HomePage_Banner
HomePage_Banner
HomePage_Banner
HomePage_Banner

ರಾಮಕುಂಜ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಐದು ದಿನಗಳ ತರಬೇತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ : ಗ್ರಾ.ಪಂ‌.ಸದಸ್ಯರಿಗೆ ನೀಡುವ ಸಾಮರ್ಥ್ಯಾಭಿವೃದ್ಧಿ ತರಬೇತಿಯಿಂದ ಸದಸ್ಯರಲ್ಲಿನ ಆತ್ಮವಿಶ್ವಾಸ ಹೆಚ್ಚುತ್ತದೆ, ಇದು ಗ್ರಾ.ಪಂ.ನ ಅಭಿವೃದ್ಧಿ ಕಾರ್ಯಕ್ಕೂ ಹೆಚ್ಚಿನ ಪ್ರೇರಣೆ ನೀಡುತ್ತದೆ ಎಂದು ರಾಮಕುಂಜ ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಹೇಳಿದರು.

ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ ಮೈಸೂರು,ದ.ಕ.ಜಿ.ಪಂ. ಹಾಗೂ ಕಡಬ ತಾಲೂಕು ಪಂಚಾಯತ್ ಆಶ್ರಯದಲ್ಲಿ ರಾಮಕುಂಜ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಎ.5ರಂದು ಆರಂಭಗೊಂಡ ಕೊಂಬಾರು, ಬೆಳಂದೂರು ಹಾಗೂ ಮರ್ಧಾಳ ಗ್ರಾ.ಪಂ.ಸದಸ್ಯರ ಐದು ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಗ್ರಾ.ಪಂ.ಸದಸ್ಯರು ಐದು‌ದಿನಗಳ ಕಾಲ ನಿರಂತರವಾಗಿ ತರಬೇತಿಗೆ ಹಾಜರಾಗುವಂತೆ ಅವರು ಮನವಿ ಮಾಡಿದರು. ಗ್ರಾ.ಪಂ.ಉಪಾಧ್ಯಕ್ಷರಾದ ಪ್ರಶಾಂತ್ ಕೆ.ಆರ್ ಮಾತನಾಡಿ, ಗ್ರಾ.ಪಂ.ಸದಸ್ಯತನದ ಅವಧಿ ಆರಂಭದಲ್ಲೇ ಸದಸ್ಯರಿಗೆ ತರಬೇತಿ ನೀಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.

ರಾಮಕುಂಜ ಅಭಿವೃದ್ಧಿ ಅಧಿಕಾರಿ ಜೆರಾಲ್ಡ್ ಮಸ್ಕರೇನಸ್ , ಕೊಂಬಾರು ಗ್ರಾ.ಪಂ.ಪಿಡಿಓ ರಾಘವೇಂದ್ರ, ಮರ್ಧಾಳ ಗ್ರಾ.ಪಂ.ಪಿಡಿಓ ಆನಂದ,ಕಾರ್ಯದರ್ಶಿ ವೆಂಕಟರಮಣ, ಬೆಳಂದೂರು ಗ್ರಾ.ಪಂ.ಕಾರ್ಯದರ್ಶಿ ನಾರಾಯಣ, ಸಿಬ್ಬಂದಿ ಮಮತಾ, ಸುಗಮಗಾರರಾದ ಮೌನೇಶ ವಿಶ್ವಕರ್ಮ, ಭರತ್ ರಾಜ್ ವೇದಿಕೆಯಲ್ಲಿದ್ದರು. ರಾಮಕುಂಜ ಗ್ರಾ.ಪಂ.ಕಾರ್ಯದರ್ಶಿ ಲಲಿತ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.