HomePage_Banner
HomePage_Banner
HomePage_Banner
HomePage_Banner

ನೇರಳಕಟ್ಟೆಯಲ್ಲಿ ಜನಪ್ರಿಯ ಸಮ್ಮಿಲನ: ಉಚಿತ ವಿವಾಹ, ಜನಪ್ರಿಯ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ:  ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ಸ್ ಗೆ 2 ವರ್ಷ ತುಂಬಿದ ಸ್ಮರಣಾರ್ಥ ಅಶಕ್ತ ಕುಟುಂಬದ ಉಚಿತ ವಿವಾಹ ಹಾಗೂ ಜನಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ ಜನಪ್ರಿಯ ಸಮ್ಮಿಲನವು ಎ. 3 ರಂದು ಸಾಯಂಕಾಲ ನೇರಳಕಟ್ಟೆಯಲ್ಲಿರುವ ಜನಪ್ರಿಯ ಗಾರ್ಡನ್ಸ್ ನಲ್ಲಿ ನಡೆಯಿತು.

ಜನಪ್ರಿಯ ಸಮೂಹ ಸಂಸ್ಥೆಗಳ ನಿರ್ಮಾತೃ ಹಾಗೂ ಹಾಸನದ ಖ್ಯಾತ ವೈದ್ಯರಾದ ಡಾ. ಅಬ್ದುಲ್ ಬಶೀರ್ ವಿ.ಕೆ. ರವರು ಅಧ್ಯಕ್ಷತೆವಹಿಸಿದ್ದರು. ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ, ಡಾ. ಶ್ಯಾಮ್ ಸಂಪಿಗೆತ್ತಾಯ, ಹಿರಿಯ ಪತ್ರಕರ್ತರಾದ ವೆಂಕಟೇಶ್ ಮೂರ್ತಿ, ಎಸ್.ಎಸ್. ಪಾಶಾ, ವಿ.ಕೆ. ಬಶೀರ್, ಹಂಝತ್ ಕಾನ್, ರಫೀಕ್ ಮಾಸ್ಟರ್, ಉಮ್ಮಾರ್ ವಿ.ಹೆಚ್., ನೆಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಕೊಪ್ಪರಿಗೆ, ಯಹ್ಯಾಹಾಜಿ ಟೆಕ್ಸ್ ಟೈಲ್ ಸೆಂಟರ್ ಪುತ್ತೂರು, ಡಾ.ವಿ.ಕೆ. ಮೊಹಮ್ಮದ್, ಆಲಂ ನವಾಝ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಾಹಿತಿ, ಕೃಷಿಕ, ಶಿಕ್ಷಣ ತಜ್ಞರಾದ ಡಾ| ನರೇಂದ್ರ ರೈ ದೇರ್ಲ ಹಾಗೂ ಸದ್ದಿಲ್ಲದೇ ಹಗಲಿರುಳು ಬಡವರ ಸೇವೆಗೈಯ್ಯುವ ಉದ್ಯಮಿ ಆಸ್ಕರ್ ಆನಂದ್ ರವರನ್ನು ಈ ಬಾರಿಯ ಜನಪ್ರಿಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭ ಡಾ. ಅಬ್ದುಲ್ ಬಶೀರ್ ವಿ.ಕೆ. ಹಾಗೂ ನಸ್ರೀನ್ ಬಶೀರ್ ದಾಂಪತ್ಯದ 27ನೇ ವೈವಾಹಿಕ ವರ್ಷಾಚರಣೆ ನಡೆಯಿತು. ಡಾ. ಅಬ್ದುಲ್ ಬಶೀರ್ ವಿ.ಕೆ. ರವರನ್ನು ಹಾಸನದ ಜನಪ್ರೀಯ ಅಭಿಮಾನಿ‌ ಬಳಗ, ಊರಿನ ಜನಪ್ರೀಯ ಅಭಿಮಾನಿ ಬಳಗದ ವತಿಯಿಂದ‌  ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಂದು ಬಡ ಕುಟುಂಬದ ಹಣ್ಣುಮಗಳ ಉಚಿತ ವಿವಾಹ ನಡೆಯಿತು.  ಡಾ. ಅಬ್ದುಲ್ ಬಶೀರ್ ವಿ.ಕೆ.ಸ್ವಾಗತಿಸಿ, ಕಿರಾಶ್ ವಂದಿಸಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ನಾವೆಲ್ಲರೂ ಒಂದೇ ಎನ್ನುವ ಬಾವನೆಯಲ್ಲಿ ಮಾಡಿದ‌ ಕೆಲಸದಲ್ಲಿ ಆತ್ಮತೃಪ್ತಿ ಹೆಚ್ಚು

ನನ್ನ ಯಶಸ್ಸಿನ ಹಿಂದೆ ನನ್ನ ಮನೆಯವರ ಹಾಗೂ ಕುಟುಂಬಸ್ಥರ  ಪಾತ್ರ ಮಹತ್ತರದ್ದಾಗಿದೆ. ಜಾತಿ, ಮತವನ್ನು ಬದಿಗಿಟ್ಟು ನಾವೆಲ್ಲರೂ ಒಂದೇ ಎನ್ನುವ ಭಾವನೆಯಲ್ಲಿ ಮಾಡಿದ ಕೆಲಸದಲ್ಲಿ ಆತ್ಮತೃಪ್ತಿ ಹೆಚ್ಚು. ಈ ಒಂದು ಸಂಭ್ರಮದ ದಿನದಲ್ಲಿ ಒಂದು ಬಡ ಹೆಣ್ಣುಮಗಳಿಗೆ ವಿವಾಹ ಮಾಡುವ ಭಾಗ್ಯ ನನ್ನ ಪಾಲಿಗೆ ಬಂದಿರುವುದು ತುಂಬಾ ಸಂತಸ ತಂದಿದೆ. ಸಮಾಜದಲ್ಲಿರುವ ಬಡಬಗ್ಗರಿಗೆ ನನ್ನಿಂದಾದ ಸೇವೆಯನ್ನು ನೀಡುತ್ತಿದ್ದೇನೆ. ಮುಂದಿನ ದಿನದಲ್ಲಿ ಮಂಗಳೂರಿನಲ್ಲಿಯೂ ಜನಪ್ರೀಯ ಆಸ್ಪತ್ರೆಯನ್ನು ತೆರೆದು ಈ ಭಾಗದ ಜನರ ಸೇವೆ ಮಾಡಬೇಕೆಂದಿದ್ದೇನೆ- ಡಾ. ಅಬ್ದುಲ್ ಬಶೀರ್ ವಿ.ಕೆ. ವೈದ್ಯರು ಜನಪ್ರೀಯ ಆಸ್ಪತ್ರೆ ಹಾಸನ

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.