HomePage_Banner
HomePage_Banner
HomePage_Banner
HomePage_Banner

– ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಮನೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ವಿಟ್ಲ: ಪೆರುವಾಯಿ ಫಾತಿಮಾ ಮಾತೆಯ ದೇವಾಲಯ ಮತ್ತು ಹ್ಯೂಮಾನಿಟಿ ಸಂಸ್ಥೆಯ ನೇತೃತ್ವದಲ್ಲಿ ಮನೆಗಳ ಹಸ್ತಾಂತರ ಮತ್ತು ಆಶೀರ್ವಚನ ಕಾರ್ಯಕ್ರಮ ಫಾತಿಮಾ ಮಾತೆಯ ದೇವಾಲಯದಲ್ಲಿ ನಡೆಯಿತು.

ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ದಾನ್ಹಾ ಮನೆಗಳ ಹಸ್ತಾಂತರ ಮಾಡಿ ಆಶೀರ್ವಚನ ನೀಡಿ  ಮನೆ ನಿರ್ಮಾಣ ಕಾರ್ಯ ಮಹತ್ವದ ಕಾರ್ಯವಾಗಿದೆ. ಪೆರುವಾಯಿ ಎಂಬ ಗ್ರಾಮೀಣ ಭಾಗದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಮನೆ ನಿರ್ಮಿಸಿ ಹಸ್ತಾಂತರ ಮಾಡಿರುವ ಕಾರ್ಯ ಶ್ಲಾಘನೀಯವಾದದು. ಇಂತಹ ಕಾರ್ಯಗಳು ಮುಂದಿನಗಳಲ್ಲಿ ಇದೇ ರೀತಿಯಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಮಾತನಾಡಿ ಪ್ರತಿಯೊಬ್ಬರ ನಿಸ್ವಾರ್ಥ ಸೇವೆ ಹಾಗೂ ಸಹಕಾರದಿಂದ ಇಂತಹ ಕಾರ್ಯ ಯಶಸ್ವಿಗೊಳಿಸಲು ಸಾಧ್ಯವಾಗಿದೆ ಎಂದರು.

ಮನೆ ನಿರ್ಮಿಸಲು ಸಹಕಾರ ನೀಡಿದ ಮಾಣಿಲ, ಪೆರುವಾಯಿ ಮತ್ತು ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಎರಡು ಮನೆ ನಿರ್ಮಿಸಲು ಶಿಲಾನ್ಯಾಸ ನಡೆಸಲಾಯಿತು.

ಈ ಸಂದರ್ಭ ಮಾಣಿಲ ಚರ್ಚ್‌ನ ಧರ್ಮಗುರು ಪೌಲ್ ಡಿಸೋಜ, ಹ್ಯೂಮಾನಿಟಿ ಗೆಳೆಯರ ಬಳಗ ಸಂಸ್ಥೆಯ ಸ್ಥಾಪಕಾಧ್ಯಕ್ಷ ರೋಶನ್ ಬೆಳ್ಮಣ್, ಮೌರೀಸ್ ಡಿ ಸೋಜ, ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಪಾಲನ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿ ಸೋಜ, ಕಾರ್ಯದರ್ಶಿ ವಿಲಿಯಂ, ಸಂತೋಷ್ ಮೊಂತೆರೋ, ದೀಕ್ಷಿತಾ ಡಿ ಸೋಜ, ವಿಲ್‌ಫ್ರೆಡ್ ಡಿ ಸೋಜ ಭಾಗವಹಿಸಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.