ಪುತ್ತೂರು: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಇ- ಬ್ಯಾಂಕಿಂಗ್ನ ಸಾಫ್ಟ್ವೇರ್ ಅಳವಡಿಕೆಯ ಕುರಿತಾಗಿ ಮಾಹಿತಿ ಕಾರ್ಯಗಾರ ಪುತ್ತೂರಿನ ಪ್ರದಾನ ಕಚೇರಿಯ ಸಭಾಂಗಣದಲ್ಲಿ ಎ.7ರಂದು ನಡೆಯಿತು.

ಎಸ್ಡಿಸಿಸಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ದೀಪ ಪ್ರಜ್ವಲಿಸಿ ಬಳಿಕ ಮಾತನಾಡಿದ ಅವರು ಎಲ್ಲಾ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘಗಳನ್ನು ಸಂಪೂರ್ಣವಾಗಿ ಇ- ವ್ಯವಹಾರಕ್ಕೆ ಟಚ್ ಕೊಡುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಬೇಕಾಗುವ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಸಿಗಲಿದೆ ಎಂದು ಅವರು ಹೇಳಿದರು. ಈಗಾಗಲೇ ರಾಜ್ಯಾದ್ಯಂತ ವಿಶಿಷ್ಟ ಯೋಜನೆಗಳನ್ನು ರೂಪಿಕೊಂಡಿದ್ದು, ಎಲ್ಲವೂ ಇನ್ನೂ ಡಿಜಿಟಲ್ನಿಂದಾಗಿ ಪ್ರಾಮಾಣಿಕ ಮಾಹಿತಿ ಲಭ್ಯವಾಗಲಿರುವುದರಿಂದ ಅವ್ಯವಹಾರಗಳಿಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಈ ಹಿಂದೆ ರಾಜ್ಯದ ನಾನಾ ಕಡೆಗಳಲ್ಲಿ ಕೋಟಿಗಟ್ಟಲೇ ಅವವ್ಯಹಾರಗಳು ನಡೆದು ಮುಚ್ಚುವಂತಹ ಪರಿಸ್ಥಿತಿಗಳು ಎದುರಾಗಿವೆ, ಆದರೇ ಇಂತಹ ಸಾಫ್ಟ್ವೇರ್ ಮುಖೇನಾ ನಡೆಯುವ ವ್ಯವಹಾರ ನಂಬಿಕಾರ್ಹವಾಗಿ ನಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ಈ ಮಾಹಿತಿ ಕಾರ್ಯಗಾರ ಎರಡು ದಿನ ನಡೆಯಲಿದ್ದು ಎಲ್ಲಾ ಸಿಬ್ಬಂದಿಗಳು ಭಾಗವಹಿಸುವಂತೆ ಕೋರಿದರು.

ಶಾಖೆಯ ವ್ಯವಸ್ಥಾಪಕ ರತ್ನಾ ಕುಮಾರ್, ತಾಂತ್ರಿಕ ಮುಖ್ಯಸ್ಥರಾದ ರಾಘವೇಂದ್ರ ಜೋಶಿ, ಮನೋಜ್, ಸೂಪರ್ವೈಸರ್ ವಸಂತ ಹಾಗೂ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಶಾಖೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಕಂಪ್ಯೂಟರ್ ನಿಯಂತ್ರಣ ಸಿಬಂದಿಗಳು ಭಾಗವಹಿಸಿದ್ದರು.
ಸವಣೂರು ಪ್ರಾಥಮಿಕ ಸಹಕಾರಿ ಪತ್ತಿನ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿ, ಚಾರ್ವಾಕ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಶೋಕ್ ವಂದಿಸಿದರು.