HomePage_Banner
HomePage_Banner
HomePage_Banner
HomePage_Banner

ಪಾಲ್ತಾಡಿ ಬಿಜೆಪಿ ಸಂಸ್ಥಾಪನ ದಿನಾಚರಣೆ | ಬಿಜೆಪಿ ಜಗತ್ತಿನ ದೊಡ್ಡ ರಾಜಕೀಯ ಪಕ್ಷ -ನಳಿನ್ ಕುಮಾರ್ ಕಟೀಲ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು : ಹಿರಿಯರ ತ್ಯಾಗದ ಫಲವಾಗಿ ಬಿಜೆಪಿ ಇಂದು ಜಗತ್ತಿನ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿದೆ.ಅತೀ ಹೆಚ್ಚು ಲೋಕಸಭಾ ಸದಸ್ಯರನ್ನು,ಶಾಸಕರನ್ನು ಹೊಂದಿರುವ ಪಕ್ಷ ಬಿಜೆಪಿಯಾಗಿದೆ.ರಾಷ್ಟ್ರೀಯವಾದೀ ಪಕ್ಷವಾಗಿರುವ ಬಿಜೆಪಿ ಇಂದು ಹೆಚ್ಚಿನ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.ಬಿಜೆಪಿಯಿಂದ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ,ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಎ.೬ರಂದು ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ಪಾಲ್ತಾಡಿ ಬೂತ್ ೭೦ರ ವತಿಯಿಂದ ನಡೆದ ಬಿಜೆಪಿ ಸಂಸ್ಥಾಪನ ದಿನಾಚರಣೆಯಲ್ಲಿ ಬಿಜೆಪಿ ಧ್ವಜಾರೋಹಣ ನಡೆಸಿ ಮಾತನಾಡಿದರು.

ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ತನ್ನ ಹುಟ್ಟೂರಿನ ಬೂತ್‌ನಲ್ಲಿ ಸಂಸ್ಥಾಪನ ದಿನಾಚರಣೆ ನಡೆಸಿರುವುದು ಖುಷಿಯ ವಿಚಾರ.ಕಾಂಗ್ರೇಸ್‌ನ ದಬ್ಬಾಳಿಕೆಯ ಆಡಳಿತದ ಸಮಯದಲ್ಲೂ ಎದೆಗುಂದದೆ ಪಕ್ಷದ ಉನ್ನತಿಗಾಗಿ ಶ್ರಮಿಸಿದ ವಾಜಪೇಯಿ,ಅಡ್ವಾಣಿ ಅವರಂತಹ ನಾಯಕರ ತ್ಯಾಗದ ಫಲವಾಗಿ ಬಿಜೆಪಿ ಇಂದು ಬಲಿಷ್ಟವಾಗಿದೆ.ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವನ್ನು ಜಗದ್ಗುರುವನ್ನಾಗಿ ರೂಪುಗೊಳಿಸುವ ಕಾರ್ಯದಿಂದ ಇಡೀ ಜಗತ್ತೇ ಬಿಜೆಪಿಯ ಆಡಳಿತವನ್ನು ಮೆಚ್ಚಿಕೊಂಡಿದೆ ಎಂದರು.

ಈ ಸಂದರ್ಭ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು,ಬಂಟ್ವಾಳ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಬಂಟ್ವಾಳ,ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ,ಸದಸ್ಯರಾದ ಸತೀಶ್ ಅಂಗಡಿಮೂಲೆ,ಹರಿಕಲಾ ರೈ,ಭರತ್ ರೈ,ತಾರಾನಾಥ ಸುವರ್ಣ,ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು,ಬಿಜೆಪಿ ಸುಳ್ಯ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸದಸ್ಯ ಪ್ರವೀಣ್ ಕುಮಾರ್ ,ಪಾಲ್ತಾಡಿ ಬೂತ್ ೭೦ರ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ,ಮಂಡಲ ಕಾರ್ಯದರ್ಶಿ ಇಂದಿರಾ ಬಿ.ಕೆ ವಂದಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.