- ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಟಿಲ್ಲರ್ ವಿತರಿಸಿದ ಶಾಸಕ ಸಂಜೀವ ಮಠಂದೂರು
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಭತ್ತೆ ಬೆಳೆದು ಇಲ್ಲಿಗೆ ಬೇಕಾದ ಅಕ್ಕಿಯನ್ನು ಇಲ್ಲಿಯೇ ಉತ್ಪಾದನೆ ಮಾಡಲು ಸಹಕಾರಿಯಾಗುವಂತೆ ಯಾಂತ್ರಿಕೃತ ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಭತ್ತ ಬೆಳೆಯಲು ಉತ್ತೇಜನ ಸಿಗಲು ಟಿಲ್ಲರ್ ವಿತರಣೆಯೂ ಮಾಡಲಾಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಕೃಷಿ ಇಲಾಖೆಯಿಂದ ಎ.೬ರಂದು ದರ್ಬೆಯಲ್ಲಿನ ಸಹಾಯಕ ಕೃಷಿ ಇಲಾಖಾಧಿಕಾರಿ ಕಚೇರಿಯಲ್ಲಿ ಮೂವರು ಫಲಾನುಭವಿಗಳಿಗೆ ಟಿಲ್ಲರ್ ವಿತರಣೆಯನ್ನು ಅವರು ಮಾಡಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಆಹಾರ ಬೆಳೆಯಲ್ಲಿ ಸ್ವಾವಲಂಬನೆ ಪಡೆಯಬೇಕು. ಹಿಂದೆ ಭತ್ತದ ಗದ್ದೆಯಲ್ಲಿ ಬಹಳಷ್ಟು ಮಂದಿ ಹಿರಿಯರು ದುಡಿದ್ದಿದ್ದಾರೆ. ಇವತ್ತು ಭತ್ತದ ಗದ್ದೆಯಲ್ಲಿ ವಾಣಿಜ್ಯ ಬೆಳೆ ಬೆಳೆಯುತ್ತಿದೆ. ಹಾಗಾಗಿ ನಾವೆಲ್ಲ ಗಂಗಾವತಿ, ಶಿವಮೊಗ್ಗ ಮತ್ತಿತರ ಕಡೆಯಿಂದ ಭತ್ತ ತಂದು ಇಲ್ಲಿ ಅಕ್ಕಿ ಮಾಡುವ ಪರಿಸ್ತಿತಿ ಬಂದಿದೆ.
ಇದೇ ರೀತಿ ಮುಂದುವರಿದರೆ ಮುಂದಿನ ೫ ವರ್ಷದಲ್ಲಿ ದುಷ್ಪರಿಣಾಮ ಎದುರಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆದು ಇಲ್ಲಿಗೆ ಬೇಕಾದ ಅಕ್ಕಿಯನ್ನು ಇಲ್ಲಿಯೇ ಉತ್ಪಾದನೆ ಮಾಡುವ ಕೆಲಸ ಆಗಬೇಕು. ಪಾಲುಬಿದ್ದ ಗದ್ದೆಯಲ್ಲಿ ಭತ್ತದ ಬೆಳೆ ಕಾಣಬೇಕು. ಅದಕ್ಕಾಗಿ ಯಾಂತ್ರಿಕೃತ ಕೃಷಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನರಿಗೆ ಅನ್ನಕಕೊಡುವ ಕೆಲಸ ಆಗಲಿ ಎಂದ ಅವರು ಆಹಾರ ಮತ್ತು ವಾಣಿಜ್ಯ ಬೆಳೆ ಜೊತೆಯಾಗಿ ಬೆಳೆಯಬೇಕೆಂದರು. ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಫಲಾನುಭವಿಗಳಿಗೆ ವಿತರಿಸಿದ ಟಿಲ್ಲರ್ಗೆ ಚಾಲನೆ ನೀಡಿದರು. ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ಕೋರಂಗ, ತಾ.ಪಂ ಸದಸ್ಯ ಹರೀಶ್ ಬಿಜತ್ರೆ, ಕೃಷಿಕ ಸಮಾಜದ ಸದಸ್ಯ ಐ.ಸಿ.ಕೈಲಾಸ್, ಕೃಷಿ ಇಲಾಖೆ ಉಪನಿರ್ದೇಶಕ ಶಿವಶಂಕರ್ ಉಪಸ್ಥಿತರಿದ್ದರು.