HomePage_Banner
HomePage_Banner
HomePage_Banner
HomePage_Banner

ಪುತ್ತೂರು ಬಿಲ್ಲವ ಸಂಘದಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾದವರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಪ್ಪಳಿಗೆ-ಪುತ್ತೂರು ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸಭಾಭವನದಲ್ಲಿ ಮಾ.೨೮ ರಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾದವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.

ಕಲ್ಲೇಗ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಧವ ಪೂಜಾರಿ ವಿಟ್ಲ, ಕೆಯ್ಯೂರು ದುರ್ಗಾಪರಮೇಶ್ವರಿ ಮಹಿಷಮರ್ಧಿನಿ ದೇವಸ್ಥಾನದ ಪದ್ಮನಾಭ ಪೂಜಾರಿ ಪಲ್ಲತ್ತಡ್ಕ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಪಿ.ಆನಂದ ಪೂಜಾರಿ, ಕೊಡಿಪ್ಪಾಡಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಭಾ ಸುರೇಶ್ ಅಂಚನ್, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ಚಂದಪ್ಪ ಪೂಜಾರಿ ಕುಂಜೂರು, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನಾರಾಯಣ ಪೂಜಾರಿ ನೆಕ್ಕರೆ, ಕೋಡಿಂಬಾಡಿ ಶ್ರೀ ಮಹಿಷಮಧಿನಿ ದೇವಸ್ಥಾನದ ಜಯನಾಂದ ಕೋಡಿಂಬಾಡಿ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರತಿ ರಮೇಶ್ ಪೂಜಾರಿ ಮುಂಡ್ಯ, ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕೃಷ್ಣ ಸಾಲಿಯಾನ್, ಶಾಂತಿಗೋಡು ಶ್ರೀ ಶಾಸ್ತಾವು ದೇವಸ್ಥಾನದ ಶಚೀಂದ್ರ ಬೊಳ್ಳೆಕ್ಕು, ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಗೌರಿ ಹೊನ್ನಪ್ಪ ಪೂಜಾರಿ, ಮುಂಡೂರು ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಚಂದ್ರಶೇಖರ ಎನ್.ಎಸ್.ಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶೇಖರ್ ನಾರಾವಿ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೊನ್ನಪ್ಪ ಪೂಜಾರಿ ಪಿಲಿಪಂಜರ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ದೇವಸ್ಥಾನದ ಶಶಿಧರ್ ಕಿನ್ನಿಮಜಲು, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಭಾರತಿ ಸಾಂತಪ್ಪ ಪೂಜಾರಿ, ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಲಕ್ಷ್ಮಣ ಪೂಜಾರಿ ಬೈಲಾಡಿ, ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಸುಮಿತ್ರ ಯು.ಕೆ, ಶಾಂತಿಗೋಡು ಶ್ರೀ ಶಾಸ್ತಾವು ದೇವಸ್ಥಾನದ ಶ್ರೀಧರ ಪೂಜಾರಿ ಕೊಡೆಂಕೀರಿ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಂಜುಳಾ ಕೆ.ಸಿರವರನ್ನು ಅಭಿನಂದಿಸಲಾಯಿತು.

ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, ಕೋಶಾಧಿಕಾರಿ ನಾಗೇಶ್ ಬಲ್ನಾಡು, ಜೊತೆ ಕಾರ್ಯದರ್ಶಿ ಜಯಂತ್ ಕೆಂಗುಡೇಲು, ಉಪಾಧ್ಯಕ್ಷರಾದ ಡಾ.ಸದಾನಂದ ಕುಂದರ್ ಹಾಗೂ ವಿನಯ ವಸಂತ್, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಕಾರ್ಯನಿರ್ವಹಣಾಧಿಕಾರಿ ಆರ್.ಸಿ ನಾರಾಯಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.