HomePage_Banner
HomePage_Banner
HomePage_Banner
HomePage_Banner

ದೊಡ್ಡಡ್ಕ ಶ್ರೀಮಹಾಲಕ್ಷ್ಮಿ ಭಜನಾ ಮಂದಿರದ ವಾರ್ಷಿಕೋತ್ಸವ- ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹೆತ್ತ ತಂದೆ ತಾಯಿಗಳೇ ಕಣ್ಣಿಗೆ ಕಾಣುವ ದೇವರು. ಅವರನ್ನು ನಾವು ಗೌರವದಿಂದ ನೋಡಿಕೊಂಡರೆ ನಮ್ಮ ಮುಂದಿನ ಪೀಳಿಗೆಯೂ ಅದನ್ನೇ ಅನುಸರಿಸುತ್ತದೆ ಈ ಸಂಸ್ಕೃತಿ ಉತ್ತಮ ಜನಾಂಗವನ್ನು ರೂಪಿಸುತ್ತದೆ ಎಂದು ನರಹರಿ ಮಾಸ್ತರ್ ಹೇಳಿದು. ದೊಡ್ಡಡ್ಕ ಶ್ರೀಮಹಾಲಕ್ಷ್ಮಿ ಭಜನಾ ಮಂದಿರದ ೨೮ನೇ ವಾರ್ಷಿಕೋತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪುತ್ತೂರು ಸಂಚಾರಿ ಪೊಲೀಸ್ ಉಪನಿರೀಕ್ಷಕ ರಾಮನಾಯ್ಕ ಗೆಣಸಿನಕುಮೇರು ಮಾತನಾಡಿ ವಾಹನ ಸವಾರರು ಸೂಕ್ತ ದಾಖಲೆಗಳನ್ನು ಜೊತೆಯಲ್ಲಿ ಇರಿಸಿಕೊಳ್ಳಬೇಕು. ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು ಎಂದರು. ನ್ಯಾಯವಾದಿ ಚೇತನ್ ನಾಯಕ್ ಮಾತನಾಡಿ ಹಿರಿಯ ನಾಗರಿಕರಿಗೆ ಸರಕಾರದಿಂದ ಕೆಲವು ಸವಲತ್ತುಗಳಿವೆ. ಮಂದಿರಗಳಲ್ಲಿ ಭಜನೆಯ ಜೊತೆಗೆ ಕಾನೂನು ಮಾಹಿತಿ, ವೈದ್ಯಕೀಯ ಶಿಬಿರಗಳನ್ನು ಆಯೋಜಿಸಬಹುದು ಎಂದರು. ಪ್ರಣಮ್ಯ ಪಾಲೆಚ್ಚಾರು ಪ್ರಾರ್ಥಿಸಿದರು. ಭಜನಾ ಮಂದಿರದ ಅಧ್ಯಕ್ಷ ಜಗದೀಶ ಭಂಡಾರಿ ಗೆಣಸಿನ ಕುಮೇರು ಸ್ವಾಗತಿಸಿದರು. ವೆಂಕಟಕೃಷ್ಣ ಭಟ್ ಲೆಕ್ಕಪತ್ರ ಮಂಡಿಸಿದರು. ಸೇವಾ ಟ್ರಸ್ಟ್ ಅಧ್ಯಕ್ಷ ಸೇಸಪ್ಪ ನಾಯ್ಕ ದೊಡ್ಡಡ್ಕ ವಂದಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ವೈದಿಕ ತಿರುಮಲೇಶ್ವರ ಭಟ್ ಮಿತ್ತೂರು ರವರಿಂದ ಗಣಪತಿ ಹವನ, ಸಾರ್ವಜನಿಕ ಶ್ರೀಮಹಾಲಕ್ಷ್ಮಿ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ರಾತ್ರಿ ಅನ್ನಸಂತರ್ಪಣೆ, ಬಳಿಕ ಶ್ರೀಕೋದಂಡರಾಮ ಯಕ್ಷಗಾನ ಕಲಾ ಮಂಡಳಿ ಹನುಮಗಿರಿ ಇವರಿಂದ ಓಂ ನಮಃ ಸಿವಾಯ ರಕ್ತರಾತ್ರಿ ಯಕ್ಷಗಾನ ಬಯಲಾಟ ನಡೆಯಿತು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.