- ಇಂಡಿಯನ್ ಆಂಡ್ ಯುರೋಪ್ ಟೈಲ್ಸ್ಗಳು
- ಪ್ರಸಿದ್ಧ ಕಂಪೆನಿ ಉತ್ಪನ್ನಗಳು ಫ್ಯಾಕ್ಟರಿ ದರದಲ್ಲಿ
- ಪ್ರೆಸ್ಟೀಜ್ ಸಂಸ್ಥೆಯ 6ನೇ ಶಾಖೆ
ಪುತ್ತೂರು: ಯುರೋಪ್ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿರುವ ವರ್ಣರಂಜಿತ, ಅತ್ಯುತ್ತಮ ಗುಣಮಟ್ಟದ, ವಿಶಾಲ ಶ್ರೇಣಿಯ ವಾಲ್, ಫ್ಲೋರ್ ಟೈಲ್ಸ್ ಗಳು, ನ್ಯಾಚುರಲ್ ಸ್ಟೋನ್, ಕ್ಲಾಡಿಂಗ್ ಸ್ಟೋನ್, ಪ್ಲಂಬಿಂಗ್, ಬಾತ್ ರೂಂ ಫಿಟ್ಟಿಂಗ್ಸ್, ವಾಟರ್ ಹೀಟರ್, ಸ್ಯಾನಿಟರಿವೇರ್ಸ್ ಮತ್ತು ಮೊಡ್ಯುಲರ್ ಕಿಚನ್ ಇವುಗಳನ್ನೊಳಗೊಂಡ ಬೃಹತ್ ಮಳಿಗೆ, ಪ್ರೇಸ್ಟೀಜ್ ಎಂಟರ್ಪ್ರೈಸಸ್ ಇದರ ಆರನೇಯ ಶಾಖೆ ಪ್ರೊ ಪ್ರೇಸ್ಟೀಜ್ ಏ.8 ರಂದು ಏಳ್ಮುಡಿ ಪ್ರೊವಿಡೆನ್ಸ್ ಪ್ಲಾಜ್ಹಾದಲ್ಲಿ ಶುಭಾರಂಭಗೊಳ್ಳಲಿದೆ.
ಉದ್ಯಮ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿ, ತನ್ನದೇ ಛಾಪು ಮೂಡಿಸಿ ತನ್ನ ಸೇವೆಯನ್ನು ಮಂಗಳೂರಿನಲ್ಲಿ ಇನ್ನಷ್ಟು ವಿಸ್ತಾರಗೊಳಿಸಿ ಸುಮಾರು ಐದು ಶಾಖೆಗಳನ್ನು ಆರಂಭಿಸಿ ಉತ್ತಮ ರೀತಿಯ ಸೇವೆ ನೀಡಿ ಜನತೆಯ ಪ್ರೀತಿ, ನಂಬಿಕೆ, ವಿಶ್ವಾಸ ಗಳಿಸಿಕೊಂಡು, ಇದೀಗ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತಾರಗೊಳಿಸುವ ಸಲುವಾಗಿ ಮುತ್ತಿನ ನಗರಿ ಖ್ಯಾತಿಯ ಪುತ್ತೂರಿನಲ್ಲಿ ಆರಂಭಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.