HomePage_Banner
HomePage_Banner
HomePage_Banner
HomePage_Banner

ಸ್ವಚ್ಛ ಪುತ್ತೂರು ನಿರ್ಮಾಣಕ್ಕೆ ಸ್ವಚ್ಛತಾ ಆಂದೋಲನ – ಕಲ್ಲೇಗದಿಂದ ದರ್ಬೆ ತನಕ ಸ್ವಚ್ಛತಾ ಕಾರ್ಯಕ್ರಮ

  • ಒಂದು ದಿವಸದ ಕಾರ್ಯಕ್ರಮವಾಗದೆ ನಿರಂತರವಾಗಿರಲಿ – ಸಂಜೀವ ಮಠಂದೂರು

ಪುತ್ತೂರು: ಸ್ವಚ್ಛತೆ ಕೇವಲ ಪೌರಕಾರ್ಮಿಕರು ಮಾಡುವ ಕೆಲಸವಲ್ಲ ಎಲ್ಲಾ ಜನರ ಸಹಭಾಗಿತ್ವ ಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಾಗದೆ ನಿರಂತರವಾಗಿರಲಿ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.

ವಿಶ್ವ ಆರೋಗ್ಯ ದಿನದ ಜೊತೆಯಲ್ಲೇ ನಗರಸಭೆ ಸ್ವಚ್ಚ ಪುತ್ತೂರು ಪರಿಕಲ್ಪಣೆಯಲ್ಲಿ ಎ.೭ ರಂದು ಕಲ್ಲೇಗದಿಂದ ದರ್ಬೆ ಅಶ್ವಿನಿ ವೃತ್ತದ ತನಕ ನಡೆದ ಸ್ವಚ್ಚತಾ ಆಂದೋಲನಕ್ಕೆ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದ ಬಳಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಗರದ ಎಲ್ಲಾ ರಸ್ತೆಗಳು ಮುಂದಿನ ದಿನ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ ಸ್ವಚ್ಛ ಭಾರತ ಹೇಗಿರಬೇಕೋ ಆ ರೀತಿಯಲ್ಲಿ ಇರಬೇಕೆಂದು ಈ ಸ್ವಚ್ಚಾತಾ ಕಾರ್ಯಕ್ರಮ ನಡೆಯುತ್ತಿದೆ. ಇದು ಒಂದು ದಿನದ ಕಾರ್ಯಕ್ರಮ ಅಲ್ಲ. ನಿತ್ಯ ನಿರಂತರ ನಡೆಯುವ ಕಾರ್ಯಕ್ರಮ ಆಗಬೇಕು. ಪುತ್ತೂರಿನ ಎಲ್ಲಾ ಜನತೆ ಕೈ ಜೋಡಿಸಿದಾಗ ಮಾತ್ರ ಸ್ವಚ್ಛ ಪುತ್ತೂರು ಮತ್ತು ಸುಂದರ ಪುತ್ತೂರು ಅಗಲು ಸಾಧ್ಯ. ಸ್ವಚ್ಛ ಪುತ್ತೂರಿನ ರೂವಾರಿಗಳು ಪೌರ ಕಾರ್ಮಿಕರ ಜೊತೆಯಲ್ಲಿ ನಮ್ಮೆಲ್ಲ ನಾಗರಿಕರೂ ಕೂಡಾ ಹೆಚ್ಚು ಜವಾಬ್ದಾರಿ ವಹಿಸಿ ಸ್ವಚ್ಚತೆಗೆ ಸಹಕಾರ ನೀಡಬೇಕೆಂದು ನಾನೊಬ್ಬ ಜನಪ್ರತಿನಿಧಿಯಾಗಿ ವಿನಂತಿಸುತ್ತಿದ್ದೇನೆ ಎಂದರು.

ನಗರಸಭೆ ವತಿಯಿಂದ ಸ್ವಚ್ಛ ಪುತ್ತೂರು ಪರಿಕಲ್ಪಣೆಯಲ್ಲಿ ಎ.7ರಂದು ಕಲ್ಲೇಗದಿಂದ ದರ್ಬೆ ಅಶ್ವಿನಿ ವೃತ್ತದ ತನಕ ನಡೆದ ಸ್ವಚ್ಛತಾ ಆಂದೋಲನವನ್ನು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರಸಭಾ ಸದಸ್ಯರು, ಪೌರಾಯುಕ್ತೆ ರೂಪಾ ಶೆಟ್ಟಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.