HomePage_Banner
HomePage_Banner
HomePage_Banner
HomePage_Banner

ಸ್ಥಾನಗಳು ಅಲಂಕಾರದ ಸೊತ್ತಲ್ಲ, ಜವಾಬ್ದಾರಿಯಾಗಿರಬೇಕು; ಭಾರತೀಯ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆಯಲ್ಲಿ ಚಂದ್ರಶೇಖರ್ ರಾವ್ ಬಪ್ಪಳಿಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ವಾತಂತ್ರ್ಯ ಸಿಕ್ಕಿ ಅನುಭವಿಸುವ ಸಂದರ್ಭದಲ್ಲಿ ಹಿಂದೂಗಳಿಗೆ ಎದುರಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿಯವರು ನೆಹರು ಕ್ಯಾಬಿನೆಟ್‌ನಿಂದ ಹೊರ ಬರುವ ಮೂಲಕ ಸ್ಥಾನಗಳು ಅಲಂಕಾರದ ಸೊತ್ತಲ್ಲ ಜವಾಬ್ದಾರಿಯಾಗಿರಬೇಕೆಂದು ತೋರಿಸಿ ಕೊಟ್ಟರು ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ ಹೇಳಿದರು.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಎ.೬ರಂದು ನಡೆದ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ, ಏಕಾತ್ಮ ಮಾನವತಾವಾದ ಹಾಗು ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ರೂಪುಗೊಂಡಿದೆ. ಡಾ.ಶ್ಯಾಮ ಪ್ರಸಾದ ಮುಖರ್ಜಿಯಂಥ ಅನೇಕ ಹಿರಿಯರ ತ್ಯಾಗ ಬಲಿದಾನಗಳ ಜೊತೆ ಪಂಡಿತ ದೀನ ದಯಾಳ್ ಉಪಾಧ್ಯಾಯ, ಬಲರಾಜ್ ಮದೋಕ್, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯಂಥ ಹಲವಾರು ದೂರದೃಷ್ಟಿಯುಳ್ಳ ನಾಯಕರ ಸತತ ಶ್ರಮದ ಪ್ರತಿಫಲವಿದು. ಇವತ್ತು ಪ್ರಧಾನಿ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವ ಪಕ್ಷಕ್ಕೆ ದೊರಕಿರುವುದು ನಮ್ಮೆಲ್ಲರ ಅದೃಷ್ಟ ಎಂದರು.

ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ:
ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ಮಾತನಾಡಿ ರಾಷ್ಟ್ರ ಹಿತ ಬಂದಾಗ ನಾವು ಪಕ್ಷವನ್ನೇ ತ್ಯಾಗ ಮಾಡಿದ್ದೇವೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ.
ನಮ್ಮ ಸಿದ್ದಾಂತಕ್ಕೆ ಚ್ಯುತಿ ಬಂದಾಗ ನಾವು ಎಷ್ಟೇ ದೊಡ್ಡ ವಿಚಾರವಿದ್ದರೂ ನಾವು ಹೊರಬರುತ್ತೇವೆ. ಬಿಜೆಪಿ ಹುಟ್ಟಿದ್ದು ಕೂಡಾ ಇದೇ ವಿಚಾರವಾಗಿ. ಇವತ್ತು ನಮ್ಮದು ಭ್ರಷ್ಟಾಚಾರದ ವಿರುದ್ಧ ಹೋರಾಟ. ಅದೇ ರೀತಿ ಬಿಜೆಪಿ ದೇಶದ ಎಲ್ಲಾ ಬೂತ್‌ಗಳಿಗೆ ತಲುಪಿ ಅತ್ಯಂತ ದೊಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

ಬೂತ್ ಮಟ್ಟದಲ್ಲಿ ಕಾರ್ಯಕ್ರಮ:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರತಿ ಬೂತ್ ಮಟ್ಟದಲ್ಲಿ ನಡೆಯಲಿದೆ. ಪಕ್ಷದ ಧ್ವಜ ಹಾರಿಸಿ ಆಚರಣೆ ಮಾಡುವ ಮೂಲಕ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು. ಅವರ ಅದರ್ಶವನ್ನು ಇಟ್ಟು ಕೊಂಡು ಪಕ್ಷವನ್ನು ಮುನ್ನಡೆಸೋಣ ಎಂದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ನಗರ ಮಂಡಲ ಉಪಾಧ್ಯಕ್ಷರಾದ ಜ್ಯೋತಿ ನಾಯಕ್, ನಗರಸಭಾ ಉಪಾಧ್ಯಕ್ಷರಾದ ವಿದ್ಯಾಗೌರಿ, ನಗರಸಭಾ ಸದಸ್ಯರಾದ ದೀಕ್ಷಾ ಪೈ, ಮನೋಹರ್ ಕಲ್ಲಾರೆ, ಶಶಿಕಲಾ ಸಿ ಎಸ್, ಇಂದಿರಾ ಪುರುಷೋತ್ತಮ, ಶೀನಪ್ಪ ನಾಯ್ಕ, ನಗರ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾವ, ಜಯಶ್ರೀ ನಾಯಕ್ ದಿನೇಶ್ ಕೈಪಂಗಳ ದೋಳ, ನಗರ ಮಂಡಲ ಕಾರ್ಯದರ್ಶಿ ಗೋವರ್ಧನ ಕುಮೆರಡ್ಕ, ಅರ್ಪಣಾ ಪಡೀಲ್, ಪಿ ಬಿ. ಶಿವಕುಮಾರ್, ವಿಶ್ವನಾಥ ಕುಲಾಲ್, ನಗರ ಮಂಡಲ ಮಂಡಲ ಎಸ್ ಟಿ ಮೋರ್ಚಾದ ಅಧ್ಯಕ್ಷ ಅಶೋಕ್ ಬಲ್ನಾಡು, ಪಿ, ಸುರೇಶ್ ಆಳ್ವ, ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ನಗರ ಮಂಡಲ ಕಾರ್ಯದರ್ಶಿ ಇಂದುಶೇಖರ, ನಗರ ಮಂಡಲ ಯುವ ಮೋರ್ಚಾದ ಅಧ್ಯಕ್ಷರಾದ ಸಚಿನ್ ಶೆಣೈ, ರಾಧಾಕೃಷ್ಣ ನಂದಿಲ, ಸುಧೀರ್ ಶೆಟ್ಟಿ, ಬಿಜೆಪಿ ಕಚೇರಿಯಲ್ಲಿ ಕಾರ್ಯದರ್ಶಿ ರುಕ್ಮಯ್ಯ ಇದ್ಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಪುತ್ತೂರು ಬಿಜೆಪಿ ಕಚೇರಿಯಲ್ಲಿ ಎ.೬ರಂದು ನಡೆದ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚಣೆ  ಮಾಡಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ, ಏಕಾತ್ಮ ಮಾನವತಾವಾದ ಹಾಗು ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ಭಾರತೀಯ ಜನತಾ ಪಾರ್ಟಿ ರೂಪುಗೊಂಡಿದೆ. ಡಾ.ಶ್ಯಾಮ ಪ್ರಸಾದ ಮುಖರ್ಜಿಯಂಥ ಅನೇಕ ಹಿರಿಯರ ತ್ಯಾಗ ಬಲಿದಾನಗಳ ಜೊತೆ ಪಂಡಿತ ದೀನ ದಯಾಳ್ ಉಪಾಧ್ಯಾಯ, ಬಲರಾಜ್ ಮದೋಕ್, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯಂಥ ಹಲವಾರು ದೂರದೃಷ್ಟಿಯುಳ್ಳ ನಾಯಕರ ಸತತ ಶ್ರಮದ ಪ್ರತಿಫಲವಿದು. ಇವತ್ತು ಪ್ರಧಾನಿ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವ ಪಕ್ಷಕ್ಕೆ ದೊರಕಿರುವುದು ನಮ್ಮೆಲ್ಲರ ಅದೃಷ್ಟ ಎಂದರು.

ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ:
ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ಮಾತನಾಡಿ ರಾಷ್ಟ್ರ ಹಿತ ಬಂದಾಗ ನಾವು ಪಕ್ಷವನ್ನೇ ತ್ಯಾಗ ಮಾಡಿದ್ದೇವೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ.
ನಮ್ಮ ಸಿದ್ದಾಂತಕ್ಕೆ ಚ್ಯುತಿ ಬಂದಾಗ ನಾವು ಎಷ್ಟೇ ದೊಡ್ಡ ವಿಚಾರವಿದ್ದರೂ ನಾವು ಹೊರಬರುತ್ತೇವೆ. ಬಿಜೆಪಿ ಹುಟ್ಟಿದ್ದು ಕೂಡಾ ಇದೇ ವಿಚಾರವಾಗಿ. ಇವತ್ತು ನಮ್ಮದು ಭ್ರಷ್ಟಾಚಾರದ ವಿರುದ್ಧ ಹೋರಾಟ. ಅದೇ ರೀತಿ ಬಿಜೆಪಿ ದೇಶದ ಎಲ್ಲಾ ಬೂತ್‌ಗಳಿಗೆ ತಲುಪಿ ಅತ್ಯಂತ ದೊಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

ಬೂತ್ ಮಟ್ಟದಲ್ಲಿ ಕಾರ್ಯಕ್ರಮ:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರತಿ ಬೂತ್ ಮಟ್ಟದಲ್ಲಿ ನಡೆಯಲಿದೆ. ಪಕ್ಷದ ಧ್ವಜ ಹಾರಿಸಿ ಆಚರಣೆ ಮಾಡುವ ಮೂಲಕ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು. ಅವರ ಅದರ್ಶವನ್ನು ಇಟ್ಟು ಕೊಂಡು ಪಕ್ಷವನ್ನು ಮುನ್ನಡೆಸೋಣ ಎಂದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಸ್ವಾಗತಿಸಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ, ನಗರ ಮಂಡಲ ಉಪಾಧ್ಯಕ್ಷರಾದ ಜ್ಯೋತಿ ನಾಯಕ್, ನಗರಸಭಾ ಉಪಾಧ್ಯಕ್ಷರಾದ ವಿದ್ಯಾಗೌರಿ, ನಗರಸಭಾ ಸದಸ್ಯರಾದ ದೀಕ್ಷಾ ಪೈ, ಮನೋಹರ್ ಕಲ್ಲಾರೆ, ಶಶಿಕಲಾ ಸಿ ಎಸ್, ಇಂದಿರಾ ಪುರುಷೋತ್ತಮ, ಶೀನಪ್ಪ ನಾಯ್ಕ, ನಗರ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾವ, ಜಯಶ್ರೀ ನಾಯಕ್ ದಿನೇಶ್ ಕೈಪಂಗಳ ದೋಳ, ನಗರ ಮಂಡಲ ಕಾರ್ಯದರ್ಶಿ ಗೋವರ್ಧನ ಕುಮೆರಡ್ಕ, ಅರ್ಪಣಾ ಪಡೀಲ್, ಪಿ ಬಿ. ಶಿವಕುಮಾರ್, ವಿಶ್ವನಾಥ ಕುಲಾಲ್, ನಗರ ಮಂಡಲ ಮಂಡಲ ಎಸ್ ಟಿ ಮೋರ್ಚಾದ ಅಧ್ಯಕ್ಷ ಅಶೋಕ್ ಬಲ್ನಾಡು, ಪಿ, ಸುರೇಶ್ ಆಳ್ವ, ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ನಗರ ಮಂಡಲ ಕಾರ್ಯದರ್ಶಿ ಇಂದುಶೇಖರ, ನಗರ ಮಂಡಲ ಯುವ ಮೋರ್ಚಾದ ಅಧ್ಯಕ್ಷರಾದ ಸಚಿನ್ ಶೆಣೈ, ಪುತ್ತೂರು ಬಿಜೆಪಿ ಕಚೇರಿಯಲ್ಲಿ ಕಾರ್ಯದರ್ಶಿ ರುಕ್ಮಯ್ಯ ಇದ್ಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.