HomePage_Banner
HomePage_Banner
HomePage_Banner
HomePage_Banner

ಶಕುಂತಲಾ ಶೆಟ್ಟಿ ಹೋರಾಟದಿಂದ ಬಿಜೆಪಿಯವರಿಗೆ ವಾಂತಿ, ಬೇಧಿ ಪ್ರಾರಂಭ; ದಾಖಲೆಗಳು ಆರೋಪವಾಗಿದ್ದರೆ ಎಸಿಬಿ,ಲೋಕಾಯಕ್ತರಿಗೆ ದೂರು ನೀಡಲಿ

ಪುತ್ತೂರು: ಬಡ ಮಹಿಳೆಗೆ ೯೪ಸಿಸಿ ಯೋಜನೆಯಲ್ಲಿ ಹಕ್ಕು ಪತ್ರ ನೀಡಲು ಸತಾಯಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಹೋರಾಟದ ಫಲವಾಗಿ ಆ ಮಹಿಳೆಗೆ ಹಕ್ಕುಪತ್ರ ದೊರೆತಿದೆ. ಮಾಜಿ ಶಾಸಕರ ಜನಪರ ಕಾಳಜಿ ಹಾಗೂ ಹೋರಾಟದ ಬಗ್ಗೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹಾಗೂ ಬಿಜೆಪಿಯವರಿಗೆ ಹೊಟ್ಟೆ ತೊಲಸಿ ವಾಂತಿ, ಭೇದಿ ಪ್ರಾರಂಭವಾಗಿದೆ ಎಂದು ನಗರ ಸಭಾ ಮಾಜಿ ಸದಸ್ಯ ಮಹಮ್ಮದ್ ಆಲಿ ಆರೋಪಿಸಿದರು.

ಎ.೫ರಂದು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆರ್ಯಾಪು ಗ್ರಾಮದ ಬೊಳ್ಳಾಣ ನಿವಾಸಿ ಸೀತಮ್ಮರವರು ೯೪ ಸಿಸಿ ಯಲ್ಲಿ ಅರ್ಜಿ ಸಲ್ಲಿಸಿ, ಕಳೆದ ಎರಡು ವರ್ಷಗಳಿಂದ ತಾಲೂಕು ಕಚೇರಿ ಅಳೆದಾಡಿರುವುದಲ್ಲದೆ, ಶಾಸಕರು ಹಾಗೂ ಪಕ್ಷದ ನಾಯಕರನ್ನು ಭೇಟಿ ಮಾಡಿ ಹಕ್ಕು ಪತ್ರ ದೊರಕಿಸಿಕೊಂಡುವಂತೆ ವಿನಂತಿಸಿದ್ದರು. ಆದರೆ ಅವರ ಮನವಿ ಸ್ಪಂಧನೆ ದೊರೆಯಲಿಲ್ಲ. ಹೀಗಾಗಿ ಅವರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಲ್ಲಿ ತಮ್ಮ ಸಮಸ್ಯೆ ತೋಡಿಕೊಂಡಾಗ ಕಂದಾಯ ಇಲಾಖಾಧಿಕಾರಿಗಳಲ್ಲಿ ಭೇಟಿ ಮಾಡಿ ಹಕ್ಕು ಪತ್ರ ನೀಡಲು ಶತಪ್ರಯತ್ನ ಮಡಿದ್ದರು. ಆದರೂ ಅಧಿಕಾರಿಗಳು ಹಕ್ಕು ಪತ್ರ ಒದಗಿಸುವಲ್ಲ ವಿಫಲರಾಗಿದ್ದಾರೆ. ಬಳಿಕ ಶಕುಂತಳಾ ಶೆಟ್ಟಿಯವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಗಮನಕ್ಕೆ ತಂದಿದ್ದರು. ಹಾಗಿದ್ದರೂ ಅಧಿಕಾರಿಗಳು ಹಕ್ಕು ಪತ್ರ ನೀಡಲು ವಿಳಂಬ ದೋರಣೆ ಅನುಸರಿಸಿದ್ದರು. ಈ ಷಡ್ಯಂತ್ರದ ಹಿನ್ನೆಲೆಯಲ್ಲಿ ಮಾ.೮ರಂದು ಶಕುಂತಳಾ ಶೆಟ್ಟಿಯವರು ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್‌ರವರನ್ನು ತರಾಟೆಗೆ ತೆಗೆದುಕೊಂಡಿರುವುದಲ್ಲದೆ ಮಾ.೨೦ನೇ ಒಳಗಾಗಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಹಕ್ಕುಪತ್ರ ನೀಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದರು. ಆದರೆ ಮಾ.೨೫ ತಾರಿಕು ಕಳೆದರೂ ಹಕ್ಕಪತ್ರ ನೀಡಿರಲಿಲ್ಲ. ಇದರ ಹಿಂದೆ ಏನೋ ಷಡ್ಯಂತ್ರ ಇದೆ ಎಂಬುದನ್ನು ಅರಿತು ಮಾ.೨೬ರಂದು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲಿಗೆ ಬಂದ ತಹಶೀಲ್ದಾರ್ ಕೆಲವೊಂದು ಸಾಬೂಬು ಹೇಳಿ ಹಕ್ಕು ಪತ್ರ ನೀಡಲು ಹಿಂದೇಟು ಹಾಕಿದ್ದರು. ಇದಕ್ಕೆ ಪಟ್ಟು ಬಿಡದೆ ಮಾಜಿ ಶಾಸಕರು ಬಡ ಮಹಿಳೆಗೆ ಹಕ್ಕು ಪತ್ರ ದೊರೆಯದೇ ಇಲ್ಲಿ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಹಕ್ಕುಪತ್ರ ನಕಲು ಪ್ರತಿಯನ್ನು ಈಗ ನೀಡಲಾಗುವುದು. ಅದರ ಮೂಲ ಪ್ರತಿಯನ್ನು ಶಾಸಕರ ಮೂಲಕ ನೀಡಲಾಗುವುದು ಎಂದು ಪ್ರತಿಭಟನಾ ಸಭೆಗೆ ಬಂದಿದ್ದ ತಹಶೀಲ್ದಾರ್ ತಿಳಿಸಿದ್ದರು. ಅದಕ್ಕೆ ಸಹಮತ ಸೂಚಿಸಿ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದೇವೆ. ಈ ಎಲ್ಲಾ ಬೆಳವಣಿಗೆಗೆಳ ಬಳಿಕ ಶಾಸಕ ಮುಖಾಂತರ ಆ ಮಹಿಳೆಗೆ ಹಕ್ಕು ಪತ್ರ ನೀಡಲಾಗಿರುತ್ತದೆ ಎಂದ ತಿಳಿಸಿದರು.

ನಾಲಾಯಕ್ ಜನಪ್ರತಿನಿಧಿ:
ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕರಾವಳಿ ಶಾಸಕರ ಮನವಿಯಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೯೪ಸಿ ಯೋಜನೆ ಜಾರಿಗೆ ತಂದಿದ್ದರು. ಇದರಲ್ಲಿ ಶಕುಂತಳಾ ಶೆಟ್ಟಿಯವರ ಅವಧಿಯಲ್ಲಿ ತಾಲೂಕಿನಲ್ಲಿ ೯೪ ಸಿ, ಹಾಗೂ ಸಿಸಿ ಸೇರಿದಂತೆ ಒಟ್ಟು ೧೧,೫೦೦ ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದ ೫% ಹಕ್ಕುಪತ್ರ ವಿತರಿಸಲು ಸಂಜೀವ ಮಠಂದೂರು ಅವರಿಗೆ ಸಾಧ್ಯವಾಗದೇ ಇದ್ದು, ಯಾರು ನಿದ್ದೆಯಲ್ಲಿರುವುದು ಎಂಬುದನ್ನು ಅವರು ಜ್ಞಾಪಿಸಿಕೊಳ್ಳಲಿ. ಅವರು ಕಳೆದ ಮೂರು ವರ್ಷಗಳಲ್ಲಿ ಬಡ ಜನರಿಗೆ ಏನು ಕೊಟ್ಟಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಶೇ.೫ರಷ್ಟು ಬಾಕಿಯಿದ್ದ ಹಕ್ಕುಪತ್ರಗಳನ್ನು ವಿತರಿಸಲು ಸಾಧ್ಯವಾಗದ ಶಾಸಕರು ಜನಪ್ರತಿನಿಧಿಯಾಗಿರಲು ನಾಲಾಯಕ್ ಎಂದರು. ಮಾಜಿ ಶಾಸಕಿಯ ಬಗ್ಗೆ ಟೀಕೆ ಮಾಡಿರುವುದನ್ನು ಖಂಡಿಸುವುದಾಗಿ ಮಹಮ್ಮದ್ ಅಲಿ ತಿಳಿಸಿದರು.

ದಾಖಲೆಗಳು ಆರೋಪವಾಗಿದ್ದರೆ ಎಸಿಬಿ,ಲೋಕಾಯಕ್ತರಿಗೆ ದೂರು ನೀಡಲಿ:
ಶಾಸಕರು ಮುಖಾಂತರ ಬಡ ಮಹಿಳೆ ಸೇರಿದಂತೆ ಹಲವು ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದಾದ ಬಳಿಕ ಬಿಜೆಪಿ ಪದಾಧಿಕಾರಿಗಳು ಆ ಮಹಿಳೆ ನೀಡಿರುವ ದಾಖಲೆಗಳು ಬೋಗಸ್ ಎಂಬ ಆರೋಪ ಮಾಡಿದ್ದಾರೆ. ದಾಖಲೆಗಳು ಬೋಗಸ್ ಆಗಿದ್ದರೆ ಅಧಿಕಾರಿಗಳು ಯಾವ ರೀತಿ ಹಕ್ಕು ಪತ್ರ ನೀಡಿದ್ದಾರೆ. ಶಾಸಕರು ಯಾಕೆ ಹಕ್ಕುಪತ್ರ ವಿತರಣೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು ಮಹಿಳೆ ನೀಡಿದ ದಾಖಲೆಗಳು ಬೋಗಸ್ ಆಗಿದ್ದರೆ ಅದರ ಬಗ್ಗೆ ಎಸಿಬಿ ಅಥವಾ ಲೋಕಾಯುಕ್ತರಿಗೆ ದೂರು ನೀಡಿ ತನಖೆ ನಡೆಸಲಿ. ದಾಖಲೆಗಳು ಸುಳ್ಳಾಗಿದ್ದರೆ ಅದನ್ನು ನೀಡಿದ ನಗರ ಸಭೆಯ ವಿರುದ್ಧವೂ ತನಿಖೆ ನಡೆಸಲಿ ಎಂದು ಆಲಿ ಸವಾಲು ಹಾಕಿದರು.

ಬಿಜೆಪಿಯಿಂದ ಕುತಂತ್ರ, ನಾಟಕ:
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಹೋರಾಟದಿಂದ ರಾಜಕೀಯಕ್ಕೆ ಬಂದವರು. ಅವರು ಎಲ್ಲಿಯೂ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಆದರೆ ಬಿಜೆಪಿಯವರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ನಾಟಕ ಮಾಡುವುದು ಅವರ ಜಾಯಮಾನವಾಗಿದೆ ಅಲಿಯವರು ಆರೋಪಿಸಿದರು.

ತಾಕತ್ತಿದ್ದರೆ ಹಕ್ಕುಪತ್ರ ರದ್ದುಪಡಿಸಲಿ:
ಬಡ ಮಹಿಳೆಗೆ ಹಕ್ಕು ಪತ್ರ ನೀಡಲು ಶಾಸಕ ಸಂಜೀವ ಮಠಂದೂರುರವರೇ ಎಲ್ಲಾ ತಯಾರಿ ಮಾಡಿರುವುದಾಗಿ ಬಿಜೆಪಿ ಪದಾಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ ಶಾಸಕರು ಬೋಗಸ್ ದಾಖಲೆಗಳಿದ್ದವರಿಗೇ ಹಕ್ಕುಪತ್ರ ನೀಡಲು ತಯಾರಿ ನಡೆಸಿದ್ದಾರಾ? ಬೋಗಸ್ ದಾಖಲೆಗಳಾದರೆ ಅವರು ವಿತರಣೆ ಮಾಡಿದ್ದು ಯಾಕೆ? ಶಕುಂತಳಾ ಶೆಟ್ಟಿ ನೀಡುವುದಾದರೆ ಅದು ಬೋಗಸ್ ಆಗುತ್ತದೆ. ನಿಮ್ಮ ಶಾಸಕರು ನೀಡಿದರೆ ಅದು ಬೋಗಸ್ ಆಗುವುದಿಲ್ಲ. ಬಿಜೆಪಿಯವರಿಗೆ ಮರ್ಯಾದೆ, ಮಾನವೀಯತೆ ಇಲ್ವಾ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಆರೋಪಿಸಿದರು. ಮಾತೆತ್ತಿದರೆ ಹಿಂದುತ್ವ ಎಂದು ಹೇಳುವ ಬಿಜೆಪಿಯವರಿಗೆ ಬೊಳ್ಳಾಣದ ಬಡ ಸೀತಮ್ಮ ಹಿಂದು ಅಲ್ಲವೇ. ನಿಮ್ಮದೇನೂ ಡೊಂಘಿ ಹಿಂದುತ್ವವೇ ಎಂದು ಪ್ರಶ್ನಿಸಿದ ಅವರು, ದಾಖಲೆಗಳು ಬೋಗಸ್ ಎಂಬ ಕಾರಣಕ್ಕೆ ಬಡ ಮಹಿಳೆಗೆ ನೀಡಿರುವ ಹಕ್ಕುಪತ್ರವನ್ನು ತಾಕತ್ತಿದ್ದರೆ ರದ್ದುಗೊಳಿಸಲಿ. ನಿಮ್ಮ ಎಲ್ಲಾ ಪ್ರಯತ್ನಗಳನ್ನು ನಾವು ವಿಫಲಗೊಳಿಸುವುದಾಗಿ ಅವರು ತಿಳಿಸಿದರು.

ನಗರ ಸಭಾ ಸದಸ್ಯೆ ಶೈಲಾ ಪೈ, ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ ರೈ ಪಕ್ಷದ ಪ್ರಮುಖರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಜಾನ್ ಸಿರೀಲ್, ಸನತ್ ರೈ, ಸನಂ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.