HomePage_Banner
HomePage_Banner
HomePage_Banner
HomePage_Banner

ನರಿಮೊಗರುವಿನಲ್ಲಿ ಪ್ರಸಾದಿನೀ ಆಯುರ್ ನಿಕೇತನ ಸ್ಥಳಾಂತರಗೊಂಡು ಶುಭಾರಂಭ:

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಆರೋಗ್ಯ ಸುಧಾರಿಕೆಗೆ ಆಯುರ್ವೇದ, ಯೋಗ ಅಗತ್ಯ-ಮೀನಾಕ್ಷಿ ಶಾಂತಿಗೋಡು

ಪುತ್ತೂರು: ಪ್ರಧಾನಿ ಮೋದಿಯವರ ಮೂಲಕ ವಿಶ್ವವೇ ಒಪ್ಪಿಕೊಂಡ ಯೋಗ ಮತ್ತು ಆಯುರ್ವೇದ ನಮ್ಮ ಆರೋಗ್ಯದ ಸುಧಾರಿಕೆಗೆ ಬಹಳ ಅಗತ್ಯವುಳ್ಳದ್ದು ಎಂದು ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಹೇಳಿದರು.

ಆಯುರ್ವೇದಕ್ಕೆ ಸಂಬಂಧಿಸಿ ೧೮ ವರ್ಷಗಳ ಚಿಕಿತ್ಸೆಯ ಅನುಭವ ಹೊಂದಿರುವ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ಸ್ಥಳಾಂತರಗೊಂಡ ಆಯುರ್ವೇದ, ಯೋಗ ಥೆರಪಿ ಸೆಂಟರ್ ’ಪ್ರಸಾದಿನೀ ಆಯುರ್ ನಿಕೇತನ’ ಅವರು ಏ.೪ರಂದು ಬೆಳಿಗ್ಗೆ ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ನರಿಮೊಗರಿನ ಸ್ವಂತ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿದರು. ನೂತನ ಪ್ರಸಾದಿನೀ ಆಯುರ್ ನಿಕೇತನದಿಂದಾಗಿ ಮುಂದೆ ಔಷಧಿಗಾಗಿ ಪೇಟೆಗೆ ಹೋಗುವ ಅವಶ್ಯತೆ ತಪ್ಪುತ್ತದೆ. ಕೋವಿಡ್ ಸಂದರ್ಭದಲ್ಲಿ ದೂರ ಹೋಗುವ ಬದಲು ಹತ್ತಿರದಲ್ಲೆ ನಮ್ಮ ಆರೋಗ್ಯ ಕಾಪಾಡುವ ವ್ಯವಸ್ಥೆಯನ್ನು ಡಾ. ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರು ಒದಿಗಿಸಿಕೊಟ್ಟಿರುವುದು ಸಂತೋಷದ ವಿಚಾರ ಎಂದರು.


ಡಾ.ಪ್ರಸಾದ್ ಅವರು ಜನಪ್ರೀಯ ವೈದ್ಯರು:
ಪ್ರಸಾದಿನೀ ವೆಬ್‌ಸೈಟ್ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ಮಾತನಾಡಿ ಡಾ. ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರು ಜನಪ್ರೀಯ ವೈದ್ಯರು. ಯಾಕೆಂದರೆ ಈ ಪರಿಸರದಲ್ಲಿ ಬಹಳ ಚಿರಪರಿಚತರು. ಅವರು ಕೋವಿಡ್ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿದ್ದ ವೇಳೆ ಬಹಳ ಉತ್ತಮ ಸೇವೆ ನೀಡಿದ್ದಾರೆ. ಯೋಗ ಥೆರಪಿಯನ್ನು ಇಲ್ಲಿ ಆರಂಭಿಸುವ ಮೂಲಕ ಉತ್ತಮ ಸೇವೆ ನೀಡಲಿರುವ ಇವರ ಜನಸೇವಾ ಕಾರ್ಯ ಯಶಸ್ವಿಯಾಗಲಿ ಎಂದರು.

ಜಿಲ್ಲಾ ಕೇಂದ್ರವಾಗುವ ಪುತ್ತೂರಿಗೆ ವಿಶೇಷ ಕೊಡುಗೆ:
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಡಾ.ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರು ಬಹುಮುಖ ಪ್ರತಿಭೆವುಳ್ಳ ವ್ಯಕ್ತಿತ್ವ. ರಾಷ್ಟ್ರೀಯವಾದಿ, ಆಧ್ಯಾತ್ಮಿಕ ಚಿಂತಕನಾಗಿ, ಜನಸಾಮಾನ್ಯರ ಆಶಯದ ಜೊತೆಗೆ ಸಮಾಜವನ್ನು ಮುನ್ನಡೆಸುವ ಶ್ರೇಷ್ಠ ವ್ಯಕ್ತಿ ಆಗಿರುವ ಇವರು ಈ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯಲ್ಲಿ ಸದಸ್ಯರಾಗಿದ್ದಾಗ ಅವರು ಮಾಡಿದ ಸೇವೆಯನ್ನು ಜನರು ಸ್ಮರಿಸಿದ್ದಾರೆ. ಒಬ್ಬ ವೈದ್ಯನಾದಂತೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ತಮ್ಮ ಕ್ಲೀನಿಕ್ ಆರಂಭಿಸಿ ದೊಡ್ಡ ತಮ್ಮ ವ್ಯಕ್ತಿತ್ವ ಬಿಂಬಿಸುವ ಸಂದರ್ಭದಲ್ಲಿ ಅವೆಲ್ಲವನ್ನು ಬಿಟ್ಟು ಗ್ರಾಮಾಂತರ ಪ್ರದೇಶದಲ್ಲಿ ಬಡ ಜನರ ಜೊತೆಗೆ ನಾನಿರಬೇಕು. ಅವರ ನೋವುನಲಿವಿನಲ್ಲಿ ತಾನು ಪಾಲ್ಗೊಳ್ಳಬೇಕೆಂಬ ನಿಟ್ಟಿನಲ್ಲಿ ಮಹದಾಸೆಯನ್ನು ನರಿಮೊಗರಿನಲ್ಲಿ ಕ್ಲೀನಿಕ್ ಆರಂಭಿಸಿ ಬಡ ಜನರ ಸೇವೆ ಮಾಡುವ ಆಶಯ ಹೊತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಡಾ. ರಾಘವೇಂದ್ರಪ್ರಸಾದ್ ಬಂಗಾರಡ್ಕ ಅವರು ಜಿಲ್ಲಾ ಕೇಂದ್ರವಾಗುತ್ತಿರುವ ಪುತ್ತೂರಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು. ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಶ್ರೀವಿದ್ಯಾ ಶುಭ ಹಾರೈಸಿದರು. ಉಪಾಧ್ಯಕ್ಷ ಸುಧಾಕರ ಕುಲಾಲ್, ವೇದಿಕೆಯಲ್ಲಿ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರ ತಂದೆ ಸೋಮಶೇಖರ್, ತಾಯಿ ದೇವಕಿ ಅಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಸುಶ್ಮಿತಾ, ಡಾ ರಾಘವೇಂದ್ರ ಪ್ರಸಾದ್ ಅವರ ಸಹೋದರ ಪ್ರದೀಪ್ ಕೃಷ್ಣ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ವೆಬ್‌ಸೈಟ್ ಡಿಸೈನ್ ಮಾಡಿದ ವೆಬ್‌ಡಿಸೈನ್ ಶರತ್ ಅವರನ್ನು ಗೌರವಿಸಲಾಯಿತು. ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಸ್ವಾಗತಿಸಿ, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ಡಾ| ವಿಜಯ ಸರಸ್ವತಿ ಅವರು ಕಾರ್ಯಕ್ರಮ ನಿರೂಪಿಸಿದರು. ನರಿಮೊಗರು ಗ್ರಾ.ಪಂ ಸದಸ್ಯ ನವೀನ್ ರೈ, ಮುಂಡೂರು ಗ್ರಾ.ಪಂ ಸದಸ್ಯ ಚಂದ್ರಶೇಖರ್, ಧನ್ವಂತರಿ ಆಸ್ಪತ್ರೆಯ ಡಾ.ರವೀಂದ್ರ, ಡಾ.ರವಿಪ್ರಕಾಶ್, ಬಾಲಕೃಷ್ಣ ಕೊಳತ್ತಾಯ, ವಸಂತ ನಾಯಕ್ ಪುಣಚ, ಸುಬಣ್ಣ ಭಟ್, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಸೇರಿದಂತೆ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂದರ್ಶಕ ವೈದ್ಯರಿಂದಲೂ ಚಿಕಿತ್ಸೆ:
ಪ್ರಸಾದಿನೀ ಆಯುರ್ ನಿಕೇತನದಲ್ಲಿ ಆಯುರ್ವೇದ ಚಿಕಿತ್ಸಾ ಸೌಲಭ್ಯ ದೊರೆಯಲಿದ್ದು, ವಮನ, ವಿರೇಚನ, ನಸ್ಯ, ಬಸ್ತಿ, ರಕ್ತಮೋಕ್ಷಣ ಇತ್ಯಾದಿ ಪಂಚಕರ್ಮ ಚಿಕಿತ್ಸಾ ಸೌಲಭ್ಯ, ಕಣ್ಣಿನ ರೋಗಗಳಿಗೆ ವಿಶೇಷ ಚಿಕಿತ್ಸೆಗಳಾದ ತರ್ಪಣ, ಸೇಕ, ಆಶ್ಚೋತನ, ಬಿಡಾಲಕ ಇತ್ಯಾದಿ ಚಿಕಿತ್ಸಾ ಸೌಲಭ್ಯಗಳಿವೆ. ಇದರ ಜೊತೆಗೆ ಪುತ್ತೂರು ಧನ್ವಂತರಿ ಆಸ್ಪತ್ರೆಯ ಡಾ. ರವಿಪ್ರಕಾಶ್ ಅವರು ಸಂದರ್ಶಕ ವೈದ್ಯರಾಗಿ ಸೇವೆ ನೀಡಲಿದ್ದಾರೆ. ಮುಂದಿನ ದಿನದಲ್ಲಿ ಮಕ್ಕಳ ತಜ್ಞರೊಬ್ಬರು ಕೂಡಾ ಇಲ್ಲಿ ಜನರ ಸೇವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಹೇಳಿದರು.

18 ವರ್ಷಗಳ ಚಿಕಿತ್ಸಾ ಅನುಭವ:
18 ವರ್ಷಗಳ ಚಿಕಿತ್ಸೆಯ ಅನುಭವ ಹೊಂದಿರುವ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಪುರುಷರಕಟ್ಟೆಯಲ್ಲಿ ಪ್ರಸಾದ್ ಹೆಲ್ತ್ ಕೇರ್ ಸೆಂಟರ್ ಮತ್ತು ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೆಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಅಗಿ ಕರ್ತವ್ಯ ನಿರ್ವಹಿಸುತಿದ್ದು, ಜನರ ಆರೋಗ್ಯದ ಕುರಿತು ಕಾಳಜಿವುಳ್ಳವರಾಗಿದ್ದಾರೆ. ಈಗಾಗಲೇ ಆರೋಗ್ಯದ ಕುರಿತು ಜಾಲತಾಣಗಳಲ್ಲಿ ಅರಿವು, ಮಾಹಿತಿಕಾರ್ಯಗಾರಗಳು, ಪತ್ರಿಕೆಗಳಲ್ಲಿ ಆರೋಗ್ಯ ಲೇಖನಗಳ ಮೂಲಕ ಜನಾನುರಾಯಿಯಾಗಿದ್ದು, ಸಂಧಿವಾತ, ಕಣ್ಣಿನ ರೋಗಗಳು, ನರಮಂಡಲದ ಕಾಯಿಲೆಗಳಿಗೆ ವಿಶೇಷ ಚಿಕಿತ್ಸೆ ನೀಡಿ ಹಲವರನ್ನು ಗುಣಮುಖರಾಗಿಸಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.