HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಪೊಲೀಸ್ ಠಾಣಾ ಕಾನ್ಸ್ ಟೇಬಲ್ ಪ್ರವೀಣ್ ರೈ ಪಾಲ್ತಾಡಿರವರಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಪದಕ ಪ್ರದಾನ

ಪುತ್ತೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಣೆಯನ್ನು ಗುರುತಿಸಿ ಸರಕಾರ ನೀಡುವ ೨೦೨೦ನೇ ಸಾಲಿನ  ಮುಖ್ಯಮಂತ್ರಿ ಪದಕಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣಾ ಕಾನ್ಸ್ ಟೇಬಲ್ ಪ್ರವೀಣ್ ರೈ ಪಾಲ್ತಾಡಿ  ರವರು ಆಯ್ಕೆಯಾಗಿದ್ದು, ಅವರಿಗೆ  ಬೆಂಗಳೂರಿನ ಕೋರಂಗಲದಲ್ಲಿರುವ  ಕೆ.ಎಸ್.ಆರ್.ಪಿ ಮೂರನೇ ಬೆಟಾಲಿಯನ್ ನಲ್ಲಿ ಎ.೨ರಂದು ನಡೆದ  ಪೊಲೀಸ್ ಧ್ವಜ ದಿನಾಚರಣೆಯಂದು ಮುಖ್ಯ ಮಂತ್ರಿ ಯಡಿಯೂರಪ್ಪರವರು ಪದಕ  ಪ್ರದಾನ ಮಾಡಿದರು.  ಗ್ರಹ ಮಂತ್ರಿ ಬಸವರಾಜ್ ಬೊಮ್ಮಾಯಿ, ಗ್ರಹಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ ೧೨೮ ಸಿಬಂದಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಪ್ರವೀಣ್ ರೈಯವರು ೨೦೦೮ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದು, ಪ್ರಸ್ತುತ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಜಿಲ್ಲಾ ಅಪರಾಧ ಪತ್ತೆದಳದಲ್ಲಿ ಸೇವೆ ಸಲ್ಲಿಸಿದ್ದು ಜಿಲ್ಲೆಯಲ್ಲಿ ನಡೆದಂತಹ ಅನೇಕ ದರೋಡೆ, ಕೊಲೆ, ಕಳ್ಳತನ, ಕಮ್ಯೂನಲ್ ಗಲಾಟೆಗಳ ಸಂದರ್ಭಗಳಲ್ಲಿ ಆರೋಪಿಗಳ ಪತ್ತೆಯಲ್ಲಿ ತನಿಖಾಧಿಕಾರಿಗಳಿಗೆ ಸಹಕರಿಸಿದ್ದರು. ವಿಟ್ಲ ಪೊಲೀಸ್ ಠಾಣೆಯಲ್ಲಿರುವಾಗ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಆರೋಪಿಗಳ ಬಂಧನ,ಆಸೀಫ್ ಕೊಲೆ ಪ್ರಕರಣ ಮತ್ತು ವಿಟ್ಲ ಪೇಟೆಯಲ್ಲಿ ನಡೆದ ಸುಭಾಷ್ ನಾಯ್ಕ ರವರ ದರೋಡೆ ಪ್ರಕರಣ, ಕನ್ಯಾನದಲ್ಲಿ ಗಾಂಜಾ ಪ್ರಕರಣ ಪತ್ತೆ ಮತ್ತು ಅಂತರಾಜ್ಯ ವಾಹನ ಕಳ್ಳರನ್ನು ಪತ್ತೆ ಮಾಡಿ 12 ಮೊಟಾರು ಸೈಕಲ್ ಮತ್ತು ೭ ಪಿಕಪ್ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದರು. ಜಿಲ್ಲಾದ್ಯಂತ ನಡೆದಂತ ದೇವಸ್ಥಾನ ಕಳ್ಳತನ ಪ್ರಕರಣ ಪತ್ತೆ ಮಾಡಿ ಸುಮಾರು 40 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬೆಳ್ಳಾರೆ ಪೊಲೀಸ್  ಠಾಣಾ ವ್ಯಾಪ್ತಿಯ ಇಸ್ಮಾಯಿಲ್ ಕೊಲೆ ಪ್ರಕರಣ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜ ಪಂಬೆತ್ತಾಡಿ ಗೋವಿಂದ ಭಟ್ ರವರ ಕೊಲೆ ಪ್ರಕರಣ ಹಾಗೆಯೇ ಇತ್ತಿಚೆಗೆ ಸುಳ್ಯದಲ್ಲಿ ನಡೆದ ಸಂಪತ್ ಕುಮಾರ್ ಕೊಲೆ ಪ್ರಕರಣ, ಇಚಿಲಂಪಾಡಿ, ಧರ್ಮಸ್ಥಳ ಹಾಗೂ ಪುತ್ತೂರಿನ ಕೆದಿಲದಲ್ಲಿ ನಡೆದಂತಹ ಮನೆ ದರೋಡೆ ಪ್ರಕರಣದ ಆರೋಪಿಗಳನ್ನು ಕೇರಳದ ತ್ರಿಶೂರ್ ನಿಂದ ಬಂಧಿಸಿ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ತನಿಖಾಧಿಕಾರಿಯವರಿಗೆ ಸಹಕಾರ ನೀಡಿದ್ದರು.  ಉಪ್ಪಿನಂಗಡಿ ಪೇಟೆಯಲ್ಲಿರುವ ಆರ್ ಕೆ ಜ್ಯುವೆಲ್ಲರ್ಸ್ ದರೋಡೆ ಪ್ರಕರಣದ ಆರೋಪಿಗಳನ್ನು ಗುಜರಾತ್ ಮತ್ತು ರಾಜಸ್ಥಾನದಿಂದ ಬಂಧಿಸಿ ಸುಮಾರು 20 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಳ್ಳುವಲ್ಲಿ ಹಾಗೂ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಉನ್ನಿ ಕೃಷ್ಣನ್ ಕೊಲೆ ಪ್ರಕರಣ ಹಾಗೂ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ 20 ಕೆಜಿ ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ, ಬಂಟ್ವಾಳದಲ್ಲಿ ನಡೆದ ಸುರೇಂದ್ರ ಬಂಟ್ವಾಳ ಇವರ ಕೊಲೆ ಪ್ರಕರಣ ಮತ್ತು ಚೆನ್ನ ಫಾರೂಖ್ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ, ಹಾಗೆಯೇ ಇತ್ತೀಚಿಗೆ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತಹ ಬೆಳ್ತಂಗಡಿಯ ಉಜಿರೆಯ ಮಗು ಅಪಹರಣ ಪ್ರಕರಣವನ್ನು ಬೇಧಿಸುವಲ್ಲಿ ತನಿಖಾ ತಂಡಕ್ಕೆ ಸಹಕಾರಿಯಾಗಿದ್ದರು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಹಲವಾರು ಪ್ರಕರಣಗಳನ್ನು ಬೇಧಿಸುವಲ್ಲಿ ಇಲಾಖೆಗೆ ಸಹಕಾರ ನೀಡಿದ್ದರು.  ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಘೋರ ಅಪರಾಧ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜಿಲ್ಲಾ ಅಧೀಕ್ಷಕರ ವಿಶೇಷ ತಂಡದಲ್ಲಿ ಪ್ರವೀಣ್ ರೈ ರವರು ಕಾರ್ಯ ನಿರ್ವಹಿಸುತ್ತಿದ್ದರು. ಇಂತಹ ಅನೇಕ ಉತ್ತಮ ಕಾರ್ಯಗಳನ್ನು ಗುರುತಿಸಿ ಮುಖ್ಯ ಮಂತ್ರಿಪದಕಕ್ಕೆ ಉನ್ನತ ಅಧಿಕಾರಿಗಳು ಇವರ ಹೆಸರನ್ನು ಶಿಫಾರಸ್ಸು ಮಾಡಿದ್ದರು.
ಪ್ರವೀಣ್ ರೈಯವರಿಗೆ  13 ವರ್ಷಗಳಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ 30 ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ, ಪಶ್ಚಿಮ ವಲಯ ಐಜಿಪಿ ಯವರಿಂದ 3 ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ, ವಿವಿಧ ಸಂಘಸಂಸ್ಥೆ ಹಾಗೂ  ಸಾರ್ವಜನಿರಿಂದ 15 ಕ್ಕಿಂತಲೂ ಹೆಚ್ಚು ಕಡೆಗಳಲ್ಲಿ ಸನ್ಮಾನ ಪಡೆದಿರುತ್ತಾರೆ.
ಪ್ರವೀಣ್‌ ರೈ ಪಿ.ಎಂ.ರವರು ಪುತ್ತೂರು ತಾಲೂಕು ಪಾಲ್ತಾಡಿ ಗ್ರಾಮದ ನಡುಕೂಟೇಲು  ವಿಶ್ವನಾಥ ರೈ ಹಾಗೂ ಲೀಲಾವತಿ ದಂಪತಿಗಳ ಪುತ್ರರಾಗಿದ್ದು, ಪತ್ನಿ ಪಿ.ಎ.ಕಾಲೇಜಿನ ಉಪನ್ಯಾಸಕಿಯಾಗಿರುವ ದೀಪ ಹಾಗೂ ಪುತ್ರ ಮಾಸ್ಟರ್ ಮನ್ವಿಕ್ ರೊಂದಿಗೆ ವಾಸವಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.