HomePage_Banner
HomePage_Banner
HomePage_Banner
HomePage_Banner

ಬೆಂಗಳೂರು-ಮಂಗಳೂರು ಮಧ್ಯೆ ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲು ಸಂಚಾರ | ಕಾಣಿಯೂರು ರೈಲ್ವೆ ನಿಲ್ದಾಣದಲ್ಲಿ ಇಲ್ಲ ನಿಲುಗಡೆ ಭಾಗ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸುಧಾಕರ ಆಚಾರ್ಯ ಕಾಣಿಯೂರು

ಕಾಣಿಯೂರು: ಮಂಗಳೂರು -ಸುಬ್ರಹ್ಮಣ್ಯ ಪ್ರಯಾಣಿಕರ ರೈಲ್ವೇ ಹಾದಿಯಲ್ಲಿ ಬರುವ ರೈಲ್ವೇ ನಿಲ್ದಾಣಗಳಲ್ಲಿ ಕಾಣಿಯೂರು ರೈಲ್ವೇ ನಿಲ್ದಾಣವೂ ಒಂದು. ನೂರಾರು ಪ್ರಯಾಣಿಕರು ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ರೈಲ್ವೇಯ ಸೇವೆಯನ್ನು ಬಳಸಿಕೊಳ್ಳಲು ಹಾತೊರೆಯುತ್ತಿದ್ದಾರೆ.

ಬೆಂಗಳೂರು- ಮಂಗಳೂರು ನಡುವೆ ಎ.೧೦ರಿಂದ ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಪ್ರಾರಂಭವಾಗಲಿದ್ದರೂ ಕಾಣಿಯೂರು ಸುತ್ತಮುತ್ತಲಿನ ಹಲವು ಊರುಗಳಿಗೆ ಕೇಂದ್ರ ಸ್ಥಾನವಾಗಿ, ಸಂಪರ್ಕಕೊಂಡಿಯಂತಿರುವ ಹಾಗೂ ರಾಜ್ಯ ಹೆದ್ದಾರಿಗೆ ಬಹಳ ಹತ್ತಿರವಾಗಿರುವ ಕಾಣಿಯೂರಿನ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಭಾಗ್ಯ ಸಿಕ್ಕಿಲ್ಲ. ಎಕ್ಸ್‌ಪ್ರೆಸ್ ರೈಲುಗಳು ಕಾಣಿಯೂರಿನಲ್ಲಿ ನಿಲ್ಲುವ ನಿರೀಕ್ಷೆಯಲ್ಲಿದ್ದ ಕಾಣಿಯೂರು ಭಾಗದ ಜನತೆ ನಿಲುಗಡೆ ಭಾಗ್ಯ ಸಿಗದೇ ಇರುವುದರಿಂದ ನಿಲುಗಡೆಗೆ ಒತ್ತಾಯಿಸಿ ಸಂಸದರಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ವಾರದ 7 ದಿನವೂ ಸಂಚಾರ: ಇಷ್ಟು ದಿನ ವಾರದಲ್ಲಿ ೪ ದಿನ ಕುಣಿಗಲ್, ಶ್ರವಣಬೆಳಗೊಳ ಹಾಸನ ಮಾರ್ಗವಾಗಿ ವಾರದಲ್ಲಿ ಮೂರು ದಿನ ಮಂಡ್ಯ, ಮೈಸೂರು, ಹಾಸನ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಎ ೧೦ರಿಂದ ವಾರದ ೭ ದಿನವೂ ಬೆಂಗಳೂರಿನಿಂದ ಕುಣಿಗಲ್, ಶ್ರವಣಬೆಳಗೊಳ, ಹಾಸನ ಮಾರ್ಗವಾಗಿ ಮಂಗಳೂರು ಸೆಂಟ್ರಲ್‌ಗೆ ಸಂಚಾರ ನಡೆಸಲಿದೆ. ರಾಜಧಾನಿ ಮತ್ತು ಕರಾವಳಿ ನಡುವೆ ಸಂಚರಿಸುವ ಜನರಿಗೆ ಇದರಿಂದ ಅನುಕೂಲವಾಗಲಿದೆ. ಪ್ರತಿದಿನ ಮೂರು ಎಕ್ಸ್‌ಪ್ರೆಸ್ ರೈಲುಗಳು ಕುಣಿಗಲ್, ಶ್ರವಣಬೆಳಗೊಳ ಮತ್ತು ಹಾಸನ ಮಾರ್ಗವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚಾರ ನಡೆಸಲಿವೆ. ಬೆಂಗಳೂರು- ಮಂಗಳೂರು ನಡುವೆ ಶ್ರವಣಬೆಳಗೊಳ ಮಾರ್ಗವಾಗಿ ರಾತ್ರಿ ೨ರೈಲು, ಬೆಳಗ್ಗೆ ೧ ರೈಲು ಸಂಚಾರ ನಡೆಸಲಿದ್ದು ಬೆಂಗಳೂರು, ಮಂಗಳೂರು ಹಾಸನ ಜಿಲ್ಲೆಗಳ ನಡುವೆ ಸಂಚರಿಸುವವರಿಗೆ ಸಹಕಾರವಾಗಲಿದೆ.

ಸಂಸದೆ ಶೋಭಾ ಕರಂದ್ಲಾಜೆಯವರ ಪ್ರಯತ್ನದಿಂದ ಗೋವಾ-ಯಶವಂತಪುರ ರೈಲಿಗೆ ನಿಲುಗಡೆ: ಈಗಾಗಲೇ ಆರಂಭಗೊಂಡಿರುವ ಗೋವಾ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ಕೊನೆಗೂ ಕಾಣಿಯೂರಿನಲ್ಲಿ ನಿಲುಗಡೆಯ ಭಾಗ್ಯ ದೊರಕಿದೆ. ಕರಾವಳಿ ಕರ್ನಾಟಕದ ಜನತೆಯ ದಶಕಗಳ ಬೇಡಿಕೆಯಾದ ಮಂಗಳೂರು ಪಡೀಲ್ ರೈಲ್ವೇ ಜಂಕ್ಷನ್ ಮೂಲಕ ಹಾದು ಹೋಗುವ ಯಶವಂತಪುರ ವಾಸ್ಕೋ ಗೋವಾ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾಣಿಯೂರಿನಲ್ಲಿ ನಿಲುಗಡೆಯಾಗಬೇಕು ಎಂದು ಕಾಣಿಯೂರಿನ ಗ್ರಾಮಸ್ಥರಿಂದ ಉಡುಪಿ- ಚಿಕ್ಕಮಗಳೂರು ಸಂಸದರಾಗಿರುವ ಚಾರ್ವಾಕ ಗ್ರಾಮದ ಶೋಭಾ ಕರಂದ್ಲಾಜೆಯವರಿಗೆ ಮನವಿ ಮಾಡಲಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶೋಭಾ ಕರಂದ್ಲಾಜೆಯವರ ಪ್ರಯತ್ನದಿಂದ ಕಾಣಿಯೂರಿನಲ್ಲಿ ಹೊಸ ರೈಲಿಗೆ ನಿಲುಗಡೆ ಭಾಗ್ಯ ಸಿಕ್ಕಿದ್ದು, ರೈಲ್ವೆ ಸಚಿವರು ಕಾಣಿಯೂರಿನಲ್ಲಿ ರೈಲು ನಿಲುಗಡೆ ಭಾಗ್ಯ ಒದಗಿಸುವ ಮೂಲಕ ಹಸಿರು ನಿಶಾನೆ ತೋರಿದ್ದರು. ಸುಮಾರು ೨೩ ವರ್ಷಗಳ ನಂತರ ಎಕ್ಸ್‌ಪ್ರೆಸ್ ರೈಲು ಕಾಣಿಯೂರಿನಲ್ಲಿ ನಿಲುಗಡೆಯಾದ್ದರಿಂದ ಕಾಣಿಯೂರಿನ ಜನತೆ ಸಂಭ್ರಮ ಆಚರಿಸಿದ್ದರು. ಆದರೆ ಇತರ ಎಕ್ಸ್‌ಪ್ರೆಸ್ ರೈಲುಗಳೂ ಕಾಣಿಯೂರಿನಲ್ಲಿ ನಿಲ್ಲುವಂತಾಗಬೇಕು ಎನ್ನುವುದು ಈ ಭಾಗದ ನಾಗರಿಕರ ಆಗ್ರಹ.


ರಾಜ್ಯ ಹೆದ್ದಾರಿಗೆ ಅತೀ ಹತ್ತಿರವಿರುವ ಕಾಣಿಯೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಆಗ್ರಹ
ಮಂಗಳೂರು-ಸುಬ್ರಹ್ಮಣ್ಯ ಪ್ರಯಾಣಿಕರ ರೈಲ್ವೇ ಹಾದಿಯಲ್ಲಿ ಬರುವ ರೈಲ್ವೇ ನಿಲ್ದಾಣಗಳಲ್ಲಿ ಕಾಣಿಯೂರು ರೈಲ್ವೇ ನಿಲ್ದಾಣವೂ ಒಂದು. ಕಾಣಿಯೂರು ರೈಲ್ವೆ ನಿಲ್ದಾಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ರಾಜ್ಯ ಹೆದ್ದಾರಿಗೆ ಅತೀ ಹತ್ತಿರದ ರೈಲ್ವೆ ನಿಲ್ದಾಣವಾಗಿರುವುದು ವಿಶೇಷವಾಗಿದೆ. ೧೯೮೦ರಲ್ಲಿ ಪ್ರಾರಂಭವಾದ ಮೀಟರ್ ಗೇಜ್ ಹಳಿ ಇರುವ ಸಮಯದಲ್ಲಿ ರಾತ್ರಿ ಕಾಣಿಯೂರಲ್ಲಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಇತ್ತು. ನಂತರ ೧೯೯೭ರಲ್ಲಿ ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ರೈಲ್ವೆ ಟ್ರಾಕ್ ಆದ ಬಳಿಕ ರೈಲು ನಿಲುಗಡೆ ಸ್ಥಗಿತಗೊಂಡಿತ್ತು. ಸುಮಾರು ೨೩ ವರ್ಷಗಳ ನಂತರ ಗೋವಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಕಾಣಿಯೂರಿನಲ್ಲಿ ನಿಲುಗಡೆ ಯಾದರಿಂದ ಕಾಣಿಯೂರಿನ ಜನತೆ ಸಂಭ್ರಮ ಆಚರಿಸಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.