HomePage_Banner
HomePage_Banner
HomePage_Banner
HomePage_Banner

ಎ.3: ನಾಟ್ಯರಂಜಿನಿ ಕಲಾಲಯ ಟ್ರಸ್ಟ್‌ನಿಂದ 15ನೇ ವಾರ್ಷಿಕ ನೃತ್ಯ ಸಮಾರಂಭ

ಪುತ್ತೂರು: ನಾಟ್ಯರಂಜಿನಿ ಕಲಾಲಯ ಟ್ರಸ್ಟ್ ಪುತ್ತೂರು ಇದರ 15ನೇ ವಾರ್ಷಿಕ ನೃತ್ಯ ಸಮಾರಂಭವು ಎ.3 ರಂದು ಮುಕ್ರಂಪಾಡಿ ಸುಭದ್ರ ಕಲಾಮಂದಿರದ ಸಭಾಂಗಣದಲ್ಲಿ ಸಂಜೆ ಜರಗಲಿದೆ.

ಮುಖ್ಯ ಅಭ್ಯಾಗತರಾಗಿ ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಇದರ ವ್ಯವಸ್ಥಾಪಕ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆರವರು ಭಾಗವಹಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ಪುತ್ತೂರು ಕನ್ಸ್‌ಟ್ರಕ್ಷನ್ ಇಂಜಿನಿಯರ್ ಎ.ವಿ ನಾರಾಯಣ, ನೋಟರಿ ವಕೀಲರಾದ ಚಿದಾನಂದ ಬೈಲಾಡಿ, ನ್ಯಾಯವಾದಿ ಸಂಜಯರವರು ಭಾಗವಹಿಸಲಿದ್ದಾರೆ.
ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ ಪ್ರಮೀಳ ಉದಯಶಂಕರ್‌ರವರ ವಿದ್ಯಾರ್ಥಿಗಳಿಂದ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ ಮತ್ತು ಕೇರಳನಡನಂ ನೃತ್ಯ ಕಾರ್ಯಕ್ರಮ ಜರಗಲಿದ್ದು, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣ ಆಚಾರ್ಯ ನರಿಕೊಂಬು, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ, ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ ಆಚಾರ್ಯ ಉಡುಪಿ ಪಾಡಿಗಾರ್‌ರವರು ಸಹಕರಿಸಲಿದ್ದಾರೆ.

ಕಾರ್ಯಕ್ರಮವು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ ಎಂದು ನಾಟ್ಯರಂಜಿನಿ ಕಲಾಲಯ ಟ್ರಸ್ಟ್ ಅಧ್ಯಕ್ಷ ನಾರಾಯಣ ಎಂ.ಕಾಸರಗೋಡು, ಕಾರ್ಯದರ್ಶಿ ಹಾಗೂ ನಿರ್ದೇಶಕಿ ಪ್ರಮೀಳ ಉದಯಶಂಕರ್ ಎಂಎಫ್‌ಎ, ಚೆನ್ನೈರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.