- ಮಹಮ್ಮದ್ ತಾಬಿಶ್ ಹಸನ್, ಶ್ರೀನಿವಾಸ್ ಭಟ್, ರಾಜಾರಾಮ್. ಕೆ.ಬಿ.ಯವರಿಗೆ ಸನ್ಮಾನ
ಉಪ್ಪಿನಂಗಡಿ: ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಎ. ೧ರಂದು ಉಪ್ಪಿನಂಗಡಿ ರೋಟರಿ ಸಮೂದಾಯ ಭವನದಲ್ಲಿ ನಡೆಯಿತು.
ರೋಟರಿ ಜಿಲ್ಲೆ-೩೧೮೧ರ ನಿಯೋಜಿತ ರಾಜ್ಯಪಾಲ ರೊ. ಪ್ರಕಾಶ್ ಕಾರಂತ ಮುಖ್ಯ ಅತಿಥಿಯಾಗಿ ಮಾತನಾಡಿ ಕುಟುಂಬ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ರೋಟರಿಯ ಸೇವಾ ಚಟುವಟಿಕೆಗಳು ಇನ್ನಷ್ಟು ವ್ಯಾಪಕವಾಗಿ ನಡೆಯಲಿ ಎಂದು ಹೇಳಿದರು.
ಸೀನಿಯರ್ ಛೇಂಬರ್ ರಾಷ್ಟ್ರಾಧ್ಯಕ್ಷ ಜೇಸಿ ಅರವಿಂದ ರಾವ್ ಕೇದಿಗೆ, ವಲಯ ಸೇನಾನಿ ರೊ. ಜೆರೋಮಿಯಸ್ ಪಾಯಸ್ ಸಂದರ್ಭೋಚಿತವಾಗಿ ಮಾತನಾಡಿದರು.
ಸಾಧಕರಿಗೆ ಸನ್ಮಾನ:
ಕ್ಲಿಷ್ಟ ಪರೀಕ್ಷೆಗಳಲ್ಲಿ ಒಂದಾದ ಚಾರ್ಟಡ್ ಆಕೌಟೆಂಟ್ ಪರೀಕ್ಷೆಯಲ್ಲಿ ಹತ್ತನೇ ರ್ಯಾಂಕ್ ಪಡೆದ ಮಹಮ್ಮದ್ ತಾಬಿಶ್ ಹಸನ್ ಹಾಗೂ ಕಳೆದ ಬಾರಿಯ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಶ್ರೀನಿವಾಸ್ ಭಟ್ ಮತ್ತು ವೈದ್ಯಕೀಯ ಸೇವೆಯಲ್ಲಿ ಇಪ್ಪತ್ತೈದು ಸಂವತ್ಸರಗಳನ್ನು ಪೂರ್ಣಗೊಳಿಸಿದ ರೋಟರಿ ಟ್ರಸ್ಟ್ ಅಧ್ಯಕ್ಷರಾದ ರೊ. ರಾಜಾರಾಮ್. ಕೆ.ಬಿ. ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರೊ. ದಿವಾಕರ ಆಚಾರ್ಯ, ರೊ. ಜಗದೀಶ್ ನಾಯಕ್, ರೊ. ಸ್ವರ್ಣೇಶ್, ಆನ್ಸ್ ಹರಿಣಿ ರವೀಂದ್ರ ಮತ್ತು ರೊ. ಆಶ್ವಿನ್ ಕಿಣಿ, ಶ್ರೀಮತಿ ವಂದನಾ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ದರ್ಭೆ ಸ್ವಾಗತಿಸಿ, ಶ್ರೀಕಾಂತ್ ಪಟೇಲ್ ವಂದಿಸಿದರು.