HomePage_Banner
HomePage_Banner
HomePage_Banner
HomePage_Banner

ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಡಿಕೆ ಕೊಯ್ಲು, ದ್ರಾವಣ ಸಿಂಪಡಣೆ ಯಂತ್ರ ಪ್ರಾತ್ಯಕ್ಷಿಕೆ

ಕಾವು: ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಂಪು ಕಂಪೆನಿಯ ಸಹಯೋಗದೊಂದಿಗೆ ಹೈಟೆಕ್ ದೋಟಿ/ಕೊಕ್ಕೆ ಬಳಸಿ ಅಡಿಕೆ ಕೊಯ್ಲು ಮತ್ತು ಅಡಿಕೆಗೆ ದ್ರಾವಣ ಸಿಂಪಡಣೆಯ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯು ಎ.೫ರಂದು ಸಂಜೆ ಕಾವು ಹೊಸಮನೆ ಶೀನಪ್ಪ ಗೌಡರ ಅಡಿಕೆತೋಟದಲ್ಲಿ ನಡೆಯಿತು.

ಮಾಹಿತಿ ನೀಡಿದ ದೋಟಿ ಸಂಶೋಧಕ ಮೆಕ್ಯಾನಿಕಲ್ ಇಂಜಿನಿಯರ್ ಬಾಲಸುಬ್ರಹ್ಮಣ್ಯರವರು ಮಾತನಾಡಿ ನೆಲದಿಂದಲೇ ಹೈಟೆಕ್ ದೋಟಿ ಮೂಲಕ ೬೦ರಿಂದ ೮೦ ಅಡಿ ಮೇಲಿರುವ ಅಡಿಕೆ ಕೊಯ್ಲು ಮತ್ತು ದ್ರಾವಣ ಸಿಂಪಡಣೆ ಮಾಡಬಹುದಾಗಿದೆ. ಹೈಟೆಕ್ ದೋಟಿಯ ಮೂಲಕ ಪರುಣಾಮಕಾರಿಯಾಗಿ ಔಷಧಿ ಸಿಂಪಡಣೆ ಮಾಡಿ ಕೊಳೆರೋಗದಿಂದ ಅಡಿಕೆ ಬೆಳೆಯ ರಕ್ಷಣೆ ಮಾಡಿ ಅಧಿಕ ಇಳುವರಿ ಪಡೆಯಬಹುದು. ಈ ಯಂತ್ರದ ಬಳಕೆಯಿಂದ ಕೃಷಿಕರಿಗೆ ಮಾನವ ಶ್ರಮ ಮತ್ತು ಸಮಯದ ಉಳಿತಾಯವನ್ನು ಮಾಡಲು ಸಾಧ್ಯವಿದೆ ಎಂದು ಹೇಳಿದರು. ಬಳಿಕ ಬಾಲಸುಬ್ರಹ್ಮಣ್ಯ ಮತ್ತು ತಂಡದವರು ಹೈಟೆಕ್ ದೋಟಿ/ಕೊಕ್ಕೆ ಬಳಸಿ ಅಡಿಕೆ ಕೊಯ್ಲು ಮತ್ತು ಅಡಿಕೆಗೆ ದ್ರಾವಣ ಸಿಂಪಡಣೆಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಸಾಲ ಸೌಲಭ್ಯದ ವ್ಯವಸದಥೆ-ನನ್ಯ
ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಮಳೆಗಾಲದಲ್ಲಿ ಕೊಳೆರೋಗದಿಂದ ಅಡಿಕೆ ಫಸಲನ್ನು ರಕ್ಷಿಸಲು ಮತ್ತು ಅತ್ಯಂತ ಸುಲಭವಾಗಿ ಅಡಿಕೆ ಕೊಯ್ಲು ಮಾಡಲು ಹೈಟೆಕ್ ದೋಟಿ ಉಪಯೋಗವಾಗಲಿದೆ ಮತ್ತು ಸ್ವತಃ ಕೃಷಿಕನೇ ತನ್ನ ತೋಟದಲ್ಲಿ ಸ್ವಾವಲಂಬಿಯಾಗಿ ತೋಟ ನಿರ್ವಹಣೆ ಮಾಡಲು ಅನುಕೂಲವಿದೆ. ಆಧುನಿಕ ಮಾದರಿಯ ಹೈಟೆಕ್ ದೋಟಿ/ಕೊಕ್ಕೆ ಯಂತ್ರ ಖರೀದಿಸುವ ಸಂಘದ ಸದಸ್ಯರಿಗೆ ಸಂಘದಿಂದ ಸಾಲ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಮಂಜುನಾಥ ರೈ ಸಾಂತ್ಯ, ಪ್ರವೀಣ್ ರೈ ಮೇನಾಲ, ಶಿವಪ್ರಸಾದ್ ಕೊಚ್ಚಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ, ಸಂಘದ ಸದಸ್ಯರುಗಳು ಮತ್ತು ಸಿಬಂದಿಗಳು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.