ಪುತ್ತೂರು : ಬೊಳುವಾರು ವಿಶ್ವಕರ್ಮ ಯುವ ಸಮಾಜದ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಂಘದ ಮಾಸಿಕ ಸಭೆಯಲ್ಲಿ ನಡೆಸಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಮುಳಿಯ ಜುವೆಲ್ಸ್ ವರ್ಕ್ಸ್ನ ಉದ್ಯೋಗಿ ಸುರೇಶ್ ಆಚಾರ್ಯ ಕಾಣಿಯೂರು, ಕಾರ್ಯದರ್ಶಿಯಾಗಿ ಪವರ್ಸಾಫ್ಟ್ ಟೆಕ್ನಾಲಜೀಸ್ನ ಮಾಲಕರಾದ ಪ್ರಕಾಶ ಆಚಾರ್ಯ ಬೆಳ್ಳಿಪಾಡಿ ಪುನರಾಯ್ಕೆಗೊಂಡರು.
ಸಲಹಾ ಸಮಿತಿಯ ಸದಸ್ಯರಾಗಿ ಭುಜಂಗ ಆಚಾರ್ಯ, ಎಸ್.ಎನ್.ಜಗದೀಶ ಆಚಾರ್ಯ, ರಮೇಶ ಆಚಾರ್ಯ ಮಾಮೇಶ್ವರ ಆಯ್ಕೆಯಾದರು. ಸಂಘದ ಉಪಾಧ್ಯಕ್ಷರಾಗಿ ಹರೀಶ್ ಆಚಾರ್ಯ ಕೊಡಪಟ್ಯ, ವಾಸು ಆಚಾರ್ಯ ಕಲಾಯಿತಡ್ಕ, ಕೋಶಾಧಿಕಾರಿಯಾಗಿ ವಸಂತ ಆಚಾರ್ಯ ಬೊಳುವಾರು, ಜತೆ ಕಾರ್ಯದರ್ಶಿಯಾಗಿ ಮಹೇಶ್ ಆಚಾರ್ಯ ಪರ್ಲಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ ಆಚಾರ್ಯ ಕೊಕ್ಕಡ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿಶನ್ ಬಿ.ವಿ. ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ್ ಬಿ.ವಿ. ಪತ್ರಿಕಾ ಕಾರ್ಯದರ್ಶಿಯಾಗಿ ಆನಂದ್ ಆಚಾರ್ಯ ಅಜ್ಜಿನಡ್ಕ ಆಯ್ಕೆಯಾದರು. ಕಾರ್ಯಕಾರಿ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ನೂತನ ಸದಸ್ಯರಾದ ಪ್ರವೀಣ್ ಆಚಾರ್ಯ ಮುಕ್ವೆ, ದಿನೇಶ್ ಆಚಾರ್ಯ ಮತ್ತು ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು. ಶ್ರೀನಿವಾಸ ಆಚಾರ್ಯ ಪಡೀಲು ಪ್ರಾರ್ಥಿಸಿದರು. ಸಂಘದ ಅಧ್ಯಕ್ಷರಾದ ಸುರೇಶ್ ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ಪ್ರಕಾಶ ಆಚಾರ್ಯ ವಂದಿಸಿದರು.