ಸವಣೂರು: ಪಾಲ್ತಾಡಿ ಗ್ರಾಮದ ಪರಣೆ ಎಂಬಲ್ಲಿ ಮಿತ್ರಾ ಜೈನ್ ಬಂಬಿಲಗುತ್ತು ಅವರ ಮನೆಗೆ ನುಗ್ಗಿದ ಕಳ್ಳರು ನಗದು ಹಾಗೂ ಬೆಳ್ಳಿ ನಾಣ್ಯಗಳನ್ನು ಕಳವುಗೈದ ಬಗ್ಗೆ ಆದಿತ್ಯವಾರ ಬೆಳಕಿಗೆ ಬಂದಿದೆ.
ಪರಣೆಯಲ್ಲಿರುವ ಮಿತ್ರಾ ಜೈನ್ ಅವರ ಮನೆಗೆ ನುಗ್ಗಿದ ಕಳ್ಳರು ಮನೆಮಂದಿಯನ್ನು ಕೋಣೆಯೊಳಗೆ ಲಾಕ್ ಮಾಡಿ ನಗದು,ನಗ ದೋಚಿದ್ದಾರೆ.
ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು,ಮಿತ್ರಾ ಜೈನ್ ಹಾಗೂ ಅವರ ಪುತ್ರಿ ದಿವ್ಯ ಅವರು ಮಲಗಿದ್ದ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ ,ಇನ್ನೊಂದು ಕೋಣೆಯಲ್ಲಿದ್ದ ನಗದು,ಬೆಳ್ಳಿ ನಾಣ್ಯಗಳನ್ನು ದೋಚಿದ್ದಾರೆ. ಸ್ಥಳಕ್ಕೆ ಪುತ್ತೂರು ಎಎಸ್ಪಿ ಗಾನ, ಸುಳ್ಯ ಸಿಐ ನವೀನ್ ಚಂದ್ರ ಜೋಗಿ,ಬೆಳ್ಳಾರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.