HomePage_Banner
HomePage_Banner
HomePage_Banner
HomePage_Banner

ಇರ್ದೆ ದೇವಾಲಯದಲ್ಲಿ ಶ್ರೀಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾವು ಸದ್ಗುಣ, ಸನ್ನಡತೆ, ಸಚ್ಚಾರಿತ್ರವಂತರಾಗಿರ ಬೇಕು- ಉಮೇಶ್ ಮಿತ್ತಡ್ಕ

ನಿಡ್ಪಳ್ಳಿ: ದೇವರನ್ನು ಬಹಿರಂಗವಾಗಿ ಆರಾದಿಸಿದರೆ ಸಾಲದು ಅದು ನಮ್ಮ ಅಂತರಂಗದಲ್ಲಿ ಇರಬೇಕು. ನಾವು ಸದ್ಗುಣ, ಸನ್ನಡತೆ, ಸಚ್ಚಾರಿತ್ರವಂತರಾಗಿದ್ದರೆ ನಮ್ಮ ಹೃದಯದಲ್ಲಿ ದೇವರು ನೆಲೆಯೂರುತ್ತಾನೆ. ಆಗ ನಮ್ಮ ಸಂಸ್ಕ್ರತಿ, ಸಂಸ್ಕಾರ, ಆಚಾರ ವಿಚಾರಗಳು ಮುಂದುವರಿಯಲು ಸಾಧ್ಯ ಎಂದು ಸುದ್ದಿ ಬಿಡುಗಡೆ ಪತ್ರಿಕೆ ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕ ನುಡಿದರು.

 ಅವರು ಏ.೪ ರಂದು ಇರ್ದೆ ದೇವಾಲಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಶ್ರೀ ವಿಷ್ಣುಮೂರ್ತಿ ದೇವಾಲಯ ಶ್ರೀ ಗೋಪಾಲ ಕ್ಷೇತ್ರ ಇರ್ದೆ ಇದರ ಆಶ್ರಯದಲ್ಲಿ ಪ್ರಗತಿ ಬಂಧು, ಸ್ವ- ಸಹಾಯ ಸಂಘಗಳ ಒಕ್ಕೂಟ ಕಕ್ಕೂರು, ಬೆಟ್ಟಂಪಾಡಿ, ದೂಮಡ್ಕ, ಪೇರಲ್ತಡ್ಕ, ಅಜ್ಜಿಕಲ್ಲು, ಉಪ್ಪಳಿಗೆ, ಗುಮ್ಮಟೆಗದ್ದೆ ಇವುಗಳ ಸಹಕಾರದೊಂದಿಗೆ ನಡೆದ ೧೭ ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಎಸ್.ಕೆ.ಡಿ.ಅರ್.ಡಿ.ಪಿ ಪುತ್ತೂರು ಯೊಜನಾಧಿಕಾರಿ ಆನಂದ. ಕೆ ಮಾತನಾಡಿ ಸಾಮೂಹಿಕವಾಗಿ ದೇವರನ್ನು ಪೂಜಿಸಿದರೆ ಇಡೀ ಸಮಾಜಕ್ಕೆ ಒಳ್ಳೆಯದಾಗುತ್ತದೆ.ಮನೆಯಲ್ಲಿ ಸಂಸ್ಕ್ರತಿ ಸಂಸ್ಕಾರ ಉಳಿಯಲು ಇಂತಹ ಧಾರ್ಮಿಕ ಕಾರ್ಯಕ್ರಮ ಉತ್ತಮ. ಇದು ಇನ್ನೂ ಮುಂದುವರಿಸುತ್ತಾ ಹೋಗುವುದು ಸೂಕ್ತ ಎಂದು ಹೇಳಿ ಶುಭ ಹಾರೈಸಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷ ನಾರಾಯಣ ಪಾಟಾಳಿ ದೆಯ್ಯರಡ್ಕ ವಹಿಸಿದ್ದರು. ಶ್ರೀ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್. ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ ದೆಯ್ಯರಡ್ಕ, ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ವಿಠಲ ರೈ ಬೈಲಾಡಿ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಬೆಟ್ಟಂಪಾಡಿ ವಲಯದ ಅಧ್ಯಕ್ಷ ನವೀನ್ ಕುಮಾರ್. ಎಂ, ಪೂಜಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ರೈ ಬೈಲಾಡಿ ಮಾತನಾಡಿದರು.

ಕಕ್ಕೂರು ಒಕ್ಕೂಟದ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಸ್ವಾಗತಿಸಿ, ವಿಜಯಲಕ್ಷ್ಮಿ ಎಸ್.ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂಜಾ ಸಮಿತಿ ಕಾರ್ಯದರ್ಶಿ ಜಗದೀಶ್ ಸಿ.ಚೆಲ್ಯಡ್ಕ ವರದಿ ವಾಚಿಸಿದರು.ದೂಮಡ್ಕ ಒಕ್ಕೂಟದ ಅಧ್ಯಕ್ಷ ಕೃಷ್ಣ ನಾಯ್ಕ ಬಳ್ಳ ವಂದಿಸಿ, ವಿವೇಕಾನಂದ ಶಾಲಾ ಶಿಕ್ಷಕಿ ನಮಿತಾ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.ಚಿದಾನಂದ, ಸುರೇಶ ಪೇರಲ್ತಡ್ಕ, ವಿಶ್ವನಾಥ ಪಾಟಾಳಿ,ಕುಶಾಲಪ್ಪ ದೂಮಡ್ಕ, ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ, ಕುಶಾಲಪ್ಪ ಅಜ್ಜಿಕಲ್ಲು, ದಾಮೋದರ ಪಾಟಾಳಿ ಅರಂತ್ನಡ್ಕ, ವಸಂತ ನಾಯ್ಕ ಅತಿಥಿಗಳಿಗೆ ಪುಷ್ಪಗುಚ್ಚ ನೀಡಿ ಗೌರವಿಸಿದರು. ವೇದ ಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು ನೇತೃತ್ವದಲ್ಲಿ ಪೂಜಾ ವಿಧಿ ವಿದಾನಗಳು ನಡೆಯಿತು. ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ಏಳು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸೇವಾ ಪ್ರತಿನಿಧಿಗಳು, ಭಕ್ತಾದಿಗಳು ಪಾಲ್ಗೊಂಡರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.