HomePage_Banner
HomePage_Banner
HomePage_Banner
HomePage_Banner

ಇ ಫೌಂಡೇಶನ್ ಇಂಡಿಯಾ ಸಮಿತಿಗೆ ಆಯ್ಕೆ | ಅಧ್ಯಕ್ಷ: ಡಾ.ಇಸ್ಮಾಯಿಲ್ ಸರ್ಫ್ರಾಜ್ ; ಪ್ರ.ಕಾರ್ಯದರ್ಶಿ: ಆರಿಫ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: `ಇ ಫ್ರೆಂಡ್ಸ್ ಪುತ್ತೂರು’ ಇದರ ವಾರ್ಷಿಕ ಮಹಾಸಭೆ ಎ.೩ರಂದು ಕಾರುಣ್ಯ ಕಚೇರಿಯಲ್ಲಿ ನಡೆಯಿತು. ಡಾ.ಇಸ್ಮಾಯಿಲ್ ಸರ್ಫ್ರಾಜ್‌ರವರು ಪ್ರಸ್ತಾವಿಕವಾಗಿ ಮಾತನಾಡಿದರು. ರಿಯಾಜ್ ಝರಾ ಕಳೆದ ಸಾಲಿನ ವರದಿ ಮಂಡನೆ ಮಾಡಿದರು. ಹೈದರ್ ಚಾಯ್ಸ್ ಅವರು ಆಯ-ವ್ಯಯ ಪಟ್ಟಿ ಮಂಡಿಸಿದರು. ನಂತರ ೨೦೨೧-೨೦೨೨ನೇ ಸಾಲಿನ ನೂತನ (ಸರಕಾರಿ ನೊಂದಾಯಿತ) `ಇ ಫೌಂಡೇಶನ್ ಇಂಡಿಯಾ (ರಿ.)’ ಸಮಿತಿಯನ್ನು ರಚಿಸಲಾಯಿತು.


ಅಧ್ಯಕ್ಷರಾಗಿ ಡಾ.ಇಸ್ಮಾಯಿಲ್ ಸರ್ಫ್ರಾಜ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಆರಿಫ್ ಸಾಲ್ಮರ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹೈದರ್ ಚಾಯ್ಸ್, ಜೊತೆ ಕಾರ್ಯದರ್ಶಿಯಾಗಿ ಶಾಕಿರ್, ಕೋಶಾಧಿಕಾರಿಯಾಗಿ ಅಬ್ದುಲ್ ಶುಕೂರ್, ಸಂಘಟನಾ ಕಾರ್ಯದರ್ಶಿಯಾಗಿ ಅಸ್ಪಾಕ್ ಬಪ್ಪಳಿಗೆ, ಕಾನೂನು ಸಲಹೆಗಾರರಾಗಿ ಸಿದ್ದಿಕ್ ಹಾಜಿ ಕಲ್ಲೇಗ ಮತ್ತು ಕಮರುದ್ದೀನ್ ಸಾಲ್ಮರ ಅವರನ್ನು ಆಯ್ಕೆ ಮಾಡಲಾಯಿತು. ಪಬ್ಲಿಕ್ ರಿಲೇಷನ್ ಮುಖ್ಯಸ್ಥರಾಗಿ ಇಮ್ತಿಯಾಜ್ ಪಾರ್ಲೆ, ಅಝೀಝ್ ಬೆಸ್ಟ್ ಹಾಗೂ ಇಕ್ಬಾಲ್ ಚಮಕ್, ಮೀಡಿಯಾ ವಿಭಾಗಕ್ಕೆ ಆರಿಸ್ ಝರಾ, ಎಜುಕೇಶನ್ ವಿಭಾಗಕ್ಕೆ ಆಸೀಫ್ ಐಡಿಯಾ, ಮೆಡಿಕಲ್ &ಬ್ಲಡ್ ವಿಭಾಗಕ್ಕೆ ಬಶೀರ್ ಚಾಂದ್ ಹಾಗೂ ಬಾತೀಶ ಐವ, ಪ್ರೋಗ್ರಾಮ್ ಮ್ಯಾನೇಜ್‌ಮೆಂಟ್‌ಗೆ ಹನೀಫ್ ಪುಣ್ಚತ್ತಾರ್ ಹಾಗೂ ಸಮೀರ್ ಮಿಶ್ರ, ಕ್ರೀಡಾ ಉಸ್ತುವಾರಿಯಾಗಿ ಇಜಾಝ್ ಪುತ್ತೂರು, ಮಾಸಿಕ ರೇಷನ್ ಕಿಟ್ ವಿಭಾಗಕ್ಕೆ ನೌಶಾದ್ ಕೂರ್ನಡ್ಕ ಮತ್ತು ಆಸೀಫ್ ಅಜ್ಜಿಕಟ್ಟೆ, `ಇ ಸರ್ವೇ ವಿಭಾಗಕ್ಕೆ ರಿಯಾಜ್ ಝರಾ ಹಾಗೂ ಮುಝಮಿಲ್ ಚಾಯ್ಸ್ ಅವರನ್ನು ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರೆಲ್ಲರನ್ನು ಕೋರ್ ಕಮಿಟಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

`ಇ ಫ್ರೆಂಡ್ಸ್ ಪುತ್ತೂರು’ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಸಂಘಟನೆಯು ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿತ್ತು. ಇದೀಗ `ಇ ಫೌಂಡೇಶನ್ ಇಂಡಿಯಾ’ ಎನ್ನುವ ಹೆಸರಿನಲ್ಲಿ ಸರಕಾರದಿಂದ ನೊಂದಾವಣೆಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇ ಫೌಂಡೇಶನ್ ಇಂಡಿಯಾ ಹೆಸರಿನಲ್ಲಿ ಕಾರ್ಯಾಚರಿಸಲಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.