HomePage_Banner
HomePage_Banner
HomePage_Banner
HomePage_Banner

ಮನವಳಿಕೆ ಗುತ್ತು ಹೇಮಂತ್ ರೈ ಬೆಂಗಳೂರು ಉತ್ತರ ಜಿಲ್ಲೆಯ ಬಿ.ಜೆ.ಪಿ ವೃತ್ತಿಪರ ಪ್ರಕೋಷ್ಟದ ಸಹ ಸಂಚಾಲಕರಾಗಿ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಪೆರಾಬೆ ಗ್ರಾಮದ ವಿಠಲ ರೈ ಮನವಳಿಕೆ ಗುತ್ತು ಮತ್ತು ಬಜನಿಗುತ್ತು ಕುಸುಮ ರೈ ದಂಪತಿ ಪುತ್ರರಾದ ಹೇಮಂತ್ ರೈಯವರು ಬೆಂಗಳೂರು ಉತ್ತರ ಜಿಲ್ಲೆಯ ಬಿ.ಜೆ.ಪಿ ವೃತ್ತಿಪರ ಪ್ರಕೋಷ್ಠದ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

ವಿಠಲ ರೈ ಮನವಳಿಕೆ ಗುತ್ತು ಮತ್ತು ಬಜನಿಗುತ್ತು ಕುಸುಮ ರೈ ದಂಪತಿ ಪುತ್ರರಾದ ಇವರು ಪ್ರಾವಾಸೋದ್ಯಮದಲ್ಲಿ ಎಂಬಿಎ ಸ್ನಾತಕೋತ್ತರ ಪದವಿ ಪಡೆದು ಕಾಲೇಜ್ ಕ್ಯಾ೦ಪಸ್ ಸೆಲೆಕ್ಷನ್ ಮೂಲಕ ೨೦೦೪ರಲ್ಲಿ ಗೋವಾದ ಮಹೇಂದ್ರ ಹಾಲಿಡೇ ರೆಸಾರ್ಟ್‌ನಲ್ಲಿ ಸೇರಿ ನಂತರ ಏಳು ವರ್ಷಗಳ ಕಾಲ ಮಹೇಂದ್ರ ಹಾಲಿಡೇ ರೆಸಾರ್ಟ್‌ನಲ್ಲಿ ಬೇರೆ ಬೇರೆ ಶಾಖೆಗಳಲ್ಲಿ ಕಾರ್ಯ ನಿರ್ವಹಿಸಿ ೨೦೧೧ರಲ್ಲಿ ಸ್ಟರ್ಲಿಂಗ್ ಹಾಲಿಡೇ ರೆಸಾರ್ಟ್ ಇದರ ಚೆನ್ನೈ ಘಟಕದಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಮೂರು ವರ್ಷ ಕಾರ್ಯ ನಿರ್ವಹಿಸಿ ನಂತರದ ದಿನಗಳಲ್ಲಿ ಸ್ವಂತ ಹೊಟೇಲು ಉದ್ಯಮಿಯಾಗಿ, ಹುಟ್ಟೂರಲ್ಲೂ ಉದ್ಯಮವನ್ನು ವಿಸ್ತರಿಸಿ ಕೇವಲ ಉಧ್ಯಮಿಯಾಗಿರದೆ ಸಾಮಾಜಿಕ, ಸಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಕ್ರೀಡಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊ೦ಡವರು. ಚೆನ್ನೈ ಬಂಟರ ಸಂಘದ ಸಕ್ರಿಯ ಸದಸ್ಯರಾಗಿ, ಹೊಟೇಲ್ ಉದ್ಯಮದ ಸರ್ವೋತ್ತಮ ಸಂಸ್ಥೆ ಹೊಟೇಲ್ ಏಸ್ಸೋಸಿಯೇಶನ್‌ನ ಪಧಾಧಿಕಾರಿಯಾಗಿ ರೋಟರಿ ಕ್ಲಬ್ ಅಂತರಾಷ್ಟ್ರೀಯ ನಿರ್ಧೇಶಕರಾಗಿ, ಯಕ್ಷ ಧ್ರುವ ಪಟ್ಲ ಪೌ೦ಡೇಶನ್ ಚೆನ್ನೈ ಘಟಕದ ಪೃಧಾನ ಸಂಚಾಲಕರಾಗಿ, ರಾಷ್ಟ್ರೀಯ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮಂಗಳೂರು ಇದರ ಚೆನ್ನೈ ಘಟಕದ ಸಂಚಾಲಕರಾಗಿದ್ದು ಕಳೆದ ವರ್ಷ ಭಾರತ-ಮಾಲ್ಡಿವ್ಸ್ ದೇಶದ ಟ್ರೇಡ್ ಕೌನ್ಸಿಲ್ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಯಕ್ಷಗಾನ ಕಾರ್ಯಕ್ರಮಗಳಿಗೆ ಪ್ರೊತ್ಸಾಹ ಹಾಗು ಇನ್ನಿತರ ಸಮಾಜಿಕ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡ ಇವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ, ಕೇರಳ,ದೆಹಲಿ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅನೇಕ ರಾಜ್ಯ, ರಾಷ್ಟ್ರಿಯ, ಅಂತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ೨೦೧೯ರಲ್ಲಿ ಮುಂಬೈನಲ್ಲಿ ನಡೆದ ಜಾಗತಿಕ ಮನವಾಧಿಕಾರ ಪ್ರತಿಭಾ ಮಹಾ ಸಮ್ಮೇಳನದಲ್ಲಿ ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ಪ್ರಶಸ್ತಿ ಭಾರತ ಸರಕಾರದ, ರಾಜ್ಯ ಸೇವಾ ಸಂಘಗಳ ವಿಚಾರದ ಸಚಿವಾಲಯದ ಮಾನ್ಯತೆ ಗೊಂಡ ಜಾಗತಿಕ ಮಾನವ ಹಕ್ಕುಗಳ ಕೌನ್ಸಿಲ್ ತನ್ನ ಮೂರನಯ ಅಂತರಾಷ್ಟ್ರೀಯ ವಾರ್ಷಿಕೋತ್ಸವದಂದು ಮುಂಬೈ ಪ್ರಭೋಧ೦ಕರ್ ಠಾಕ್ರೆ ಆಡಿಟೋರಿಯಂನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಗೈದಕ್ಕಾಗಿ ಭಾರತರತ್ನ ಡಾಟ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ, ಭಾರತ-ಮಾಲ್ಡಿವ್ಸ್ ದೇಶದ ಟ್ರೇಡ್ ಕೌನ್ಸಿಲ್ ವತಿಯಿಂದ ಅಂತರಾಷ್ಟ್ರೀಯ ಪುರಸ್ಕಾರ ದೊರೆತಿದೆ.

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದು ಐ.ಟಿ.ಸಿ ಹಾಗು ಒ.ಟಿ.ಸಿ ಶಿಕ್ಷಣ ಪಡೆದಿರತ್ತಾರೆ. ಕಾಲೇಜು ಜೀವನಗಳಲ್ಲಿ ಎ.ಬಿ.ವಿ.ಪಿಯ ಪದಾದಿಕಾರಿಯಾಗಿ ಆನಂತರ ಇದೀಗ ರಾಜಕೀಯವಾಗಿ ಯಲಹಂಕ, ಹೆಬ್ಬಾಳ, ಮಲ್ಲೇಶ್ವರಂ, ಯಶವಂತಪುರ, ಕೆ.ಆರ್ ಪುರಂ, ಮಹಾಲಕ್ಷೀ ಲೇಹೌಟ್, ದಾಸರಹಳ್ಳಿ, ಬೇಟರಾಯನಪುರ, ಪುಲಕೇಶಿನಗರ ವಿಧಾನ ಸಭಾಕ್ಷೇತ್ರ ವುಳ್ಳ ಬೆಂಗಳೂರು ಉತ್ತರ ಜಿಲ್ಲೆಯ ಬಿ.ಜೆ.ಪಿ ವೃತ್ತಿಪರ ಪ್ರಕೋಷ್ಠದ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.