HomePage_Banner
HomePage_Banner
HomePage_Banner
HomePage_Banner

ಪಂಜಿಗುಡ್ಡೆ ಈಶ್ವರ ಭಟ್ ಮನೆಯಲ್ಲಿ ಅಡಿಕೆ ಕೊಯ್ಲು, ದ್ರಾವಣ ಸಿಂಪಡಣೆ ಪ್ರಾತ್ಯಕ್ಷಿಕೆ

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಅಡಿಕೆ ಕೊಯ್ಲು ಮತ್ತು ದ್ರಾವಣ ಸಿಂಪಡಣೆ ಪ್ರಾತ್ಯಕ್ಷಿತೆ ಕಾರ್ಯಕ್ರಮ ಎ.೫ರಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯಲ್ಲಿ ಜರಗಿತು.

ದೋಂಟಿ ಸಂಶೋಧಕ ಬಾಲಸುಬ್ರಹ್ಮಣ್ಯರವರು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡುತ್ತಾ ಈ ದ್ರಾವಣ ಸಿಂಪಡಣೆ ಯಂತ್ರವು ಸಾಮಾನ್ಯ ಕೂಲಿ ಕಾರ್ಮಿಕನು ಬಳಸಬಲ್ಲ ಅಥವಾ ಓರ್ವ ಮಾಲೀಕನೇ ಬಳಸಬಲ್ಲ ಯಾವುದೇ ಎತ್ತರಕ್ಕೆ ೮ರಿಂದ ೮೦ರ ಅಡಿಯವರೆಗೂ ಕೈಯಿಂದಲ್ಲೇ ಹೈಟ್ ಸೆಟ್ ಮಾಡಬಹುದು. ಮರಗಳನ್ನು ಹತ್ತದೇ, ನೆಲದಿಂದಲ್ಲೇ ೧೦ರಿಂದ ೭೯ರವರ ಅಡಿಯವರೆಗೆ ದ್ರಾವಣ ಸಿಂಪಡಿಸಬಹುದು. ಈ ಯಂತ್ರ ಹಗುರವಿರವುದರಿಂದ ೮ರಿಂದ ೧೨ ಗಂಟೆ ಕೆಲಸ ಮಾಡಬಹುದು. ಜೀವ ಭಯ ಮತ್ತು ಮರದಿಂದ ಬಿದ್ದು ಕೈ ಕಾಲು ಮುರಿದುಕೊಳ್ಳುವ ಭಯವಿಲ್ಲ ಈ ಯಂತ್ರವನ್ನು ಅಡಿಕೆ, ತೆಂಗಿನ ಕಾಯಿ, ಮೆಣಸು ಅಥವಾ ಯಾವುದೇ ಎತ್ತರದ ಮರಗಳ ಹಣ್ಣು, ಕಟ್ಟಾವು ಸ್ಪ್ರೇ ಮಾಡಲು ಬಳಸಬಹುದು. ಮರಗಳ ಕೊಂಬೆ ಸವರಲು ಕೂಡ ಬಳಸಬಹುದು. ಈ ಯಂತ್ರದಿಂದ ಶೇ.೧೦೦ ರಷ್ಟು ಕೊಳೆರೋಗದಿಂದ ಬೆಳೆ ಉಳಿತಾಯ ಮಾಡಬಹುದೆಂದು ಅವರು ಹೇಳಿದರು.

ಪ್ರಮುಖರಿಂದ ನೂತನ ಯಂತ್ರ ಖರೀದಿ:
ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷ ರಾಜಶೇಖರ್ ಜೈನ್, ಭರತ್ ಕುಮಾರ್ ಆರಿಗ, ಅಜಿತ್ ಕುಮಾರ್ ಬನ್ನೂರು ನೂತನ ಯಂತ್ರವನ್ನು ಖರೀದಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ಸೇಡಿಯಾಪು ಜನಾರ್ಧನ ಭಟ್, ಅರಕೇರೆ ವೆಂಕಟ್ರಮಣ ಭಟ್, ಭರತ್ ಕುಮಾರ್ ಆರಿಗ, ನ್ಯಾಯವಾದಿ ಕೆ. ಭಾಸ್ಕರ ಗೌಡ ಕೊಡಿಂಬಾಳ, ರಾಧಾ ಕೃಷ್ಣ ನಾಯಕ್ ಉಪ್ಪಿನಂಗಡಿ, ಡಾ. ವಿಶುಕುಮಾರ್, ನ್ಯಾಯವಾದಿ ಎಂ.ಪಿ. ಅಬೂಬಕ್ಕರ್, ಕ್ಯಾಂಪ್ಕೋ ನಿರ್ದೇಶಕ ರಾಧಾಕರಷ್ಣ ಭಟ್, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳಾದ ಸುಭಾಷ್ ನಾಯಕ್, ಸುಬ್ರಹ್ಮಣ್ಯ ಗೌಡ ಹನಿಯೂರು, ಮೋಹನ್ ಪಕ್ಕಳ, ಸುಂದರ ಪೂಜಾರಿ ಬಡಾವು, ಶ್ರೀನಿವಾಸ ಕೊಡಿಂಬಾಡಿ, ಅರುಣ್ ಪುತ್ತೂರು, ಶ್ರೀಧರ್ ಬೆಳಿಪ್ಪಾಡಿ, ವಸಂತ ಗೌಡ ಕಬಕ, ಸುಬ್ರಹ್ಮಣ್ಯ ಗೌಡ, ಜಯಕುಮಾರ್ ಜೈನ್ ಬನ್ನೂರು, ಈಶ್ವರ್ ಭಟ್ ವಿಟ್ಲಪಡ್ನೂರು, ದೇವಿ ಪ್ರಸಾದ್ ಕೆದಿಲ, ಹಸೈನಾರ್ ಬನಾರಿ, ಶೀನಪ್ಪ ಪೂಜಾರಿ ಪಡ್ನೂರು, ಶ್ರೀಕಾಂತ್ ಪಂಜಿಗುಡ್ಡೆ, ಚಂದ್ರಶೇಖರ ಪಡ್ನೂರು, ಈಶ್ವರ ಭಟ್ ಪಡ್ನೂರು, ರಮೇಶ್ ಭಟ್ ಕಬಕ, ವೆಂಟ್ರಮಣ ವಿಟ್ಲ ಪಡ್ನೂರು, ಬಾಲಕೃಷ್ಣ ಭಟ್ ಐತ್ತೂರು, ಕೇಶವ ಪ್ರಸಾದ್ ಕೆದಿಲ, ಸುಬ್ರಹ್ಮಣ್ಯ ಭಟ್ ಕಬಕ, ಕೆ. ದುಗ್ಗಪ್ಪ ಗೌಡ ಬನ್ನೂರು, ಶ್ರೀ ವತ್ಸಾ ಮುಕ್ರಂಪಾಡಿ, ಸತ್ಯನಾರಾಯಣ ಪ್ರಸಾದ್, ವಿಕ್ರಂ ಎಸ್.ವಿ., ಶ್ಯಾಂ ಪ್ರಸಾದ್, ರಂಜಿತ್ ಶೆಟ್ಟಿ, ಮಹಾಬಲೇಶ್, ಹಮೀದ್, ಕುಂಬಾಡಿ ರಾಮಣ್ಣ ಗೌಡ, ದಿವಕರ ರೈ, ಈಶ್ವರ ಶಾಸ್ತ್ರಿ ಮುಂದಾಜೆ, ಎಂ. ಅನಂತಕೃಷ್ಣ ಮುರ್ಗಜೆ, ಕೆ. ವೆಂಕಟ ಕೃಷ್ಣ, ಅಜಿತ್ ಪ್ರಸಾದ್ ರೈ ಚಿಕ್ಕಮುಡ್ನೂರು, ಘುನಾಥ ರೈ ಚಿಕ್ಕಮುಡ್ನೂರು, ಶಂಭು ಶಾಸ್ತ್ರೀ ಮಂಜಲಪಡ್ಪು, ಗೋವಿಂದ ರಾಜು ಅಂಡೆಪುಣಿ, ಜಯಂತ ಗೌಡ ಪಡ್ನೂರು, ಸುಬ್ರಹ್ಮಣ್ಯ ಭಟ್ ಪುಳು, ಸತ್ಯನಾರಾಯಣ ಭಟ್, ಉಮೇಶ್ ಭಂಡಾರಿ, ಉಮ್ಮರ್, ಅಬ್ದುಲ್ ಕುಂಞಿ, ಎ. ಶಾಂತಪ್ಪ ಪೂಜಾರಿ, ಬಾಬು ಪೂಜಾರಿ, ಕ. ಚಂದ್ರ ಶೇಖರ, ಗೋವಿಂದ ಶಾಸ್ತ್ರೀ, ವಿಜಯಕುಮಾರ್, ಬಾಳಪ್ಪ ಗೌಡ, ಸಂಕಪ್ಪ ಮೂಲ್ಯ, ಕೃಷ್ಣ ಓಜಾಲ, ಶಿವಪ್ಪ ಗೌಡ, ನಾರಾಯಣ ಭಟ್ ಮನಿಪ್ಪಾಡಿ, ರೊಹನ್ ಕುಮಾರ್, ಮುರಳೀಧರ್ ರೈ, ಕೃಷಮೂರ್ತಿ, ಶಂಕರ್, ವಾಟರ್ ರೆಬೆಲ್ಲೊ, ಅನಂದ ಗೌಡ, ಮನೋಜ್, ವಿಷ್ಣು ಭಟ್, ಸಿಪ್ರಿಯನ್, ರಮ್ಲಾ, ಕಮಲ, ರಾಮಜೋಯಿಸ್, ಮಹೇಶ್, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಿಬ್ಬಂದಿಗಳಾದ ಅನಂದ ಪೂಜಾರಿ, ಕಾರ್ತಿಕ್, ಪುರಂದರ, ದಿವಕರ, ಉದಯ, ಪ್ರಮೋದ್, ರಂಜಿತ್, ಈಶ್ವರ ಪೂಜಾರಿ, ದಿಲೀಪ್, ಯಶವಂತ, ಈಶ್ವರ ಭಟ್, ಅಶ್ವಥ ಕಟ್ಟೆಯ ದೇವತಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಹಕರಿಸಿದರು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಜೈನ್ ಸ್ವಾಗತಿಸಿದರು, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ವಂದಿಸಿದರು. ವವ್ಯಸ್ಥಾಪಕಿ ರಾಧಾ ಬಿ.ರೈ ಕಾರ್ಯಕ್ರಮ ನಿರೂಪಿಸಿದರು.

ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ಮಳೆಗಾಲದಲ್ಲಿ ಮದ್ದು ಬಿಡಲು ಸಾಧ್ಯವಾಗದೇ ಕೊಳೆರೋಗ ಉಂಟಾಗಿದ್ದು, ಇದರಿಂದ ಕೃಷಿಕರು ಬಹಳ ನಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಶ್ವಾಶತವಾಗಿ ಪರಿಹಾರ ಎಂಬಂತೆ ದೋಂಟಿ ಇಂಜಿನಿಯರ್ ಬಾಲಸುಬ್ರಹ್ಮಣ್ಯ ರವರ ಮದ್ದು ಸಿಂಪಡಿಸುವ ಯಂತ್ರ ಬಹಳ ಪರಿಣಾಕಾರಿಯಾಗಿ ಕೆಲಸ ಮಾಡುವುದು ಎಂದು ತಿಳಿದು ಬಂದಿರುವುದರಿಂದ ರೈತರ ಹಿತಕ್ಕಾಗಿ ಅಡಿಕೆ ಕೊಯ್ಯುವ, ಮದ್ದು ಸಿಂಪಡಿಸುವ ಯಂತ್ರಕ್ಕೆ ಸಂಘದ ಮೂಲಕ ತಕ್ಷಣವೇ ಕಡಿಮೆ ಬಡ್ಡಿಯಲ್ಲಿ ರೈತರಿಗೆ ಸಾಲದ ವ್ಯವಸ್ಥೆ ಮಾಡಿಕೊಡಲಾಗುವುದು ಅಲ್ಲದೆ ಬನ್ನೂರು ರೈತ ಸೇವಾ ಸಹಕಾರಿ ಸಂಘದಲ್ಲಿ ಕೃಷಿ ಸಾಲ ಇರುವ ಸದಸ್ಯರಿಗೂ ದೋಂಟಿ ಯಂತ್ರಕ್ಕೆ ಸಾಲದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದ ಅವರು ಈ ಬಗ್ಗೆ ಯಂತ್ರದ ಬಗ್ಗೆ ತಿಳಿದಿರುವ ನುರಿತ ತರಬೇತುದಾರನೊರ್ವನನ್ನು ನೇಮಿಸಿ ಇದರ ಸಾಧಕ- ಭಾದಕ ಬಗ್ಗೆ ತಿಳಿಯಪಡಿಸಲು ಒರ್ವರನ್ನು ನೇಮಿಸುವಂತೆ ಬಾಲಸುಬ್ರಹ್ಮಣ್ಯರವರಲ್ಲಿ ಕೇಳಿಕೊಂಡರು. ಸಂಘದ ಆಭಿವೃದ್ಧಿಗೆ ಸಹಕರಿಸಿದ ಎಲ್ಲಾ ಸದಸ್ಯರುಗಳಿಗೆ, ನಿರ್ದೇಶಕರಿಗೆ ಮತ್ತು ಸಿಬ್ಬಂದಿವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.