ಕಾವು : ಒಕ್ಕಲಿಗ ಸ್ವಸಹಾಯ ಗುಂಪುಗಳ ಒಕ್ಕೂಟ ಮಾಡ್ನೂರು ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಮಾಡ್ನೂರು, ಮಹಿಳಾ ಘಟಕ, ಯುವ ಘಟಕ ಹಾಗೂ ಮಾದರಿ ಗ್ರಾಮ ಸಮಿತಿ ಮಾಡ್ನೂರು ಇದರ ಸಹಕಾರದೊಂದಿಗೆ ಮಾದರಿ ಗ್ರಾಮ ಯೋಜನೆಯ ಸಮಾರೋಪ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭೆ, ಮಾದರಿ ಗ್ರಾಮ ಹಸ್ತಾಂತರ ಕಾರ್ಯಕ್ರಮ ಜತ್ತಪ್ಪ ಗೌಡ ಕೆಮ್ಮತ್ತಡ್ಕರವರ ಮನೆಯಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ರವರು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದರ ಮಾದರಿ ಗ್ರಾಮ ಯೋಜನೆಯನ್ನು ಮಾಡ್ನೂರು ಒಕ್ಕಲಿಗ ಸ್ವಸಹಾಯ ಒಕ್ಕೂಟ ಹಲವಾರು ಸಮಾಜಮುಖಿ ಹಾಗೂ ಧಾರ್ಮಿಕ ಪ್ರಜ್ಞೆ ಮೂಡಿಸುವ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಮಡು ಇಡೀ ತಾಲೂಕಿಗೆ ಮಾದರಿಯಾಗಿದ್ದು ಅಭಿನಂದನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪೂರ್ಣಾತ್ಮರಾಮ ಈಶ್ವರಮಂಗಲರವರು ಧಾರ್ಮಿಕ ಉಪನ್ಯಾಸ ನೀಡಿ ಭಜನೆಯಿಂದ ಸಂಸ್ಕೃತಿ ಸಂಸ್ಕಾರ ಹೆಚ್ಚಿಸುವುದರ ಜೊತೆಗೆ ಭಕ್ತರನ್ನು ಭಗವಂತನ ಸನ್ನಿಧಿಗೆ ಕೊಂಡೊಯ್ಯುವ ಶಕ್ತಿ ಭಜನೆಗಿದೆ. ಭಜನೆ ಭಗವಂತನ ಉತ್ತಮ ಸೇವೆಯಾಗಿದ್ದು ಇದರಿಂದ ನಮ್ಮ ಬಾಹ್ಯ ಮತ್ತು ಆಮತರಿಕ ಉನ್ನತಿ ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗೆ ಗೌಡ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಎಚ್.ಡಿ. ಶಿವರಾಮ ಮಾತನಾಡಿ, ಮಾಡ್ನೂರು ಒಕ್ಕಲಿಗ ಗೌಡ ಸಂಘ ತಮ್ಮ ಗ್ರಾಮ ಮಾದರಿಯನ್ನಾಗಿಸುವ ಉzಶದಿಂದ ಮಾದರಿ ಗ್ರಾಮ ಯೋಜನೆಯನ್ನು ಉನುಷ್ಠಾನಗೊಳಿಸಿ, ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಪ್ರತಿ ಗ್ರಾಮ ಸಮಿತಿಗೂ ಮಾದರಿಯಾಗಿದೆ ಎಂದರು. ಒಕ್ಕಲಿಗ ಸ್ವ.ಸಹಾಯ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಎ.ವಿ ನಾರಾಯಣ, ಬಲ್ನಾಡು ಉಳ್ಳಾಲ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಸಂದೋರ್ಭೋಚಿತವಾಗಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಒಕ್ಕಲಿಗ ಮಾಡ್ನೂರು ಸ್ವಸಹಾಯ ಗುಂಪುಗಳ ಒಕ್ಕೂಟ ಅಧ್ಯಕ್ಷ ಲೋಕೇಶ್ ಚಾಕೋಟೆ ಮಾತನಾಡಿ ಮಾದರಿ ಗ್ರಾಮ ಯೋಜನೆಯನ್ನು ಮಾಡ್ನೂರು ಒಕ್ಕೂಟ ಮೂರು ವರ್ಷಗಳಲ್ಲಿ ಗ್ರಾಮದ ಸಮಾಜ ಬಾಂಧವರ ಪೂರ್ಣ ಸಹಕಾರದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ವೇದಿಕೆಯಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಶೇಷಪ್ಪ ಗೌಡ ಪರನೀರು ಮಾದರಿ ಗ್ರಾಮ ಸಮಿತಿಯ ವಿಠಲ ಗೌಡ ಕಟ್ಟಪುಣಿ, ಬಲ್ನಾಡು ಮಾದರಿ ಗ್ರಾಮ ಸಮಿತಿಯ ಅಧ್ಯಕ್ಷ ನಾರಾಯಣ ಗೌಡ ಕುಕ್ಕುತ್ತಡಿ ಉಪಸ್ಥಿತರಿದ್ದರು.
ಮಾದರಿ ಗ್ರಾಮ ಯೋಜನೆ ಹಸ್ತಾಂತರ : ಒಕ್ಕಲಿಗ ಸ್ವ.ಸಹಾಯ ಟ್ರಸ್ಟ್ ಪುತ್ತೂರು ಇದರ ಮಾದರಿ ಗ್ರಾಮ ಯೋಜನೆಯನ್ನು ಪ್ರಥಮವಾಗಿ ಮಾಡ್ನೂರು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಪ್ರತಿ ವಾರದ ಮಂಗಳವಾರ ಭಜನಾ ಕಾರ್ಯಕ್ರಮ, ರಕ್ತದಾನ ಶಿಬಿರ, ಮುಂತಾದ ಕಾರ್ಯಕ್ರಮವನ್ನು ಹಮ್ಮಿಗೊಂಡು ಯಶಸ್ವಿಯಾಗಿ ೩ ವರ್ಷಗಳನ್ನು ಪೂರೈಸಿದ್ದು ಮುಂದಿನ ಅವಧಿಗೆ ಬಲ್ನಾಡು ಗ್ರಾಮಕ್ಕೆ ಶಾಸಕ ಸಂಜೀವ ಮಠಂದೂರುರವರು ಬಲ್ನಾಡು ಉಳ್ಳಾಲ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಮಾದರಿ ಗ್ರಾಮ ಸಮಿತಿ ಬಲ್ನಾಡು ಇದರ ಅಧ್ಯಕ್ಷ ನಾರಾಯಣ ಗೌಡ ಕುಕ್ಕುತ್ತಡಿ ಇವರಿಗೆ ಯೋಜನೆಯ ಪ್ರತಿಯನ್ನು ಹಸ್ತಾಂತಿಸಿದರು.
ಸನ್ಮಾನ : ಮಾದರಿ ಗ್ರಾಮ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮಾದರಿ ಗ್ರಾಮ ಸಮಿತಿ ಮಾಡ್ನೂರು ಇದರ ಅಧ್ಯಕ್ಷ ವಿಠಲ ಗೌಡ ಕಟ್ಟಪುಣಿ ರವರನ್ನು ಶಾಲು ಹಾಕಿ, ಸ್ಮರಣಿಕೆ ನೀಡಿ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಹಾಗೂ ಕೃಷಿ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಜತ್ತಪ್ಪ ಗೌಡ ಕೆಮ್ಮತ್ತಡ್ಕ, ಇವರನ್ನು ಶಾಲು ಹಾಕಿ ಸ್ಮರಣಿಕೆ ನೀಡಿ, ಅಭಿನಂದಿಸಲಾಯಿತು. ಮತ್ತು ಹಲವಾರು ಭಜನಾ ಸಂಘಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸೀತಾರಾಮ ಗೌಡ ಕೊಂಕಣಿಗುಂಡಿ ಇವರನ್ನು ಅಭಿನಂದಿಸಲಾಯಿತು.
ಮಾದರಿ ಗ್ರಾಮ ಯೋಜನೆಯಲ್ಲಿ ಪ್ರತಿ ಮಂಗಳವಾರ ನಡೆದ ಒಟ್ಟು ೧೫೯ ಭಜನಾ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಭಜನೆಯಲ್ಲಿ ಭಾಗವಹಿಸಿದ, ವೆಂಕಪ್ಪ ಗೌಡ ಚಾಕೋಟೆ, ಐತ್ತಪ್ಪ ಗೌಡ ಪರನೀರು, ಲಲಿತಾ ಚಾಕೋಟೆ, ನವೀನ ಬಿ.ಡಿ., ಗಿರಿಧರ ಗೌಡ ಚಾಕೋಟೆ, ಶೇಷಪ್ಪ ಗೌಡ ಪರನೀರು, ಸಂಜೀವ ಗೌಡ ಚಾಕೋಟೆ, ಭಜನಾ ಗುರುಗಳಾದ ನಾಗರಾಜ ಗೌಡ ಮಂಜಲಡ್ಕ ಊರ ಗೌಡರುಗಳಾದ ಗಂಗಾಧರ ಗೌಡ ಚಾಕೋಟೆ ಇವರುಗಳನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಾಡ್ನೂರು ಒಕ್ಕಲಿಗ ಸ್ವ.ಸಹಾಯ ಗುಂಪುಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ಚಾಕೋಟೆ ಸ್ವಾಗತಿಸಿದರು. ಅರ್ಪಿತಾ ಚಾಕೋಟೆ ಪ್ರಾರ್ಥಿಸಿದರು. ಒಕ್ಕಲಿಗ ಗೌಡ ಮಾದರಿ ಗ್ರಾಮ ಯೋಜನೆಯ ಜತೆ ಕಾರ್ಯದರ್ಶಿ ಶ್ರೀಕಾಂತ ಗೌಡ ವಂದಿಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ.ಎಂ. ಕಾರ್ಯಕ್ರಮ ನಿರೂಪಿಸಿದರು.