HomePage_Banner
HomePage_Banner
HomePage_Banner
HomePage_Banner

ಮುತ್ತಪ್ಪ ರೈ ಆಸ್ತಿ ವಿಚಾರ: ಎರಡನೇ ಪತ್ನಿ ಅನುರಾಧ ಸಲ್ಲಿಸಿದ್ದ ಅರ್ಜಿ ವಿಚಾರಣೆ | ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ನಿಂದ ಆಸ್ತಿ ಪರಭಾರೆ ಮಾಡದಂತೆ ಆದೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಾಜಿ ಭೂಗತ ದೊರೆ, ಉದ್ಯಮಿ ಎನ್.ಮುತ್ತಪ್ಪ ರೈ ಆಸ್ತಿ ವಿಭಾಗ ಸಂಬಂಧ ಮುತ್ತಪ್ಪ ರೈಯವರ ಎರಡನೇ ಪತ್ನಿ ಅನುರಾಧ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಸದ್ಯಕ್ಕೆ ಆಸ್ತಿ ಪರಭಾರೆ ಮಾಡದಂತೆ ಮಧ್ಯಂತರ ಆದೇಶ ಮಾಡಿದೆ.

ಮುತ್ತಪ್ಪ ರೈ ಅವರು ನಿಧನರಾದ ಬಳಿಕ ಪತ್ನಿ ಅನುರಾಧ ಅವರು ಪತಿಯ ಆಸ್ತಿಯನ್ನು ಪರಭಾರೆ ವಿಚಾರ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುತ್ತಪ್ಪ ರೈ ಪುತ್ರ ರಾಕಿ, ರಿಕ್ಕಿ ಸೇರಿ ೧೭ ಮಂದಿ ಪ್ರತಿವಾದಿಗಳಿಗೆ ಮೂರವೇ ವ್ಯಕ್ತಿಗಳ ಪರವಾಗಿ ಹಕ್ಕು ಸೃಷ್ಟಿಸದಂತೆ ಮಧ್ಯಂತರ ಆದೇಶ ನೀಡಿದೆ.

ರೈಯವರ ಆಸ್ತಿ ವಿವರ
ನ್ಯಾವಿನಲ್ಲಿ ತೋಟ (ಎಸ್ಟೇಟ್), ಎಂ.ಆರ್.ಸ್ಟಡ್ ಫಾರ್ಮ್‌ಗಳು ಪ್ರೈವೇಟ್ ಲಿಮಿಟೆಡ್, ಎಂ.ಆರ್.ಎನ್ ಡೆವಲಪರ್ಸ್, ಉನ್ನತಿ ಗ್ರಾನೈಟ್‌ಗಳು, ಎಂ.ಆರ್.ಎಸ್ ವೆಂಚರ್ಸ್, ಫೋರ್ ಎಂ ಪ್ರೊಪರ್ಟಿಸ್, ಆಲ್ಪಾ ದೇವನಹಳ್ಳಿ ಪ್ರಾಪರ್ಟಿಸ್, ಎಲ್.ಎಲ್.ಪಿ ಆಲ್ಫಾ ಕನ್ಸೋಲಿಡೇಟೆಡ್ ಪ್ರಾಜೆಕ್ಟ್ (ಇಂಡಿಯಾ), ಎಲ್.ಎಲ್.ಪಿ.ಎಮ್.ಆರ್. ವೆಂಚರ್ಸ್, ಬಿಡದಿ ರಿಯಾಲಿಟಿ ವೆಂಚರ್ಸ್, ಫೋರ್ ಆರ್ ಬಿಲ್ಡರ್ಸ್, ಗಾಂಟಿಗನಹಳ್ಳಿ, ಪಾಂಡವಪುರ, ಶಿವಮೊಗ್ಗ, ರಾಜ್‌ಮಹಲ್ ಅಪಾರ್ಟ್‌ಮೆಂಟ್, ಮಡಿಕೇರಿ, ಕೊಡಂಬೂರ್ ವಿಲೇಜ್, ಹಾಂಚ್ಯಾ ವಿಲೇಜ್,ಮೈಸೂರು ಮನೆ, ಮೈಸೂರ್ ಭೂಮಿ, ಸಕಲೇಶ್‌ಪುರ ಲೇಔಟ್, ನಂದಿಲ್ಯಾಂಡ್ (ಕೆಂಪತಿಮ್ಮನಹಳ್ಳಿ) ಇವುಗಳಾಗಿವೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.