ಪುತ್ತೂರು: ಕಂಪು ಕಂಪೆನಿ ವತಿಯಿಂದ ಹಾಸನ ಜಿಲ್ಲೆಯ ಅರಕಲಗೂಡಿನ ಮೆಕ್ಯಾನಿಕಲ್ ಇಂಜಿನಿಯರ್ ಬಾಲಸುಬ್ರಹ್ಮಣ್ಯ ಮತ್ತು ತಂಡದವರಿಂದ ಹೈಟೆಕ್ ದೋಟಿ/ಕೊಕ್ಕೆ ಬಳಸಿ ಅಡಿಕೆ ಕೊಯ್ಲು ಮತ್ತು ಅಡಿಕೆಗೆ ಔಷಧಿ ಸಿಂಪಡಣೆಯ ಮಾಹಿತಿ ಮತ್ತು ಪ್ರಾತ್ಯಕ್ಷತೆಯು ಎ.5ರಂದು ಸಂಜೆ 4.30 ರಿಂದ 6.0 ಗಂಟೆಯವರೆಗೆ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ನಡೆಯಲಿದೆ.
ಪ್ರಾತ್ಯಕ್ಷತೆಯ ಪ್ರಯೋಜನಗಳು:
೧. ನೆಲದಿಂದಲೇ ಹೈಟೆಕ್ ದೋಟಿಯಿಂದ 60ರಿಂದ 80 ಅಡಿ ಮೇಲಿರುವ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಣೆ.
೨. ಲೋನ್ ಸೌಲಭ್ಯದ ಬಗ್ಗೆ ಮಾಹಿತಿ , ಅತ್ಯಾಧುನಿಕ ಬ್ಯಾಟರಿ ಸ್ಪ್ರೇಯರ್ ಗಳ ಪ್ರಾತ್ಯಕ್ಷತೆ.
೩. ಅಡಿಕೆ ಮರಗಳಿಗೆ ಹಬ್ಬಿರುವ ಕಾಳುಮೆಣಸಿನ ಬಳ್ಳಿಗಳಿಗೆ ಹಾನಿಯಾಗದಂತೆ ಅಡಿಕೆ ಕೊಯ್ಲು ಮಾಡುವ ವಿಧಾನ. ೪. ದೋಟಿಯಿಂದ ಕೊಯ್ಲು ಮಾಡಿದ ಅಡಿಕೆ ನೆಲಕ್ಕೆ ಬೀಳದಂತೆ ಹಿಡಿಯುವ ವಿಧಾನ. ೫. ಪರಿಣಾಮಕಾರಿಯಾಗಿ ಔಷಧಿ ಸಿಂಪಡಣೆ ಮಾಡಿ ಕೊಳೆರೋಗದಿಂದ ಅಡಿಕೆ ಬೆಳೆಯ ರಕ್ಷಣೆ. ೬. ರೂಪಾಯಿ 20,000 ಸಾವಿರದಿಂದ 84,000 ಸಾವಿರ ಮೌಲ್ಯದ ಅತ್ಯುತ್ತಮ ಹೈಟೆಕ್ ದೋಟಿಗಳ ಮೂಲಕ ಕೊಯ್ಲು ಮತ್ತು ಔಷಧಿ ಸಿಂಪಡಣೆಯ ಆಯ್ಕೆ.
ಈ ಮೇಲೆ ತಿಳಿಸಿರುವ ಹೈಟೆಕ್ ದೋಟಿ ಬಳಸಿ ಕೊಯಿಲು ಮತ್ತು ಸಿಂಪಡಣೆ ನಿರ್ವಹಿಸುವಾಗ ಕೃಷಿಕರಿಗೆ ಆಗುವ ಉಳಿತಾಯ ಮಾನವ ಶ್ರಮದಲ್ಲಿ ಉಳಿತಾಯ ಜೊತೆಗೆ ಸಮಯದ ಉಳಿತಾಯವನ್ನು ಹೇಗೆ ಮಾಡಬಹುದು ತನ್ಮೂಲಕ ಕೃಷಿಕರು ತಮ್ಮ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಮಾಹಿತಿ ಮತ್ತು ಪ್ರಾತ್ಯಕ್ಷತೆ ಮೂಲಕ ತೋರಿಸಿ ಕೊಡಲಿದ್ದಾರೆ. ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕಾವು ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ತಿಳಿಸಿದ್ದಾರೆ.