HomePage_Banner
HomePage_Banner
HomePage_Banner
HomePage_Banner

ರಾಮಕ್ಷತ್ರೀಯ ಸಮಾಜ ಬಾಂಧವರ ವಾರ್ಷಿಕ ಕ್ರೀಡೋತ್ಸವ


ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ರಾಮಕ್ಷತ್ರೀಯ ಸೇವಾ ಸಂಘ ಹಾಗೂ ರಾಮಕ್ಷತ್ರೀಯ ಮಹಿಳಾ ಸಂಘದ ೨೬ನೇ ವಾರ್ಷಿಕೋತ್ಸವದ ಅಂಗವಾಗಿ ಸಮಾಜ ಬಾಂಧವರ ವಾರ್ಷಿಕ ಕ್ರೀಡೋತ್ಸವವು ಏ.೪ ರಂದು ಕೆಮ್ಮಿಂಜೆ-ರಾಮನಗರ-ಎನ್‌ಆರ್‌ಸಿಸಿ-ಗೋಲೆಕ್ಸ್ ಬಳಿಯ ರಾಮಕ್ಷತ್ರೀಯ ಸಮುದಾಯ ಭವನದ ನಿವೇಶನದಲ್ಲಿ ಜರಗಿತು.

ಸಿಎ ಬ್ಯಾಂಕ್ ಅಜ್ಜಾವರ ಶಾಖೆಯ ಪ್ರಬಂಧಕರಾಗಿರುವ ದಿನೇಶ್ ಕುಮಾರ್ ಕೆ.ರವರು ಕ್ರೀಡೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದು ಇಂದಿನ ಅವಶ್ಯಕವಾಗಿದೆ. ಒತ್ತಡದ ಬದುಕಿನ ನಡುವೆ ಆರೋಗ್ಯದ ದೃಷ್ಟಿಯಿಂದ ಕ್ರೀಡೆಯಲ್ಲಿ ಪಾಲ್ಗೊಂಡಾಗ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ರಾಮಕ್ಷತ್ರೀಯ ಸೇವಾ ಸಂಘದ ಗೌರವಾಧ್ಯಕ್ಷರಾಗಿರುವ ಚಂದ್ರಹಾಸ ಕೆಮ್ಮಿಂಜೆರವರು ಕ್ರೀಡಾಧ್ವಜವನ್ನು ಅರಳಿಸಿ ಮಾತನಾಡಿ, ಸಮಾಜ ಬಾಂಧವರಲ್ಲಿ ಯುವಕರು ಗರಿಷ್ಟ ಸಂಖ್ಯೆಯಲ್ಲಿ ಕ್ರೀಡೋತ್ಸವದಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಮಾಜ ಬಾಂಧವರ ಈ ಸಂಘವನ್ನು ಯುವಸಮೂಹ ಉಳಿಸಿ ಬೆಳೆಸುವಂತಾಗಬೇಕು ಎಂದರು.

ನಿವೃತ್ತ ಶಿಕ್ಷಕ ಚಂದ್ರಶೇಖರ ಕುದ್ರುಮನೆಯವರು ಮಾತನಾಡಿ, ಕಾಡಿಗೆ ರಾಜನಾಗಿರುವ ಸಿಂಹವು ತಾನು ನಡೆದು ಬಂದ ಹಾದಿಯನ್ನು ಸಿಂಹಾವಲೋಕನ ಎಂದು ಕರೆಯುವ ಹಾಗೆ ನಮ್ಮ ಈ ರಾಮಕ್ಷತ್ರೀಯ ಸೇವಾ ಸಂಘವು ಮೊದಲಿಗೆ ಕೆಮ್ಮಿಂಜೆ ದೇವಸ್ಥಾನದ ಶ್ರೀರಾಮ ಭಜನಾ ಮಂದಿರದಲ್ಲಿ ಆರಂಭವಾಗಿ ೨೧ ವರ್ಷವನ್ನು ಯಶಸ್ವಿಯಾಗಿ ತಲುಪಿದೆ ಎಂದು ಹೇಳಲು ಖುಶಿ ಎನಿಸುತ್ತದೆ. ಶ್ರೀರಾಮನ ಅನುಗ್ರಹದಿಂದ ಕೆಮ್ಮಿಂಜೆ ದೇವಸ್ಥಾನದ ಹತ್ತಿರದಲ್ಲಿನ ದೈವದೇವರ ಸಾನಿಧ್ಯದ ಪಕ್ಕದಲ್ಲಿ ನಿವೇಶನ ಸಿಕ್ಕಿರುವುದು ಸಂತೋಷದ ವಿಷಯ ಎಂದರು.

ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಆನಂದ ಪಿ.ರವರು ಮಾತನಾಡಿ, ಕ್ಷತ್ರೀಯರು ಸಂಘಟನಾ ವೀರರು ಮಾತ್ರವಲ್ಲದೆ ವೀರತನದಲ್ಲಿ ಮುಂದಾಳತ್ವ ವಹಿಸಿಕೊಳ್ಳುವವರು. ಇದೀಗ ಸ್ವಂತ ನಿವೇಶನದ ಜೊತೆಗೆ ಸ್ವಜಾತಿ ಬಾಂಧವರಿಗೆ ಸ್ವಂತ ಕಟ್ಟಡ ಆಗುತ್ತಿರುವುದು ಶ್ಲಾಘನೀಯ. ಸರಕಾರದಿಂದ ನಮ್ಮ ಈ ಸಮುದಾಯ ಭವನಕ್ಕೆ ಅನುದಾನ ಸಿಗುವಲ್ಲಿ ಪಯತ್ನ ಮಾಡಬೇಕಿದೆ ಜೊತೆಗೆ ನಮ್ಮ ಸ್ವ-ಜಾತಿ ಸಂಘಟನೆ ಬಲವರ್ಧನೆಗೊಳಿಸಲು ಸರ್ವರ ಸಹಕಾರ ಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ರಾಮಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಕೆ.ರವರು ಮಾತನಾಡಿ, ನಮ್ಮ ಸ್ವ-ಜಾತಿ ಬಾಂಧವರಿಗೆ ಸ್ವಂತ ನಿವೇಶನ ಸಿಕ್ಕಿರುವುದು ಐತಿಹಾಸಿಕ ಕ್ಷಣದಲ್ಲೊಂದಾಗಿದೆ. ನಮ್ಮ ಸ್ವ-ಜಾತಿ ಬಾಂಧವರ ಕಾರ್ಯಕ್ರಮಗಳನ್ನು ನಮ್ಮದೇ ಸ್ವಂತ ನಿವೇಶನದಲ್ಲಿ ಹಮ್ಮಿಕೊಂಡಿರುವುದು ಎಲ್ಲರ ಸಹಕಾರದಿಂದಾಗಿದೆ. ಮುಂಬರುವ ವರ್ಷ ನಮ್ಮ ಸ್ವಂತ ಕಟ್ಟಡದಲ್ಲಿ ವಾರ್ಷಿಕೋತ್ಸವ ಆಚರಿಸುವ ಯೋಗ ಕೂಡಿ ಬರಲಿ ಎಂದರು.

ರಾಮಕ್ಷತ್ರೀಯ ಮಹಿಳಾ ಸಂಘದ ಗೌರವಾಧ್ಯಕ್ಷೆ ಉಷಾ ಅಶೋಕ್, ಕ್ರೀಡಾ ಕಾರ್ಯದರ್ಶಿ ಧೀರಜ್ ಮರೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಶ್ಮಿತಾ, ನವ್ಯ, ಮಮತಾ ಪ್ರಾರ್ಥಿಸಿದರು. ರಾಮಕ್ಷತ್ರೀಯ ಸೇವಾ ಸಂಘದ ಕಾರ್ಯದರ್ಶಿ ನವನೀತ್ ಬಜಾಜ್ ಸ್ವಾಗತಿಸಿ, ರಾಮಕ್ಷತ್ರೀಯ ಮಹಿಳಾ ಸಂಘದ ಕಾರ್ಯದರ್ಶಿ ವಿಜಯಲಕ್ಷ್ಮೀ ಸಿ.ಎಚ್ ಅತ್ತಾಳ ವಂದಿಸಿದರು. ರಾಮಕ್ಷತ್ರೀಯ ಮಹಿಳಾ ಸಂಘದ ಅಧ್ಯಕ್ಷೆ ಮಮತಾ ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮೀಳಾ ಚಂದ್ರಶೇಖರ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರಾಮಕ್ಷತ್ರೀಯ ಮಹಿಳಾ ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.

ಕ್ರೀಡಾ ಸ್ಪರ್ಧೆಗಳು…
ರಾಮಕ್ಷತ್ರೀಯ ಸ್ವ-ಜಾತಿ ಬಾಂಧವರಿಗೆ ಬಾಂಬಿಂಗ್‌ದ ಸಿಟಿ(ಎಲ್ಲರಿಗೂ), ಅಂದಬರಹ(೧ ರಿಂದ ೪), ಸಂಗೀತ ಕುರ್ಚಿ(ಪುರುಷರಿಗೆ ಮತ್ತು ಮಹಿಳೆಯರಿಗೆ), ಚಿತ್ರಕಲೆ(೧ ರಿಂದ ೪,೫ರಿಂದ ೭,೮ ರಿಂದ ೧೦ನೇ ತರಗತಿ), ಬಲೂನ್ ಆಟ(ಮಹಿಳೆಯರಿಗೆ), ಕಪ್ಪೆ ಜಿಗಿತ(ಚಿಕ್ಕ ಮಕ್ಕಳಿಗೆ), ಕ್ರಿಕೆಟ್, ಟೆನ್ನಿಕಾಯಿಟ್ ಗೇಮ್, ಪಿರಾಮಿಡ್ ಗೇಮ್(೧ ನಿಮಿಷ), ಗುಂಡೆಸೆತ(ಪುರುಷರಿಗೆ ಮತ್ತು ಮಹಿಳೆಯರಿಗೆ) ಹಾಗೂ ೫೦ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹಾಗೂ ಪುರುಷರಿಗೆ ವಿಶೇಷ ಆಕರ್ಷಣೀಯ ಸ್ಪರ್ಧೆಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.