HomePage_Banner
HomePage_Banner
HomePage_Banner
HomePage_Banner

ಸೌತಡ್ಕ ತುಕ್ರಪ್ಪ ಶೆಟ್ಟಿಯವರ ಮನೆ ದರೋಡೆ ಸೇರಿ ವಿವಿಧ ಕಳ್ಳತನ, ದರೋಡೆ ಪ್ರಕರಣದ 9 ಆರೋಪಿಗಳ ಸೆರೆ

  •  ೩೨.೨೨ ಲಕ್ಷ ರೂ.ಮೌಲ್ಯದ ಸೊತ್ತು,
  • ತಲವಾರು ಸಹಿತ ಮಾರಕಾಸ್ತ್ರಗಳು ವಶಕ್ಕೆ
  •  ಜೈಲುವಾಸ ಸಂದರ್ಭ ಸಂಪರ್ಕಕ್ಕೆ ಬಂದು ತಂಡಗಳ ರೂಪದಲ್ಲಿ ಕೃತ್ಯ
  • ಗಾಂಜಾ ವ್ಯಸನಿಗಳಾಗಿದ್ದು ಶೋಕಿ ಜೀವನಕ್ಕಾಗಿ ಕೃತ್ಯ

ನೆಲ್ಯಾಡಿ:ಮೂರು ತಿಂಗಳ ಹಿಂದೆ ನಡೆದ ಸೌತಡ್ಕ ತುಕ್ರಪ್ಪ ಶೆಟ್ಟಿಯವರ ಮನೆ ದರೋಡೆ ಸೇರಿ ದ.ಕ.ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಮನೆ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿ ೯ ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.


ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಮತ್ತವರ ತಂಡ ಎ.೧ರಂದು ಅಬ್ದುಲ್ ರವೂಫ್(೨೪ವ.), ರಾಮಮೂರ್ತಿ(೨೩ವ.)ಎಂಬವರನ್ನು ಬಂಧಿಸಿದ್ದರು.ಎ.೨ರಂದು ಅಶ್ರಫ್ ಪೆರಾಡಿ(೨೭ವ.), ಸಂತೋಷ್(೨೪ವ.),ನವೀದ್(೩೬ವ.),ರಮಾನಂದ ಎನ್.ಶೆಟ್ಟಿ(೪೮ವ.),ಸುಮನ್(೨೪ವ.), ಸಿದ್ದೀಕ್(೨೭ವ.), ಅಲಿಕೋಯ ಎಂಬವರನ್ನು ಬಂಧಿಸಲಾಗಿದ್ದು ಇವರೆಲ್ಲರ ವಿರುದ್ಧ ದ.ಕ.ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.ಈ ಆರೋಪಿಗಳು ಮೂರ‍್ನಾಲ್ಕು ತಂಡಗಳೊಂದಿಗೆ ಕಾರ್ಯಾಚರಿಸುತ್ತಿದ್ದರು ಎಂದು ಶಶಿಕುಮಾರ್ ತಿಳಿಸಿದ್ದಾರೆ. ಬಂಧಿತರಿಂದ ಇನ್ನೋವಾ ಕಾರು, ಟಾಟಾ ಜೆಸ್ಟ್ ಕಾರು, ಮಾರುತಿ ಕಾರು, ಆಟೋರಿಕ್ಷಾ, ೧೧ ಮೊಬೈಲ್‌ಗಳು, ೪ ದ್ವಿಚಕ್ರ ವಾಹನ, ಒಂದು ಏರ್‌ಗನ್, ಚಿನ್ನದಂತಿರುವ ಒಡವೆಗಳು ಸೇರಿದಂತೆ ಒಟ್ಟು ೩೨.೨೨ ಲಕ್ಷ ರೂ.,ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದಲ್ಲದೆ ಆರೋಪಿಗಳಿಂದ ೨ ತಲವಾರುಗಳು, ಕಬ್ಬಿಣದ ರಾಡು, ಉದ್ದನೆಯ ಚಾಕು, ಒಂದು ಪ್ಯಾಕೆಟ್ ಖಾರದ ಹುಡಿ, ಮರದ ದೊಣ್ಣೆಯಂತಹ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಇನ್ನೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಾಲ್ವರು ಪ್ರಮುಖ ಆರೋಪಿಗಳು ಸೇರಿದಂತೆ ಇನ್ನೂ ೧೫ಕ್ಕೂ ಹೆಚ್ಚು ಆರೋಪಿಗಳು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು ಆರೋಪಿಗಳಿಗೆ ಕೃತ್ಯವೆಸಗಲು ವಾಹನ ನೀಡಿದವರು, ಹಣಕಾಸಿನ ಸಹಾಯ ನೀಡಿದವರು, ಸಂಚು ರೂಪಿಸಲು ಭಾಗಿಯಾದವರು ಹಾಗೂ ತಲೆಮರೆಸಿಕೊಳ್ಳಲು ಆಶ್ರಯ ನೀಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.ಕಾಫಿ ಎಸ್ಟೇಟ್, ಫಾರಂಗಳು, ಅಡಿಕೆ ಗೋದಾಮುಗಳ ಮಾಹಿತಿಯನ್ನು ಕಲೆಹಾಕಿ ರಾತ್ರಿ ಹೊತ್ತು ದಾಳಿ ನಡೆಸಿ ದರೋಡೆ ಕೃತ್ಯ ನಡೆಸುತ್ತಿದ್ದರು. ಬಂಧಿತರು ಶೋಕಿ ಜೀವನದ ಜೊತೆಗೆ ಗಾಂಜಾ ವ್ಯಸನಿಗಳೂ ಆಗಿದ್ದು ವಿವಿಧ ಜಿಲ್ಲೆಗಳಲ್ಲಿ ಈ ಆರೋಪಿಗಳು ಜೈಲುವಾಸ ಹಾಗೂ ವಿವಿಧ ರೀತಿಯ ಕಾರ್ಯಾಚರಣೆಯ ವೇಳೆ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬಂದು ತಂಡಗಳ ರೂಪದಲ್ಲಿ ಈ ಕೃತ್ಯ ಎಸಗುತ್ತಿರುವುದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಕಮೀಷನರ್ ಎನ್.ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ವಿನಯ್ ಗಾಂವ್ಕರ್, ಎಸಿಪಿ ಮಹೇಶ್ ಕುಮಾರ್ ಉಪಸ್ಥಿತರಿದ್ದರು.

ಚಿನ್ನ, ನಗದು  ಲೂಟಿ: ಸೌತಡ್ಕ ಸಮೀಪ ಕೌಕ್ರಾಡಿ ಗ್ರಾಮದ ನೂಜೆ ನಿವಾಸಿ, ವಿಶ್ವಹಿಂದೂ ಪರಿಷತ್ ಮುಖಂಡ, ಪ್ರಗತಿಪರ ಕೃಷಿಕರೂ ಆಗಿರುವ ನೂಜೆ ತುಕ್ರಪ್ಪ ಶೆಟ್ಟಿ ಅವರ ಮನೆಗೆ ಡಿ.೨೦ರ ರಾತ್ರಿ ೧.೩೦ರ ವೇಳೆಗೆ ನುಗ್ಗಿದ ದರೋಡೆಕೋರರ ತಂಡ ತುಕ್ರಪ್ಪ ಶೆಟ್ಟಿಯವರ ಮೇಲೆ ಹಲ್ಲೆ ನಡೆಸಿ ದೂಡಿಹಾಕಿ ಅವರ ಪತ್ನಿಗೆ ಚೂರಿ ಇರಿದು ಮನೆಯಲ್ಲಿದ್ದ ನಗದು, ಚಿನ್ನಾಭರಣ ಲೂಟಿಗೈದು ಪರಾರಿಯಾಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.