HomePage_Banner
HomePage_Banner
HomePage_Banner
HomePage_Banner

ಪುಣ್ಚತ್ತಾರು-53ನೇ ವರ್ಷದ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ, ಸಾಂಸ್ಕೃತಿಕ ಕಾರ್ಯಕ್ರಮ


ಕಾಣಿಯೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನ ವಿಷ್ಣುಪುರ, ಪುಣ್ಚತ್ತಾರು ಇದರ ವತಿಯಿಂದ ಕಾಣಿಯೂರು ಗ್ರಾಮದ ಪುಣ್ಚತ್ತಾರು ಕರಿಮಜಲುವಿನ ವಿಷ್ಣುಪುರ ಎಂಬಲ್ಲಿ ೫೩ನೇ ವರ್ಷದ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಎ 3 ಮತ್ತು ಎ 4 ರಂದು ನಡೆಯಿತು. ಎ 3ರಂದು ಬೆಳಿಗ್ಗೆ ಗಣಹೋಮ, ಶ್ರೀ ದೇವರ ಶುದ್ಧೀಕರಣ, ಸಂಜೆ ಕರಿಮಜಲು ದೈವಸ್ಥಾನದಿಂದ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿಸ್ಪರ್ಷ, ಅನ್ನಸಂತರ್ಪಣೆ, ಕುಳಿಚ್ಚಾಟ, ಬಳಿಕ ಜೀವನ್ ಮಂಜೇಶ್ವರ ನಿರ್ಮಾಣದ ಮಂಜೇಶ್ವರ ಯಶಸ್ವಿ ಕಲಾವಿದರಿಂದ ದೂರ ದೀವೊಡ್ಚಿ ತುಳು ಹಾಸ್ಯಮಯ ನಾಟಕ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಎ ೪ರಂದು ಬೆಳಿಗ್ಗೆ ಅಗ್ನಿ ಪ್ರವೇಶ, ಮಾರಿಕಳ, ಗುಳಿಗ ಕೋಲ, ಪ್ರಸಾದ ವಿತರಣೆ, ಹರಕೆ ಒಪ್ಪಿಸುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರಾದ ವೆಂಕಟ್ರಮಣ ಆಚಾರ್ಯ ವಿಷ್ಣುಪುರ, ಜನಾರ್ದನ ಆಚಾರ್ಯ ವಿಷ್ಣುಪುರ, ಕೃಷ್ಣ ಆಚಾರ್ಯ ವಿಷ್ಣುಪುರ ಹಾಗೂ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಗಳ ಪದಾಧಿಕಾರಿಗಳು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.