ಪುತ್ತೂರು: ಪರ್ಲಡ್ಕ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯ 6 ದಶಕಗಳ ಹಳೆಯ ಕಟ್ಟಡದ ನವೀಕರಣಕ್ಕಾಗಿ ತಿಂಗಳ ಹಿಂದೆ ಕೈಗೊಂಡ ಶ್ರಮದಾನದಲ್ಲಿ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡು ಎ.7ರಂದು ಹಂಚು ಇಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಲೆಯ ಹಿರಿಯ ವಿದ್ಯಾರ್ಥಿ, ತಾ.ಪಂ. ಮಾಜಿ ಅಧ್ಯಕ್ಷ, ಕಟ್ಟಡ ಕಾಮಗಾರಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಹಂಚು ಇಡುವ ಮುಹೂರ್ತಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಪರ್ಲಡ್ಕ ಶಾಲೆಯ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಾವು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರ ಪ್ರಥಮ ಹಂತದ ಕಾರ್ಯ ಪೂರ್ಣಗೊಂಡಿದೆ. ಎಪ್ರಿಲ್ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಶಾಲೆಯನ್ನು ಹಸ್ತಾಂತರ ಮಾಡಬೇಕೆಂದು ಇಟ್ಟು ಕೊಂಡ ಗುರಿಯಂತೆ ಅದು ಈಗ ನೆರವೇರುವ ಸಂದರ್ಭ ಬಂದಿದೆ ಎಂದರು.
ಎಲ್ಲರ ಸಹಕಾರದಿಂದ ಕಾಮಗಾರಿ ಯಶಸ್ವಿ:
ಕಟ್ಟಡ ಕಾಮಗಾರಿ ಸಮಿತಿಯ ಅಧ್ಯಕ್ಷೆ ಹಾಗೂ ನಗರಸಭೆಯ ಉಪಾಧ್ಯಕ್ಷೆ ವಿದ್ಯಾಗೌರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಯ ಕಟ್ಟಡ ಕಾಮಗಾರಿ ನವೀಕರಣಗೊಳಿಸಲು ಕೈಗೆತ್ತಿಕೊಂಡು ಇದೀಗ ಮುಗಿಸುವ ಹಂತದಲ್ಲಿ ಇದ್ದೇವೆ. ಹಂಚು ಇಟ್ಟ ಬಳಿಕ ಮುಂದೆ ಸುಣ್ಣ ಬಣ್ಣ ಬಳಿಯುವ ಕೆಲಸ ಬಾಕಿ ಇದೆ. ಅದು ಕೂಡಾ ಶೀಘ್ರ ನೆರವೇರಲಿದೆ. ಈ ಎಲ್ಲಾ ಕಾಮಗಾರಿಗಳಿಗೆ ಊರವರ, ಹಿರಿಯ ವಿದ್ಯಾರ್ಥಿಗಳ, ಕಟ್ಟಡ ಕಾಮಗಾರಿ ಸಮಿತಿ, ಶಿಕ್ಷಕರ ಪೂರ್ಣ ಸಹಕಾರ ಸಿಕ್ಕಿದೆ ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಭಟ್ ಕಟ್ಟಡ ನವೀಕರಣದ ಯೋಜನೆಯ ಮಾಹಿತಿ ನೀಡಿದರು. ಕಟ್ಟಡ ಕಾಮಗಾರಿ ಸಮಿತಿ ಕಾರ್ಯದರ್ಶಿ ಜೊತೆಕಾರ್ಯದರ್ಶಿ ವಿಕ್ರಂ ಪರ್ಲಡ್ಕ, ಶಾಲಾ ಪ್ರಭಾರ ಮುಖ್ಯಗುರು ವತ್ಸಲಾ, ಸಹ ಶಿಕ್ಷಕರಾದ ವಾಣಿ, ಅಕ್ಷತಾ, ಭವ್ಯ, ಕಟ್ಟಡ ಕಾಮಗಾರಿ ಸಮಿತಿ ಉಪಾಧ್ಯಕ್ಷ ಜೈನುದ್ದೀನ್, ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರ ಮಹೇಶ್, ಕಟ್ಟಡ ಕಾಮರಾಗಿ ಸಮಿತಿ ಪದಾಧಿಕಾರಿಗಳಾದ ಶಿವಕುಮಾರ್, ಬಾಲಕೃಷ್ಣ, ಎಸ್ಡಿಎಂಸಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಉದಯ ಬಂಗಾರಡ್ಕ, ರಮೇಶ್ ಗೌಡ, ಜಗದೀಶ್ ಜೋಗಿ, ಬಾಲಕೃಷ್ಣ ಆಚಾರ್ಯ, ನಿತ್ಯಾನಂದ ಪಾಂಗ್ಲಾಯಿ, ಯದುನಂದನ ಬೀರಮಲೆ, ದೀಕ್ಷಿತ್ ಕಲ್ಲಿಮಾರ್, ಉಮೇಶ್ ಬೀರಮಲೆ, ವಿಶ್ವನಾಥ ಮಚ್ಚಿಮಲೆ, ಪ್ರದೀಪ್ ಪಾಂಗ್ಲಾಯಿ, ಲೋಕೇಶ್ ಬೀರಮಲೆ, ಚಿದಾನಂದ, ನಿವೃತ್ತ ಶಿಕ್ಷಕಿ ಸತ್ಯಭಾಮ, ಎಸ್ಡಿಎಂಸಿ ಸದಸ್ಯ ಸುನಿತಾ, ಲಲಿತಾ, ಪ್ರೀತಾ, ಸಿದ್ದಪ್ಪ, ಪುರುಷೋತ್ತಮ ನಾಯಕ್ ಪಾಂಗ್ಲಾಯಿ, ನಾರಾಯಣ, ಶಿವರಾಮ್, ವಿಶಾಲಕ್ಷಿ, ಸುಜಾತ,, ಪ್ರೇಮ, ಕಮಲ, ಯಾದವ ಬೀರಮಲೆ, ಅಡುಗೆ ಸಿಬ್ಬಂದಿಗಳಾದ ಜಯಲಕ್ಷ್ಮೀ, ಸಹಾಯಕ ಅಡುಗೆ ಸಿಬ್ಬಂದಿ ಸೀತಾ, ಮಂಜುನಾಥ್ ಎನ್ ಆಚಾರ್ಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಲೋಕೇಶ್ ಅವರು ಪ್ರಥಮ ಹಂಚನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಎನ್ ಭಟ್ ಅವರಿಗೆ ಹಸ್ತಾಂತರಿಸಿ ಅನ್ಯ ಕಾರ್ಯಕ್ರಮದ ನಿಮಿತ್ತ ತೆರಳಿದರು. ಈ ಸಂದರ್ಭದಲ್ಲಿ ಇಸಿಒ ಹರಿಪ್ರಸಾದ್, ಬಿಆರ್ಪಿ ವಿಜಯಕುಮಾರ್ ಉಪಸ್ಥಿತರಿದ್ದರು.