- ಸೇವೆಯ ರೂಪದಲ್ಲಿ ಆಸ್ಪತ್ರೆ ಬೆಳೆದಿದೆ – ಚಿನ್ನಯಾಚಾರ್ದರ್ ಶೆಟ್ಟಿ
- ಎನ್ಎಬಿಹೆಚ್ ಪ್ರಮಾಣ ಪತ್ರ ಆಸ್ಪತ್ರೆಯ ಮಾನ್ಯತೆ ಹೆಚ್ಚಿಸಿದೆ – ಮನೋಹರ್ ಪ್ರಭು
- ದೂರ ದೃಷ್ಟಿಯಿದ್ದಲ್ಲಿ ಆಸ್ಪತ್ರೆಯ ಸೌಲಭ್ಯವೂ ಹೆಚ್ಚುತ್ತದೆ – ಡಾ. ಅಶೋಕ್ ಕುಮಾರ್ ರೈ
- ರೋಗಿಗೆ ಉತ್ತಮ ಪ್ರಯೋಜನ ಸಿಗಬೇಕೆಂಬುದೇ ನಮ್ಮ ದೈಯ – ಡಾ. ಭಾಸ್ಕರ್ ಎಸ್
ಪುತ್ತೂರು: ಎಪಿಎಂಸಿ ರಸ್ತೆಯಲ್ಲಿರುವ ಪುತ್ತೂರು ಸಿಟಿ ಆಸ್ಪತ್ರೆಯ ೧೨ನೇ ವರ್ಷಕ್ಕೆ ಪಾದಾರ್ಪಣೆ ಸಂದರ್ಭದಲ್ಲಿ ಎ.೪ರಂದು ವಾರ್ಷಿಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಲ್ಪಿ ಸ್ಪೆಷಾಲಿಟಿ ಎಂಟ್ರಿಲೆವೆಲ್ ಹಾಸ್ಪಿಟಲ್ ಎಂಬ ಮಾನ್ಯತೆ ಪಡೆದ ಎನ್.ಎ.ಬಿ.ಹೆಚ್ ಪ್ರಮಾಣ ಪತ್ರವನ್ನು ಎನ್ಎಬಿಹೆಚ್ ಕನ್ಸಲ್ಟೆಂಟ್ ಗ್ಲೋಬಲ್ ಸರ್ವೀಸಸ್ನ ಮನೋಹರ್ ಪ್ರಭು ಅವರು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಭಾಸ್ಕರ್ ಅವರಿಗೆ ಹಸ್ತಾಂತರಿಸಿದರು.
ಸೇವೆಯ ರೂಪದಲ್ಲಿ ಆಸ್ಪತ್ರೆ ಬೆಳೆದಿದೆ:
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಬಿ.ಐ ಮೆನೇಜರ್ ಚಿನ್ನಯಾಚಾರ್ ದರ್ ಶೆಟ್ಟಿಯವರು ಆಸ್ಪತ್ರೆಯ ಹೊಸ ಹೆಲ್ತ್ ಕಾರ್ಡ್ ಅನ್ನು ಬಿಡುಗಡೆ ಮಾಡಿ ಮಾತನಾಡಿ ಕಮರ್ಷಿಯಲ್ ಬದಲು ಸೇವೆಯ ದೃಷ್ಟಿಯಿಂದ ಆಸ್ಪತ್ರೆ ಬೆಳೆದಿದೆ. ಇಲ್ಲಿ ರೋಗಿಗಳಿಗೆ ಸೇವೆ ನೀಡುವುದೇ ತಮ್ಮ ಗುರಿಯನ್ನು ಇಟ್ಟು ಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಕಡಿಮೆ ಹಣ ವ್ಯಹಿಸಿ ಉತ್ತಮ ಆರೋಗ್ಯ ಪಡೆಯಲು ಹೆಲ್ತ್ ಕಾರ್ಡ್ ಕೂಡಾ ರೋಗಿಗಳಿಗೆ ಉತ್ತಮ ಸಹಾಯವಾಗಲಿದೆ ಎಂದ ಅವರು ಒಂದು ಆಸ್ಪತ್ರೆ ಚೆನ್ನಾಗಿದ್ದರೆ. ಊರಿನವರೆಲ್ಲರೂ ಚೆನ್ನಾಗಿದ್ದಾರೆ ಎಂದರ್ಥ. ಇದಕ್ಕೆ ಉದಾಹರಣೆಯಾಗಿ ಪುತ್ತೂರು ಸಿಟಿ ಆಸ್ಪತ್ರೆ ಬೆಳೆದು ನಿಂತಿದೆ ಎಂದರು.
ಎನ್ಎಬಿಹೆಚ್ ಪ್ರಮಾಣ ಪತ್ರ ಆಸ್ಪತ್ರೆಯ ಮಾನ್ಯತೆ ಹೆಚ್ಚಿಸಿದೆ:
ಎನ್ಎಬಿಹೆಚ್ ಕನ್ಸಲ್ಟೆಂಟ್ ಗ್ಲೋಬಲ್ ಸರ್ವಿಸಸ್ನ ಮನೋಹರ್ ಪ್ರಭು ಅವರು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಭಾಸ್ಕರ್ ಎಸ್ ಅವರಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿ ಆಸ್ಪತ್ರೆಯ ಕ್ವಾಲಿಟಿ ಮತ್ತು ಗಣತೆಯನ್ನು ಹೆಚ್ಚಿಸಲು ಅದಕ್ಕೊಂದು ಮಾನ್ಯತೆ ಪಡೆಯುವ ಅವಶ್ಯಕತೆ ಇದೆ. ಅದನ್ನು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಇಂತಹ ಎನ್ಎಬಿಹೆಚ್ ಮಾನ್ಯತೆ ಪಡೆದ ಪುತ್ತೂರು ಸಿಟಿ ಆಸ್ಪತ್ರೆ ಯಶಸ್ವಿಯ ಹಾದಿಯಲ್ಲಿರುವುದು ಶ್ಲಾಘನೀಯ ಎಂದರು.
ದೂರ ದೃಷ್ಟಿಯಿದ್ದಲ್ಲಿ ಆಸ್ಪತ್ರೆಯ ಸೌಲಭ್ಯವೂ ಹೆಚ್ಚುತ್ತದೆ:
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರು ಮಾತನಾಡಿ ಕೋವಿಡ್ ಸಂದರ್ಭದಲ್ಲೂ ಸಿಬ್ಬಂದಿಗಳಿಗೆ ಉತ್ತಮ ವೇತನ ನೀಡಿದ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪುತ್ತೂರು ಸಿಟಿ ಆಸ್ಪತ್ರೆ ಇವತ್ತು ಎನ್ಎಬಿಹೆಚ್ ಮಾನ್ಯತೆ ಪಡೆದಿರುವುದು ಆಸ್ಪತ್ರೆಯ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಯಾವುದೇ ವ್ಯವಸ್ಥೆಯಲ್ಲೂ ದೂರದೃಷ್ಟಿ ಇದ್ದಾಗ ಗುರಿ ತಲುಪಬಹುದು. ಇಂತಹ ದೂರ ದೃಷ್ಟಿ ಇಟ್ಟುಕೊಂಡು ಡಾ. ಭಾಸ್ಕರ್ ಎಸ್ ಅವರು ಆಸ್ಪತ್ರೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.
ರೋಗಿಗೆ ಉತ್ತಮ ಪ್ರಯೋಜನ ಸಿಗಬೇಕೆಂಬುದೇ ನಮ್ಮ ದೈಯ:
ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಣ್ಣ ರೀತಿಯಲ್ಲಿ ಪ್ರಾರಂಭ ಮಾಡಿ ಇದನ್ನು ನೂರು ಬೆಡ್ನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಬೇಕೆಂಬ ಮತ್ತು ಬರಿ ಅಲೋಪತಿ ಮಾತ್ರವಲ್ಲ ಆಯುರ್ವೇದವನ್ನು ಜೊತೆಗೂಡಿಸಿ ವೈದ್ಯಕೀಯ ಶಾಸ್ತ್ರದ ಎಲ್ಲಾ ಆಯಾಮದಲ್ಲೂ ನೋಡಿ ಅದರ ಎಲ್ಲಾ ಡಿಸಿಪ್ಲೀನ್ ಪ್ರಯೋಜನ ರೋಗಿಗಳಿಗೆ ಸಿಗಬೇಕೆನ್ನುವ ಉದ್ದೇಶವನ್ನು ಇಟ್ಟು ಕೊಂಡು ಕನಸು ನನಸಾಗಿದೆ. ಸಂಸ್ಥೆಯ ನಡೆದು ಬರುವಾಗ ಹಲವು ಏಲುಬೀಳು ಇರುತ್ತದೆ. ಆದರೆ ಉತ್ತಮ ಉದ್ದೇಶವಿಟ್ಟು ಕೊಂಡ ಈ ಆಸ್ಪತ್ರೆ ಪುತ್ತೂರಿನ ವೈದ್ಯರು ಮಾತ್ರ ಶೇರ್ ಹೋಲ್ಡರ್ ಆಗಿ ಇದೊಂದು ಪ್ರೈವೆಟ್ ಲಿಮಿಟೆಡ್ ಕಂಪೆನಿಯಾಗಿ ನಡೆದು ಕೊಂಡು ಬಂದಿದೆ. ಮುಂದೆ ಆಸ್ಪತ್ರೆಯ ಮೂಲಕ ಹಲವು ಯೋಜನೆ ನೀಡಲಿದ್ದೇವೆ. ಆದಷ್ಟು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸೌಕರ್ಯ ರೋಗಿಗಳಿಗೆ ನೀಡುವುದೇ ನಮ್ಮ ಉದ್ದೇಶ ಎಂದರು. ಕೋವಿಡ್ ಸಂದರ್ಭದಲ್ಲಿ ಹೆರಿಗೆ ವಿಚಾರದಲ್ಲಿ ಉತ್ತಮ ಸೇವೆ ನೀಡಿದ ಡಾ.ಅನಿಲ್ ಎಸ್ ಬೈಪಾಡಿತ್ತಾಯ, ಡಾ. ಪ್ರತಿಭಾ ಭಟ್, ಡಾ. ರಮಾದೇವಿ ಅವರನ್ನು ಮತ್ತು ಹಿರಿಯ ಸಿಬ್ಬಂದಿಗಳನ್ನು, ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಿದ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಯಿತು. ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಡಾ. ಎಸ್.ಎಮ್ ಪ್ರಸಾದ್, ಡಾ. ಎಂ.ಎಸ್ ಶೆಣೈ ಅತಿಥಿಗಳನ್ನು ಗೌರವಿಸಿದರು. ಪ್ರದೀಪ್ ಪ್ರಾರ್ಥಿಸಿದರು. ಡಾ.ಅನಿಲ್ ಎಸ್ ಬೈಪಡಿತ್ತಾಯ ಸ್ವಾಗತಿಸಿದರು. ಆಸ್ಪತ್ರೆಯ ಹೆಚ್.ಆರ್ ವಿಶ್ವಪ್ರಕಾಶ್ ವಂದಿಸಿದರು. ಸಾರ್ವಜನಿಕ ಸಂಪರ್ಕಾದಿಕಾರಿ ವಿಷ್ಣಕಿರಣ್ ಸಹಕರಿಸಿದರು.
ಆರೋಗ್ಯ ಹೆಲ್ತ್ ಕಾರ್ಡ್ನಲ್ಲಿ ಸಿಗುವ ಸೌಲಭ್ಯ
ಆಸ್ಪತ್ರೆಯ ಪಾದಾರ್ಪಣೆ ಸಂದರ್ಭದಲ್ಲಿ ಹೊಸದಾಗಿ ಆರೋಗ್ಯ ಹೆಲ್ತ್ ಕಾರ್ಡ್ನ್ನು ಆರಂಭಿಸಲಾಗಿದ್ದು ಒಬ್ಬ ವ್ಯಕ್ತಿ ರೂ.೯೯೯ ಅನ್ನು ಪಾವತಿಸಿ ಕಾರ್ಡ್ ಪಡೆದು ಕೊಂಡ ವರ್ಷದಲ್ಲಿ ಆರೋಗ್ಯಕ್ಕೆ ಸಂಬಂಧಿಸಿ ಹಲವು ಚಿಕಿತ್ಸಾ ಸೌಲಭ್ಯ ಈ ಕಾರ್ಡ್ ಹೊಂದಿದೆ. ಹಿಮೋಗ್ಲೋಮಿನ್, ಸಿಬಿಸಿ, ಬ್ಲಡ್ ಶುಗರ್, ಬ್ಲಡ್ ಯುರಿಯ, ಸಿಆರ್ಮ್, ಕ್ರೀಯಾಟೀನ್, ಟೋಟಲ್ ಕೊಲಸ್ಟ್ರಾಲ್, ಯೂರಿನ್ ಆನಾಲಿಸಿಸ್, ಇಸಿಜಿ ಟೆಸ್ಟ್ ಮಾಡಿ ಫಿಜಿಸಿಯನ್ ಅವರಿಂದ ಉಚಿತ ಸಲಹೆ ನೀಡಲಿದ್ದಾರೆ. ಆಸ್ಪತ್ರೆಯ ಬಿಲ್ಗಳು, ವೈದ್ಯರ ಪೀಸ್ ಹೊರತು ಪಡಿಸಿ ಫಾರ್ಮಸಿ ಬಿಲ್, ಆಂಬುಲೆನ್ಸ್ ಬಿಲ್ನಲ್ಲಿ ಶೇ.೫ ಕಡಿತ ನೀಡಲಾಗುವುದು-ಡಾ. ಭಾಸ್ಕರ್ ಎಸ್, ಆಡಳಿತಾಧಿಕಾರಿ ಪುತ್ತೂರು ಸಿಟಿ ಆಸ್ಪತ್ರೆ