HomePage_Banner
HomePage_Banner
HomePage_Banner
HomePage_Banner

ಪಡುಮಲೆ ಪೂರ್ವಭಾವಿ ಸಭೆ

  • 22 ರಂದು ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ
  • ಕೋಟಿ ಚೆನ್ನಯರ ಅಭಯ

ಬಡಗನ್ನೂರು: ಪಡುಮಲೆ ಅವಳಿ ವೀರ ಪುರುಷರ ಹಾಗೂ ಮಾತೆ ದೇಯಿಬೈದೇತಿ ಜನ್ಮಸ್ಥಳ ಪಡುಮಲೆ ಅಭಿವೃದ್ಧಿ ದೃಷ್ಟಿಯಿಂದ ಪ್ರಪ್ರಥಮ ಬಾರಿಗೆ ಸುಮಾರು 50೦ ವರ್ಷಗಳ ಹಿಂದೆ ಶ್ರೀ ಕೋಟಿ ಚೆನ್ನಯರು ಅರಾಧಿಸುತ್ತಾ ಬಂದಿರುವ ನಾಗ ಬಿರ್ಮೆರ್ , ನಾಗ, ದೇವರು, ರಕ್ತೇಶ್ವರಿ ಸಾನಿಧ್ಯ ಹಾಗೂ ಮಾತೆ ದೇಯಿಬೈದೇತಿ ಸಮಾಧಿ  ಜೀರ್ಣೋದ್ಧಾರ ಪ್ರತಿಷ್ಠಾ ಬ್ರಹ್ಮ ಕಲಶ ಕಾರ್ಯವು  

ಶ್ರೀ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಪಡುಮಲೆ ಇದರ ವತಿಯಿಂದ ಏಪ್ರಿಲ್ 22 , 23,ಮತ್ತು 24 ರಂದು ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು  ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ಏ 3 ರಂದು ಎರುಕೊಟ್ಯ ನಾಗ ಸಾನಿಧ್ಯ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ  ಆಮಂತ್ರಣ ಪತ್ರ ಹಂಚುವಿಕೆ  ಹಾಗೂ ಇತರ ವ್ಯವಸ್ಥೆ ಮತ್ತು ವಿವಿಧ ಸಮಿತಿಗೆ ನೀಡಿದ ಜವಾಬ್ದಾರಿ ಬಗ್ಗೆ ಚರ್ಚಿಸಲಾಯಿತು.   

ಏಪ್ರಿಲ್ 9 ರಂದು ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ತಿಕೆ ಹಂಚುವುದು.

 

22 ರಂದು ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ: 22 ರಂದು ಸಂಜೆ ಗಂ 4ಕ್ಕೆ  ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವಠಾರದಿಂದ ಹಸಿರುವಾಣಿ ಹೊರಕಾಣಿ ಮೆರವಣಿಗೆ ಉದ್ಘಾಟನೆಗೊಂಡು ಪುತ್ತೂರು ರಾಜ್ಯ ರಸ್ತೆ ಮೂಲಕ ಧರ್ಭೆ, ಸಂಟ್ಯಾರು,ಕುಂಬ್ರ, ಕೌಡಿಚ್ಚಾರ್  ಮೂಲಕ ಪಡುಮಲೆ ಎರುಕೊಟ್ಯ ನಾಗ ಸಾನಿಧ್ಯಕ್ಕೆ ಆಗಮಿಸಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ  ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ವಿನೋದ್ ಆಳ್ವ ಮೂಡಾಯೂರು,  ಗೌರವ ಅಧ್ಯಕ್ಷರಾದ  ಬಂಟ್ವಾಳ ಮಾಜಿ ಶಾಸಕ  ರುಕ್ಮಯ ಪೂಜಾರಿ, ಉಪಾಧ್ಯಕ್ಷ, ವಿಜಯ ಕುಮಾರ್ ಸೊರಕೆ  ಪ್ರಧಾನ ಕಾರ್ಯದರ್ಶಿ ಶ್ರೀಧರ ಪಟ್ಲ ಪುತ್ತೂರು, ಭಗೀರಥ ಜಿ ಬೆಳ್ತಂಗಡಿ,  ಶೈಲೇಶ್ ಕುಮಾರ್ ಕುರ್ತೋಡಿ ಬೆಳ್ತಂಗಡಿ, ರತನ್ ಕುಮಾರ್ ಕರ್ನೂರು ಗುತ್ತು,, ರತ್ನಾಕರ ನಾಯಿಕ್ ಪುತ್ತೂರು, ಚರಣ್ ಬೆಳ್ತಂಗಡಿ., ಸುರೇಶ್ ಚಂದ್ರ ಕೋಟ್ಯಾನ್ ರಂಜಿತ್ ಬರ್ಕೆ, ಮಂಗಳೂರು ಬೈಕಂಪ್ಪಾಡಿ ಗಣೇಶ ಇಂಜಿನಿಯರಿಂಗ್ ಇಂಡಸ್ಟ್ರಿ ಮಾಲಕ ಯತೀಶ್ ಚೆಲ್ಯಡ್ಕ, ಸೀತಾರಾಮ ರೈ ಕೆದಂಬಾಡಿ ಗುತ್ತು ಕೃಷ್ಣಪ್ಪ ಪೂಜಾರಿ ಕಲ್ಲಡ್ಕ,  ಬಿಜೆಪಿ ಹಿಂದೂಳಿದ ವರ್ಗ ಜಿಲ್ಲಾಧ್ಯಕ್ಷ ಪುರುಷೋತ್ತಮ,  ಬಿಜೆಪಿ ಜಿಲ್ಲಾಧ್ಯಕ್ಷ  ರಾಮ್ ದಾಸ್ ಬಂಟ್ವಾಳ,ಸುಧಾಕರ ಬೋಳುರು, ಜಿತೇಂದ್ರ ಜೆ ಸುವರ್ಣ ಮಂಗಳೂರು, ದಿವಾಕರ ಉರ್ವ, ವೆಂಕಟೇಶ್ ದಸ್ ಬೋಳೂರು ವೇಧನಾಥ ಸುವರ್ಣ ನರಿಮೂಗ್ರ , ಮುಕುಂದ ಎಂ ಎಸ್, ಜಿಕೆ ಸುವರ್ಣ ಗಣಸಿನಕುಮೆರು,  ಗುರುಪ್ರಸಾದ್ ರೈ ಕುದ್ಕಾಡಿ ಉಪಸ್ಥಿತರಿದ್ದರು.
ಕೋಟಿ ಚೆನ್ನಯರ ಅಭಯ: ಕೋಟಿ ಚೆನ್ನಯರು ಪಡುಮಲೆಗೆ ಬರುತ್ತಾರಾ ಎಂಬ ಪ್ರಶ್ನೆಗೆ ಎಣ್ಮೂರು ಬ್ರಹ್ಮಬೈದರ್ಕಳ ಗರಡಿ ನೇಮದ ಸಂದರ್ಭದಲ್ಲಿ ದೈವದ ನುಡಿ ಸಾಕ್ಷಿ.

ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಳ ಅಭಿವೃದ್ಧಿ ಪಡಿಸಿ ಲೋಕ ಸಮರ್ಪಣೆ ಮಾಡುವ ದೃಷ್ಟಿಯಿಂದ ಶ್ರೀ ದೈವಗಳ ಎದುರು ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪ್ರಾರ್ಥಿಸಿ ಮಾನವತ್ವದಿಂದ ದೈವತ್ವವನ್ನು ಸೇರಿದ ಬಳಿಕ ಯಾವುದೇ ಗಡಿ ಇರುವುದಿಲ್ಲ ನನ್ನ ನಂಬಿಕೆ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ  ಸುಮಾರು 256 ಗಡಿಗಳಲ್ಲಿ ತಮ್ಮ ಪಾದ ಸ್ಪರ್ಶ ಮಾಡಿ ಗಂಧ ಪ್ರಸಾದ ಆಗುತ್ತಿದೆ. ಆದರೆ ಪಡುಮಲೆ ಹುಟ್ಟಿ ಬೆಳೆದ ನಾಡು ಈ ಪ್ರದೇಶಕ್ಕೆ ತಮ್ಮ ಪಾದ ಸ್ಪರ್ಶ ಅಗುತ್ತದಾ ಎಂದು ಕೇಳಿದಾಗ  ದೈವಗಳು   ಕೊಡಿ ಬಾಲೆ ಎಲೆಯನ್ನು ಹರಿಕೃಷ್ಣ ಬಂಟ್ವಾಳ ಇವರಲ್ಲಿ ಕೊಟ್ಟು ಅದಕ್ಕೆ ಒಂದು ಹಿಡಿ ಹಿಂಗಾರ ತುಂಡು ಮಾಡಿ ಹಾಕಿ  ಸಮ ಸಂಖ್ಯೆ ಬಂದರೆ, ಇಲ್ಲ, ಬೆಸ ಸಂಖ್ಯೆ ಬಂದರೆ ಪಡುಮಲೆಗೆ ಬರುತ್ತೇವೆ ಎಂದು ನುಡಿ ಮಾತು ನೀಡಿದರು. ಬಳಿಕ ಎಣ್ಮೂರು ಗರಡಿ ಅಧ್ಯಕ್ಷ ರಾಮಕೃಷ್ಣ ಹಿಂಗಾರ ಹೆಸಲು ಲೆಕ್ಕ ಮಾಡಿದಾಗ ಬೆಸ ಸಂಖ್ಯೆ ಬಂತು. ಎಣ್ಮೂರು ಗರಡಿ ಪ್ರದೇಶದಿಂದ ಒಂದು ಹಿಡಿ ಮಣ್ಣು ಮತ್ತು ಒಂದು ಒಂದು ಚೆಂಬು ನೀರು ಪಡುಮಲೆ ಕೊಂಡುಹೋಗಿ ಸ್ಪರ್ಶಿಸಿ ಆಗ ನಾವು ಬರುತೇವೆ ಎಂದು  ಕೋಟಿ ಚೆನ್ನಯರ ನುಡಿ.

ಪಡುಮಲೆ ಚಪ್ಪರ ಮುಹೂರ್ತ ಕಾರ್ಯಕ್ರಮದ ಈ ಶುಭ ಸಂದರ್ಭದಲ್ಲಿ  ಕೋಟಿ ಚೆನ್ನಯರ ಅಭಯದಂತೆ  ಎಣ್ಮೂರು ಪ್ರದೇಶದಿಂದ ಒಂದು ಹಿಡಿ ಮಣ್ಣು ಮತ್ತು ಒಂದು ಚೆಂಬು ನೀರು ತಂದು ಸ್ಪರ್ಶಿಸುವ ವಿಶೇಷ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.