ಪುತ್ತೂರು: ಉದುಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪೆರಿಯ ಬಾಲಕೃಷ್ಣ ರ ಪರವಾಗಿ ದೇಲಂಪಾಡಿಯಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಿತು.
ಕಾಸರಗೋಡು ಜಿಲ್ಲಾ ಎಐಸಿಸಿ ವೀಕ್ಷಕ ಮಾಜಿ ಸಚಿವ ರಮಾನಾಥ ರೈ ಯವರು ಭಾಗವಹಿಸಿ ಕೇರಳದ ರಕ್ತ ಚರಿತ್ರೆಗೆ ಅಂತ್ಯಹಾಡುವ ಅಗತ್ಯವಿದೆ ಎಂದು ಹೇಳಿದರು. ಅಭಿವೃದ್ಧಿಯಲ್ಲಿ ಚರಿತ್ರೆ ನಿರ್ಮಿಸಿದ ಉಮ್ಮನ್ ಚಾಂಡಿ ಸರಕಾರದ ಜನಪರ ಯೋಜನೆಗಳು ಸಾಕಾರಗೊಳ್ಳಲು ಯುಡಿಎಫ್ ಅಭ್ಯರ್ಥಿಯನ್ನು ಗೆಲ್ಲಿಸಲು ವಿನಂತಿಸಿದರು.
ಕೇರಳ ರಾಜ್ಯವು ಅಭಿವೃದ್ಧಿ ಕಾಣಲು,ಇಲ್ಲಿ ಶಾಂತಿ ನೆಲೆಸಲು ಯುಡಿಎಫ್ ನೇತೃತ್ವದ ಸರಕಾರ ಬರಬೇಕಾದ ಅನಿವಾರ್ಯತೆ ಇದೆ ಎಂದು ಎಐಸಿಸಿ ವೀಕ್ಷಕ ಕಾವು ಹೇಮನಾಥ್ ಶೆಟ್ಟಿ ಯವರು ಹೇಳಿದರು.
ಚುನಾವಣಾ ಉಸ್ತುವಾರಿ ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯವರು ಮಾತನಾಡಿ ಕೇರಳ ಎಂದರೆ ಹೆದರುವ ಪರಿಸ್ಥಿತಿ ಬಂದಿದೆ. ಯವಾಗ ಗಲಭೆ ಸಂಭವಿಸುತ್ತದೆ. ಯಾವಾಗ ಬಂದ್ ಆಗುತ್ತದೆ. ಸಮಾನ್ಯ ಜನರಿಗೆ ಶಾಂತಿಯುತ ಕೇರಳ ಮರು ಸೃಷ್ಠಿಯಾಗಲು ಯುಡಿಎಫ್ ನೇತೃತ್ವದ ಸರಕಾರ ಆಡಳಿತಕ್ಕೆ ಬರಬೇಕು. ಇದಕ್ಕೆ ಎಲ್ಲಾ ಮತದಾರರು ಬೆಂಬಲಿಸಬೇಕು ಎಂದರು.
ಅಭ್ಯರ್ಥಿ ಪೆರಿಯ ಬಾಲಕೃಷ್ಣ ಮಾತಮಾಡಿ ಎಲ್ಲರನ್ನೂ ಒಂದಾಗಿ ಕಾಣುವ ಮತ್ತು ಕ್ಷೇತ್ರದ ಅಭಿವೃದ್ಧಿ ಯನ್ನು ಮಾಡುವ ಭರವಸೆಯನ್ನು ನೀಡಿ ಮತಯಾಚನೆ ಮಾಡಿದರು. ನ್ಯಾಯವಾದಿ ವೆಂಕಪ್ಪ ಗೌಡ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ,ಜಿಲ್ಲಾ ಪಂಚಾಯತ್ ಸದಸ್ಯರಾದ ಶಫೀಕ್ ಅಹಮ್ಮದ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು..