HomePage_Banner
HomePage_Banner
HomePage_Banner
HomePage_Banner

ಕೇರಳದಲ್ಲಿ ಈ ಬಾರಿ ಹತ್ತಕ್ಕಿಂತಲೂ ಅಧಿಕ ಸ್ಥಾನದಲ್ಲಿ ಬಿಜೆಪಿ ಗೆಲುವು- ಕಟೀಲ್

ಪುತ್ತೂರು: ಈ ಬಾರಿಯ ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಲಿದ್ದು, ಹತ್ತಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಸರಗೋಡು ಮತ್ತು ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಗೆಲ್ಲಲಿದೆ. ಇದಲ್ಲದೆ ಕೇರಳದಲ್ಲಿ ಇನ್ನೂ ಎಂಟಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು ಎಂದು ಸಂಸದರೂ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಎ.೫ರಂದು ಎಪಿಎಂಸಿಯಲ್ಲಿ ಗೋದಾಮು, ಸೋಲಾರ್ ವಿದ್ಯುತ್ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ೨೦೧೬ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ನಾನು ಪಕ್ಷದಿಂದ ಸಹಪ್ರಭಾರಿಯಾಗಿ ಕೆಲಸ ಮಾಡಿದ್ದೇನೆ. ಲೋಕಸಭಾ ಚುನಾವಣೆಯಲ್ಲೂ ಸಹಪ್ರಭಾರಿಯಾಗಿದ್ದೆ. ಅಲ್ಲಿನ ರಾಜಕೀಯವನ್ನು ಸಂಪೂರ್ಣ ಅಭ್ಯಾಸ ಮಾಡಿದ್ದೇನೆ. ಹಿಂದಿಗಿಂತ ಈ ಬಾರಿ ಅಲ್ಲಿನ ರಾಜಕೀಯ ಚಿತ್ರಣ ಬದಲಾಗಿದೆ. ಹಿಂದೆ ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ ಕಾರಣ ಅದರ ಪ್ರಯೋಜನ ಎಲ್‌ಡಿಎಫ್‌ಗೆ ದೊರಕ್ಕಿತ್ತು. ಭ್ರಷ್ಟಾಚಾರ ರಹಿತ ಶುದ್ಧ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪಿಣರಾಯಿ ವಿಜಯನ್ ಸರಕಾರ ಈಗ ಅನೇಕ ಪ್ರಕರಣಗಳಲ್ಲಿ ಸಿಲುಕಿ ಒದ್ದಾಡುತ್ತಿದೆ. ಯುವ ಸಮುದಾಯ ಹಾಗೂ ಮಹಿಳಾ ವಲಯದಲ್ಲಿ ಈ ಬಾರಿ ಬಿಜೆಪಿ ಪರ ಅಲೆಯಿದೆ ಎಂದರು.

ಹಿಂದಿನಿಂದಲೂ ಕೇರಳದಲ್ಲಿ ಹಿಂದೂಗಳು ಎಲ್‌ಡಿಎಫ್ ಪರ ಭಾವನೆಯಿತ್ತು. ಆದರೆ ಶಬರಿಮಲೆ ಅಯ್ಯಪ್ಪ ಕ್ಷೇತ್ರದ ವಿಚಾರದ ಬಳಿಕ ಆ ಭಾವನೆ ಇಲ್ಲ. ಹಿಂದೂಗಳು ಎಲ್‌ಡಿಎಫ್ ವಿರೋಧಿಗಳಾಗಿದ್ದಾರೆ. ಪಿಣರಾಯಿ ವಿಜಯನ್ ಬಂದ ಮೇಲೆ ಹಲ್ಲೆ, ಹತ್ಯಾ ಪ್ರಕರಣಗಳು ಹೆಚ್ಚಾಗಿವೆ. ಹತ್ಯಾ ರಾಜಕಾರಣ, ದ್ವೇಷ ರಾಜಕಾರಣ ಈ ಬಾರಿ ಅವರಿಗೆ ಮುಳುವಾಗಲಿವೆದೀ ಈ ಬಾರಿಯ ಚುನಾವಣೆಯಲ್ಲಿ ಕರಾವಳಿಯ ಎಲ್ಲ ಬಿಜೆಪಿ ಶಾಸಕರನ್ನು ನಾವು ಈ ಬಾರಿ ಕಾಸರಗೋಡು ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದೇವೆ. ದ.ಕ. ಜಿಲ್ಲೆಯ ಸುಮಾರು ೧೫೦೦ ಕಾರ್ಯಕರ್ತರು ಅಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಛತ್ತೀಸಗಢದಲ್ಲಿ ಸೈನಿಕರ ಮೇಲೆ ನಡೆದ ಮಾವೋವಾದಿಗಳ ದಾಳಿಯ ಬಗ್ಗೆ ಮಾತನಾಡಿದ ಅವರು, ೨೦೦೪ರಿಂದ ೧೦೧೪ರವರೆಗೆ ದೇಶದಲ್ಲಿ ಮಾವೋವಾದಿಗಳ ಅಟ್ಟಹಾಸ ಅಧಿಕವಾಗಿತ್ತು. ದೇಶದಲ್ಲಿ ನರೇಂದ್ರ ಮೋದಿ ಸರಕಾರ ಬಂದ ಮೇಲೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಇಂದು ದೇಶದಲ್ಲಿ ಭಯೋತ್ಪಾದನೆಯೂ ನಿಂತಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣವಾಗಿದೆ. ಕೆಲವು ಸಂದರ್ಭದಲ್ಲಿ ಒಂದೆರಡು ಘಟನೆ ನಡೆಯುತ್ತಿದ್ದರೂ, ಕೆಲವೇ ಸಮಯದಲ್ಲಿ ಅದೂ ಸಂಪೂರ್ಣ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾ.ಪಂ ಜಿ.ಪಂ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ:
ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇದಕ್ಕೆ ಪೂರಕವಾಗಿ ಗ್ರಾಮ ಪಂಚಾಯತ್ ಚುನಾವಣೆಯಂತೆ ಎಲ್ಲಾ ತಯಾರಿಗಳನ್ನು ಮಾಡಲಾಗುವುದು. ಪ್ರತಿ ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಸಚಿವರ ಪ್ರವಾಸ ನಡೆಯಲಿದೆ. ಶಕ್ತಿಕೇಂದ್ರ, ಪೇಜ್ ಪ್ರಮುಖರ ಸಭೆ ನಡೆಸುವ ಮೂಲಕ ತಯಾರಿ ನಡೆಸಲಾಗುವುದು ಎಂದರು.

ಬೆಳಗಾಂ, ಮಸ್ತಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಹೀಗಾಗಿ ಎರಡು ಭಾರಿ ನಾನು ಅಲ್ಲಿಗೆ ಭೇಟಿ ನೀಡಿದ್ದೇನೆ. ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲುವುದರ ಜೊತೆಗೆ ಚುನಾವಣಾ ಸೋಲಿನ ಬಗ್ಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಮಧ್ಯೆ ಯಾರೂ ಹೊಣೆ ಹೊತ್ತುಕೊಳ್ಳಲಾಗದೆ ಪರಸ್ಪರ ಆರೋಪ ಮಾಡುವ ಮೂಲಕ ಆಂತರಿಕ ಜಗಳ ಅಧಿಕವಾಗಲಿದೆ ಎಂದು ಹೇಳಿದರು. ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.