HomePage_Banner
HomePage_Banner
HomePage_Banner
HomePage_Banner

ಪಾಣಾಜೆ: ಆರ್ಲಪದವು ಪೇಟೆ ಸ್ವಚ್ಚ ಗೊಳಿಸಿ ಆದರ್ಶ ಮೆರೆದ ನಾಗರಿಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಪಾಣಾಜೆ ಗ್ರಾಮದ ಆರ್ಲಪದವು ಪೇಟೆ ಪರಿಸರದಲ್ಲಿ ಊರಿನ ಸಹೃದಯ ಬಾಂಧವರು ಸೇರಿ   ಏ.4 ರಂದು  ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮವು ಬಹಳ ಯಶಸ್ವಿಯಾಗಿ ನಡೆದು ಆದರ್ಶ ಮೆರೆದಿದ್ದಾರೆ.
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಣಾಜೆ ಗ್ರಾಮ ಪಂಚಾಯತ್  ಅಧ್ಯಕ್ಷೆ ಭಾರತಿ ಭಟ್ ಮತ್ತು ಪಂಚಾಯತ್ ಸದಸ್ಯರು, ಊರಿನ ಗಣ್ಯರು , ಹಿರಿಯ ನಾಗರೀಕರು ಮತ್ತು ಊರಿನ ಸಹೃದಯ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.  ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ  ಜ್ಯೋತಿಷ್ಯರಾದ ಲೋಕೇಶ್ ಬಲ್ಯಾಯ ದೊಡ್ಡಡ್ಕ  ಇವರ ವತಿಯಿಂದ ಫಲಾಹಾರ ಹಾಗೂ ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು.  ವಿಜಯ್ ಪಿದಾರ ಮತ್ತು ಗೋಪಾಲಕೃಷ್ಣ ಬೊಳ್ಳುಕಲ್ಲು  ಇವರ ವತಿಯಿಂದ ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಲಾಗಿತ್ತು .

ಸಂಗ್ರಹಿಸಿದ ಕಸಗಳನ್ನು ಇತ್ತೀಚಿಗೆ ಗುರಿಕೇಲು ಎಂಬಲ್ಲಿ ಶಾಸಕರು ಉದ್ಘಾಟಿಸಿದ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ವಾಹನದ ಮೂಲಕ ಸಾಗಿಸಿ ಅಲ್ಲಿ ವಿಲೇವಾರಿ ಮಾಡಲಾಯಿತು.
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.