HomePage_Banner
HomePage_Banner
HomePage_Banner
HomePage_Banner

ಕೌಡಿಚ್ಚಾರು ಸಿ.ಆರ್.ಸಿ ಕಾಲೊನಿಯಲ್ಲಿ ಓವರ್ ಹೆಡ್‌ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ದೇಶದ ಕಟ್ಟಕಡೆಯ ವ್ಯಕ್ತಿಗೂ ನೀರು, ಆಹಾರ, ವಸತಿ ವ್ಯವಸ್ಥೆ – ಮಠಂದೂರು

ಅರಿಯಡ್ಕ : ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆಯಡಿ ರೂ.೫೪.೧೦ ಲಕ್ಷ ಅನುದಾನದಲ್ಲಿ ಕೌಡಿಚ್ಚಾರು ಸಿ.ಆರ್.ಸಿ ಕಾಲೊನಿಯಲ್ಲಿ ರೂ.೧೫ ಲಕ್ಷ ವೆಚ್ಚದ ಓವರ್ ಹೆಡ್‌ಟ್ಯಾಂಕ್‌ಗೆ ಶಾಸಕ ಸಂಜೀವ ಮಠಂದೂರು ಎ.೫ ರಂದು ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ದೇಶದ ಕಟ್ಟಕಡೆಯ ವ್ಯಕ್ತಿಗೂ ನೀರು, ಆಹಾರ, ವಸತಿ ಸಿಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಪ್ರತಿ ಮನೆಗೆ ಗಂಗೆ ಯೋಜನೆಯ ಉದ್ದೇಶ. ಇಂದು ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಶಾಶ್ವತ ಕುಡಿಯುವ ನೀರಿಗೆ ಸರ್ಕಾರ ಯೋಜನೆಯನ್ನು ಕೈ ಗೊಂಡಿದೆ. ನಗರ ಭಾಗದ ಜನರಿಗೆ ಇರುವ ಎಲ್ಲಾ ಸೌಲಭ್ಯಗಳು, ಗ್ರಾಮೀಣ ಪ್ರದೇಶದ ಜನರಿಗೆ ಕೂಡ ಸಿಗಬೇಕು. ನಮ್ಮ ತಾಲೂಕಿನ ೨೫ ಕಡೆಗಳಲ್ಲಿ ಮೊಬೈಲ್ ಟವರ್ ಅಳವಡಿಸಲು ಜಿಯೋ ಮತ್ತು ಏರ್ ಟೆಲ್ ಸಂಸ್ಥೆಗಳು ಒಪ್ಪಿವೆ. ರಾಜೀವ ಗಾಂಧಿ ವಸತಿ ಯೋಜನೆಯಡಿ ೪೮೦ ಮನೆಗಳು ಸದ್ಯದಲ್ಲಿಯೇ ಬರುವುದಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಇದು ನಮ್ಮ ಉದ್ದೇಶ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತಾಡಿ, ಕೇಂದ್ರ ಸರ್ಕಾರ ೩೭.೫%, ರಾಜ್ಯ ಸರ್ಕಾರ ೩೭.೫% ಗ್ರಾಮ ಪಂಚಾಯತ್ ೧೫% ಮತ್ತು ಫಲಾನುಭವಿಗಳಿಂದ ೧೦% ಅನುದಾನ ದಿಂದ ಈ ಯೋಜನೆಯನ್ನು ರೂಪಿಸಲಾಗಿದೆ.ಇದರ ಅನುಷ್ಠಾನ ಜಿಲ್ಲಾ ಪಂಚಾಯತ್ ಮಾಡುತ್ತದೆ. ಈ ಟ್ಯಾಂಕ್ ನ ನೀರು ಎಲ್ಲಾ ಫಲಾನುಭವಿಗಳಿಗೆ ಸಿಗಲಿ. ಶೀಘ್ರದಲ್ಲಿ ಕಾಮಗಾರಿ ಪೂರ್ಣ ಗೊಂಡು ಲೋಕಾರ್ಪಣೆಗೊಳ್ಳಲಿ ಎಂದು ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿಯವರು ಮಾತನಾಡಿ ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನಗಳು ಬರುತ್ತಿದ್ದು ಪ್ರತಿ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ. ಈಭಾಗದ ಜನರ ನೀರಿನ ಸಮಸ್ಯೆ ಈ ಮೂಲಕ ಈಡೇರಿದೆ. ೫ ವರ್ಷಗಳಲ್ಲಿ ಜನತೆಯ ಸಮಸ್ಯೆಗೆ ಸ್ಪಂದಿಸುತ್ತಾ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನತೆ ಸಹಕಾರವನ್ನು ನೀಡಿ ಹಾರೈಸಿದ್ದಾರೆ. ಮುಂದೆಯೂ ಜನರ ಆಶೋತ್ತರಗಳಿಗೆ ಸ್ಪಂದಿಸುವೆ ಎಂದು ಹೇಳಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸಹಾಯಕ ಇಂಜಿನಿಯರ್ ಭರತ್, ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಬೂಡಿಯರ್ ರಾಧಾಕೃಷ್ಣ ರೈ, ಬಿ.ಜೆ.ಪಿ ತಾಲೂಕು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೊರಂಗ, ಬಡಗನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಆಳ್ವ, ಅರಿಯಡ್ಕ ಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ರೈ ಪಾಪೆಮಜಲು, ಕುಂಬ್ರ ಸಿ.ಎ ಬ್ಯಾಂಕ್ ನ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ, ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ, ನಾರಾಯಣ ನಾಯ್ಕ ಚಾಕೋಟೆ, ಸದಾನಂದ ಮಣಿಯಾಣಿ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಾವತಿ ಮರತ್ತಮೂಲೆ, ಮೀನಾಕ್ಷಿ ಪಾಪೆಮಜಲು, ಹೇಮಾವತಿ ಚಾಕೊಟೆ, ಅನಿತಾ ಆಚಾರಿ ಮೂಲೆ, ಉಷಾರೇಖಾರೈ ಅಮೈ, ಮಾಜಿ ಸದಸ್ಯ ಪೂವಪ್ಪ ನಾಯ್ಕ ಕುಂಞಕುಮೇರು, ಪಂಚಾಯತ್ ಪಿ.ಡಿ.ಓ ಪದ್ಮ ಕುಮಾರಿ, ಸ್ಥಳೀಯರಾದ ದೇವರಾಜ್ ಸಿ.ಆರ್.ಸಿ, ಮರದಮುತ್ತು, ಮತ್ತು ಸತೀಶ್ ಸಿ.ಆರ್.ಸಿ, ಪಂಚಾಯತ್ ಸಿಬ್ಬಂದಿ ಪ್ರಭಾಕರ ಮುಂತಾದವರು ಉಪಸ್ಥಿತರಿದ್ದರು. ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.