಭಾಷೆಯ ಕುರಿತು ಆಸಕ್ತಿ ವಹಿಸಿ ತೊಡಗಿಸಿಕೊಂಡಾಗ ಮಾತ್ರ ತುಳು ಭಾಷೆ, ಪತ್ರಿಕೆಗಳು ಬೆಳೆಯಲು ಸಾಧ್ಯ ಎಂದರು. ೧-೧೦ತರಗತಿ ತನಕ ತುಳು ಪಠ್ಯ ರಚನೆಯಾದ ಸಂದರ್ಭದಲ್ಲಿ ಉಡುಪಿ ಹಾಗೂ ದ.ಕ ಜಿಲ್ಲೆಯ ಸುಮಾರು ೬೦ ಶಿಕ್ಷಕರು ಸಹಕರಿಸಿದ್ದರೂ ಆ ಶಿಕ್ಷಕರ ಶಾಲೆಗಳಲ್ಲಿಯೇ ಅನುಷ್ಟಾನ ಆಗಿಲ್ಲ. ಪುತ್ತೂರು ತಾಲೂಕಿನ ಸುಮಾರು ೬೦ಶಾಲೆಗಳಲ್ಲಿ ತುಳು ಕಲಿಸುವ ಕಾರ್ಯ ನಡೆದಿದ್ದು ಪ್ರಥಮ ಸ್ಥಾನ ಪಡೆದಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಪತ್ರಿಕೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳಷ್ಟು ಜವಾಬ್ದಾರಿಯುತ ಸ್ಥಾನದಲ್ಲಿದೆ. ದೇಶದ ಅಭಿವೃದ್ಧಿ, ಆರ್ಥಿಕ ಬೆಳವಣಿಗೆಗೆ ಅವುಗಳ ಕಾರ್ಯ ಪ್ರಮುಖವಾಗಿದೆ. ಕಳೆದ ಹಲವು ವರ್ಷಗಳಿಂದ ಪೂವರಿ ಪತ್ರಿಕೆ ಮೂಲಕ ವಿಜಯಕುಮಾರ್‌ರವರು ತುಳುವಿನ ಮಹತ್ವವನ್ನು ತಿಳಿಸುವ ಕಾರ್ಯವನ್ನು ಶ್ಲಾಘಿಸಿದರು. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮವು ಆ.೮ರಂದು ನಡೆಯಲಿದೆ. ಇದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ೫೯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನವು ೩೨ನೇ ಕಾರ್ಯಕ್ರಮವಾಗಿದೆ. ಮೇ.೨ರಂದು ತುಳು ಸಮ್ಮೇಳನವು ಬಹಳಷ್ಟು ಅದ್ದೂರಿಯಾಗಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಸ್ವಾಮಿಜಿಯವರನ್ನು ಗೌರವಿಸುವ ಕಾರ್ಯಕ್ರಮವು ನಡೆಯಲಿದ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ತುಳುವಿನಲ್ಲಿ ಹಲವು ತುಳು ಪತ್ರಿಕೆಗಳು ಮೂಡಿಬಂದಿದೆ. ಅದರ ವಿಚಾರಗಳು ಜನತೆಗೆ ತಿಳಿಯವಬೇಕು. ಅವುಗಳ ಪಟ್ಟ ಕಷ್ಟ ತಿಳಿಯಬೇಕು. ಮುಂದೆ ತುಳು ಪತ್ರಿಕೆಗಳು ಬೆಳೆಯಬೇಕು ಎಂಬ ದೊಡ್ಡ ಉದ್ದೇಶದಿಂದ ಸಮ್ಮೇಲನ ಆಯೋಜಿಸಲಾಗಿದೆ. ತುಳು ಪತ್ರಿಕೆ ಪ್ರಾರಂಬಿಸಿದ ಮಹನೀಯರನ್ನು ಗೌರವಿಸುವುದು, ಪತ್ರಿಕೆ ನಡೆಸಲು ಮುಂದಿರುವ ಸವಾಲುಗಳು ಕುರಿತು ಪ್ರಚುರಪಡಿಸುವುದೇ ಪ್ರಮುಖ ಉದ್ದೇಶವಾಗಿದೆ. ತುಳುನಾಡು ಮಾತ್ರವಲ್ಲದೆ ಬೆಂಗಳೂರು, ಮುಂಬಯಿಯಲ್ಲಿರುವ ತುಳುವರನ್ನು ಸೇರಿಸಿಕೊಂಡು ರಾಷ್ಟ್ರೀಯ ಸಮ್ಮಿಳನ ನಡೆಸಲಾಗಿದೆ ಎಂದರು. ಈ ಸಮ್ಮೇಳನವು ತುಳುವಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪೂವರಿ ಪತ್ರಿಕಾ ಸಂಪಾದಕ ವಿಜಯ ಕುಮಾರ್ ಭಂಡಾರಿಯವರ ಕನಸಿನ ಕೂಸಾಗಿದೆ ಎಂದರು. ಒಡಿಯೂರು ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತುಳು ಭಜನೆ:
ಕಾರ್ಯಕ್ರಮದ ಪ್ರಾರಂಭದಲ್ಲಿ ತುಳು ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನ್ಯಾಯವಾದಿ ಮಹೇಶ್ ಕಜೆ ಉದ್ಘಾಟಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಉಪಸ್ಥಿತರಿದ್ದರು. ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಘಟಕದ ರಂಗದೀಪ ಭಜನಾ ತಂಡದಿಂದ ಭಜನೆ ನಡೆಯಿತು.

ವಿಶೇಷ ಸಂಚಿಕೆ ಬಿಡುಗಡೆ:
ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ವಿಶೇಷ ಸಂಚಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ ಬಿಡುಗಡೆ ಮಾಡಿದರು.

ತುಳು ಪತ್ರಿಕೆಗಳ ಪ್ರದರ್ಶನ:
ತುಳು ಭಾಷೆಯಲ್ಲಿ ಪ್ರಕಟಗೊಂಡಿದ್ದ ಹಲವು ಪತ್ರಿಕೆಗಳ ಪ್ರದರ್ಶನವು ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದು ಈ ಕಾರ್ಯಕ್ರಮಗಳಿಗೆ ಸಾಧ್ವಿ ಮಾತಾನಂದಮಯೀಯವರು ಹೂ, ಅಕ್ಕಿ ಕಾಲುಗಳನ್ನು ಹಾಕಿ ಚಾಲನೆ ನೀಡಿದರು.

ಮಲ್ಲಿಕಾ ಜೆ. ರೈ ಪ್ರಾರ್ಥಿಸಿದರು. ಶಿಕ್ಷಕಿ ದೇವಕಿ ಸ್ವಾಗತಿಸಿದರು. ಪೂವರಿ ಪತ್ರಿಕೆ ಸಂಪಾದಕ ವಿಜಯ ಕುಮಾರ್ ಭಂಡಾರಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ನಗರ ಸಭಾ ಮಾಜಿ ಸದಸ್ಯ ರಾಜೇಶ್ ಬನ್ನೂರು ವಂದಿಸಿದರು. ಗಾಯತ್ರಿ ವಿಜಯ ಕುಮಾರ್ ಭಂಡಾರಿ, ಪುರಂದರ ಶೆಟ್ಟಿ, ಪುರಂದರ ಶೆಟ್ಟಿ, ವಿದ್ಯಾಶ್ರೀ, ಉಳ್ಳಾಲ್, ಷಷ್ಠ್ಯಬ್ದ ಸಂಭ್ರಮ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ, ಕಲಾವಿದ ಕೃಷ್ಣಪ್ಪ, ಜಯಪ್ರಕಾಶ್ ರೈ ನೂಜಿಬೈಲು ಅತಿಥಿಗಳಿಗೆ ಶಾಲು ಹಾಕಿ, ತಾಂಬೂಲ ನೀಡಿ ಗೌರವಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.