HomePage_Banner
HomePage_Banner
HomePage_Banner
HomePage_Banner

ಅಡ್ಡಹೊಳೆ: ಮಹಿಳಾ ದಿನಾಚರಣೆ, ಮಾಹಿತಿ ಕಾರ್ಯಕ್ರಮ

ನೆಲ್ಯಾಡಿ: ಡಿಕೆಆರ್‌ಡಿಎಸ್ ಬೆಳ್ತಂಗಡಿ, ಅಕ್ಷಯ ಮಹಾಸಂಘ ಶಿರಾಡಿ ಹಾಗೂ ಸೈಂಟ್ ಜೋಸೆಫ್ ಕ್ರೆಡಿಟ್ ಯೂನಿಯನ್ ಅಡ್ಡಹೊಳೆ ಇವುಗಳ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಾಹಿತಿ ಕಾರ್ಯಕ್ರಮ ಅಡ್ಡಹೊಳೆ ಸೈಂಟ್ ಜೋಸೆಫ್ ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಅಕ್ಷಯ ಮಹಾಸಂಘದ ಅಧ್ಯಕ್ಷೆ ಬಿಂದುಸನ್ನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಡ್ಡಹೊಳೆ ಸೈಂಟ್ ಜೋಸೆಫ್ ಚರ್ಚ್‌ನ ಧರ್ಮಗುರು ಫಾ.ಮನೋಜ್‌ರವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಡಿಕೆಆರ್‌ಡಿಎಸ್‌ನ ಬೆಳ್ತಂಗಡಿಯ ನಿರ್ದೇಶಕ ಫಾ.ಬಿನೋಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್, ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಅಡ್ಡಹೊಳೆ ಸೈಂಟ್ ಜೋಸೆಫ್ ಕ್ರೆಡಿಟ್‌ಯೂನಿಯನ್ ಅಧ್ಯಕ್ಷ ಜೋರ್ಜ್ ಉಪಸ್ಥಿತರಿದ್ದರು. ದೀಪಿ ಸ್ವಾಗತಿಸಿ, ಲಾಲಿ ವಂದಿಸಿದರು. ಡಿಕೆಆರ್‌ಡಿಎಸ್‌ನ ಸಂಯೋಜಕಿ ಶುಭ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತೆ ಎಲ್ಸಿ ತೋಮಸ್ ಸಹಕರಿಸಿದರು. ಮಹಾಸಂಘದ ಸದಸ್ಯರು ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ತಾ.ಪಂ.ಸದಸ್ಯರಿಗೆ ಹಾಗೂ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.