ಪುತ್ತೂರು: ಏ.23-24 ರಂದು ಕೋಟಿ-ಚೆನ್ನಯರ ಜನ್ಮಸ್ಥಾನ ಪಡುಮಲೆಯಲ್ಲಿ ಜರಗುವ ಬ್ರಹ್ಮಕಲಶೋತ್ಸವದ ಮನವಿ ಪತ್ರವನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಾಸಿಕ ಸಭೆಯಲ್ಲಿ ಹಸ್ತಾಂತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಹಿರಿಯ ಸದಸ್ಯರಾದ ರಾಜು ಪೂಜಾರಿ ಶಿರ್ತಾಡಿಯವರು ವಹಿಸಿದ್ದರು. ಕೊಟಿ-ಚೆನ್ನಯ ಪಡುಮಲೆ ಸಂಚಲನ ಸಮಿತಿ ಟ್ರಸ್ಟ್ನ ಉಪಾಧ್ಯಕ್ಷ ವಿಜಯ ಕುಮಾರ್ ಸೊರಕೆಯವರು, ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ವಿವರಣೆ ನೀಡಿದರು. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು ಮತ್ತು ಕೊಶಾಧಿಕಾರಿ ಯೋಗೀಶ್ ಕೋಟ್ಯಾನ್, ಮಹಾಮಂಡಲದ ಸದಸ್ಯರು, ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನದ ಪುತ್ತೂರು ಸಮಿತಿಯ ಅಧ್ಯಕ್ಷರಾದ ವೇದನಾಥ ಸುವರ್ಣರವರು ಉಪಸ್ಥಿತರಿದ್ದರು.