HomePage_Banner
HomePage_Banner
HomePage_Banner
HomePage_Banner

ಎ.7: ಸುದ್ದಿ ಬಿಡುಗಡೆ ಪ್ರತಿಭಾರಂಗದ ಪ್ರತಿಭಾದೀಪ ಪುರಸ್ಕಾರ | ಪುತ್ತೂರು ಕಡಬ ತಾಲೂಕಿನ ಹತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಗತ್ತಿನೆಲ್ಲೆಡೆ ಇರುವ ಪುತ್ತೂರಿನವರು ಓದುವ ತಾಲೂಕಿನ ನಂ.೧ಕನ್ನಡ ದಿನಪತ್ರಿಕೆ ಸುದ್ದಿಬಿಡುಗಡೆ ತನ್ನ ಸಮಾಜಮುಖಿ ವರದಿ ವಿಷಯಗಳಿಂದ ಮನೆಮಾತಾಗಿದ್ದು ಎಲ್ಲರ ಗಮನ ಸೆಳೆದಿದ್ದು ಮನ ಮನೆಯ- ಪತ್ರಿಕೆಯಾಗಿದೆ. ಪತ್ರಿಕೆಯ ವ್ಯವಸ್ಥಾಪನಾ ನಿರ್ದೇಶಕರು ಪ್ರಧಾನ ಸಂಪಾದಕರೂ ಆಗಿರುವ ಡಾ.ಯು.ಪಿ ಶಿವಾನಂದರ ಕನಸು ಸೃಜನ ಶೀಲತೆ, ಬಳಗದವರ ಸಹಕಾರದಿಂದ ದೃಶ್ಯ ಮಾಧ್ಯಮವಾಗಿಯೂ ಬೆಳಗಿರುವುದು ಕಾರ್ಯಕ್ರಮ ವೈವಿಧ್ಯಗಳಿಂದ ನಾಡಿನೆಲ್ಲೆಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇವಲ ಸುದ್ದಿ ಮಾತ್ರವಲ್ಲದೆ ಮಕ್ಕಳ ಪ್ರತಿಭೆ ಬೆಳಗಿಸುವ ಕೆಲಸವೂ ಸುದ್ದಿ ಪತ್ರಿಕೆಯಿಂದ ಆಗುತ್ತಿದೆ. ೧೯೮೪-೮೫ರಿಂದ ಮಕ್ಕಳಿಗಾಗಿ ಪ್ರತಿಭಾರಂಗ ಅಂಕಣ, ಆಗಾಗ ಪ್ರಕಟವಾಗುತ್ತಿದ್ದು ತನ್ನ ವಿಷಯ ವೈದ್ಯತೆಗಳಿಂದ ಮಕ್ಕಳ ಹೆತ್ತವರ ಗಮನ ಸೆಳೆದಿದೆ. ೧೯೯೧-೯೨ರಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರತಿಭಾದೀಪ ಪುರಸ್ಕಾರ ನೀಡುವ ಕಾರ್ಯ ಎಲ್ಲ ಹಿರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕೊರೊನಾದ ಸಂಕಷ್ಟ ಕಾಲದಲ್ಲೂ ಮಕ್ಕಳು ತಮ್ಮ ಕಲಿಕೆಯೊಂದಿಗೆ ಪ್ರತಿಭಾ ಪರಿಚಯ ಲೇಖನ ಕವನ ಚಿತ್ರ ಮಾಡುವುದರ ಮೂಲಕ ತಮ್ಮ ಸೃಜನಶೀಲತೆ ಬೆಳೆಸಿಕೊಂಡಿದ್ದಾರೆ.

ಪುತ್ತೂರಿನ ಹೃದಯಭಾಗದಲ್ಲಿರುವ ಪ್ರಗತಿ ಸ್ಟಡಿ ಸೆಂಟರಿನ ಸಹಯೋಗದಲ್ಲಿ ಪತ್ರಿಕಾ ಪ್ರಧಾನ ಸಂಪಾದಕರಾಗಿರುವ ಡಾ.ಯು.ಪಿ.ಶಿವಾನಂದರ ಅಧ್ಯಕ್ಷತೆಯಲ್ಲಿ ಹತ್ತು ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾದೀಪ ಪುರಸ್ಕಾರ ಪ್ರದಾನ ಕಾರ್ಯಕ್ರಮ ಕೋವಿಡ್ ನಿಯಮಾವಳಿಯಂತೆ ಎ.೭ರಂದು ಬೆಳಿಗ್ಗೆ ೧೧ರಿಂದ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನಡೆಯಲಿದೆ. ಸುದಾನ ಶಾಲಾ ಸಂಚಾಲಕರಾಗಿರುವ ವಿಜಯ ಹಾರ್ವಿನ್ ಪ್ರತಿಭಾದೀಪ ಪುರಸ್ಕಾರ ನೀಡಿ ಅಭಿನಂದಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಗತಿ ಸ್ಟಡಿ ಸೆಂಟರಿನ ಮುಖ್ಯಸ್ಥರೂ ಶಿಕ್ಷಣ ಕಲಾ ಪೋಷಕರೂ ಆಗಿರುವ ಪಿ.ವಿ.ಗೋಕುಲ್ ನಾಥ್, ಸುಳ್ಯ ಚಂದನ ಸಾಹಿತ್ಯವೇದಿಕೆಯ ಅಧ್ಯಕ್ಷರು ಪ್ರತಿಭಾ ಪ್ರೋತ್ಸಾಹಕರು ಕವಿ ಸಾಹಿತಿ ಸಂಘಟಕರಾಗಿರುವ ಎಚ್.ಭೀಮರಾವ್ ವಾಷ್ಠರ್ ಸುಳ್ಯ ಹಾಗೂ ಮಂಜುನಾಥ ಕನ್ಸ್ ಸ್ಟ್ರಕ್ಷನ್ ಬಳ್ಳಾರಿಯ ಮುಖ್ಯಸ್ಥರಾದ ಮಂಜುನಾಥ ಮೇಸ್ತ್ರಿ ಬಳ್ಳಾರಿ, ಸುಳ್ಯ ಭಾಗವಹಿಸಲಿರುವರು ಎಂದು ಪ್ರತಿಭಾ ರಂಗ ಬಳಗದ ಸಂಚಾಲಕರಾಗಿರುವ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

ಸುಮಾರು 25 ವರ್ಷಗಳಿಂದ ಪ್ರತಿಭಾರಂಗದ ಮೂಲಕ ಪ್ರತಿಭಾದೀಪ ಪುರಸ್ಕಾರ ನಡೆಸಿಕೊಂಡು ಬರಲಾಗುತ್ತಿದ್ದು ಇದೀಗ ೨೦೨೦-೨೧ರಿಂದ ಮತ್ತೆ ಪ್ರಾರಂಭಿಸಲಾಗಿದೆ. ಈ ಬಾರಿ ಪುತ್ತೂರು-ಕಡಬ ತಾಲೂಕಿನ ಹತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರನ್ನು ಗುರು-ಹಿರಿಯರ ಕೈಯಿಂದ ಪ್ರತಿಭಾದೀಪ ಪುರಸ್ಕಾರ ನೀಡಿ ಹರಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.