HomePage_Banner
HomePage_Banner
HomePage_Banner
HomePage_Banner

ಸುದ್ದಿ ಬಿಡುಗಡೆ ಪ್ರತಿಭಾ ದೀಪ ಪುರಸ್ಕಾರ – 10 ಮಂದಿ ಪ್ರತಿಭೆಗಳಿಗೆ ಪುರಸ್ಕಾರ

  • ಮಕ್ಕಳು ನಾಡಿಗೆ ಬೆಳಕಾಗುವ ಜೊತೆಗೆ ಗೌರವ, ಸಂಪಾದನೆಯನ್ನೂ ಬೆಳೆಸಿಕೊಳ್ಳಲಿಡಾ.ಯು.ಪಿ.ಶಿವಾನಂದ
  • ಮಕ್ಕಳ ಪ್ರತಿಭೆ ನಮ್ಮನ್ನು ಗುರುತಿಸಿದೆ – ಗೋಕುಲ್‌ನಾಥ್
  • ಒತ್ತಡದ ಕಲಿಕೆ ಬೇಡ ಆಸಕ್ತಿಯಿಂದ ಕಲಿಯಿರಿಹೆಚ್.ಭೀಮರಾವ್
  •  ಛಲವಿದ್ದಾಗ ಏನು ಸಾಧಿಸಬಹುದುಮಂಜುನಾಥ್ ಮೇಸ್ತ್ರಿ ಬಳ್ಳಾರಿ
  • ಮಕ್ಳಳ ಸೃಜನಶೀಲತೆಗಾಗಿ ಪ್ರತಿಭಾ ದೀಪ ಪುರಸ್ಕಾರನಾರಾಯಣ ರೈ ಕುಕ್ಕುವಳ್ಳಿ

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆ ಪ್ರತಿಭಾ ರಂಗದ ಮೂಲಕ ಕೊಡ ಮಾಡುವ ೨೦೨೦-೨೧ನೇ ಸಾಲಿನ ವರ್ಷದ ಪ್ರತಿಭಾ ದೀಪ ಪುರಸ್ಕಾರ ಕಾರ್ಯಕ್ರಮವು ಎ.೭ರಂದು ಇಲ್ಲಿನ ಪ್ರಗತಿ ಸೆಂಟರ್‌ನ ಸಭಾಂಗಣದಲ್ಲಿ ನಡೆಯಿತು. ಸುದ್ದಿ ಬಿಡುಗಡೆ ಪ್ರತಿಭಾರಂಗದ ನಿರ್ವಾಹಕ ನಾರಾಯಣ ರೈ ಕುಕ್ಕುವಳ್ಳಿಯವರ ನೇತೃತ್ವದಲ್ಲಿ ೧೦ ಮಂದಿ ಮಕ್ಕಳಿಗೆ ಪ್ರತಿಭಾ ದೀಪ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಪುತ್ತೂರು-ಕಡಬವನ್ನು ಸೇರಿಸಿಕೊಂಡು ಪ್ರಾಥಮಿಕ, ಪ್ರೌಢ ಶಾಲೆಯ ಹತ್ತು ವಿದ್ಯಾರ್ಥಿಗಳನ್ನು ಪ್ರತಿಭಾ ದೀಪ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಗೊಂಡ ಮೋನಿಕಾ ಬಿ.ವಿ.(೪ನೇ ತರಗತಿ ಸುದಾನ ಮಂಜಲ್ಪಡ್ಪು ನಗರ), ಕು.ಜ್ಞಾನಾ ರೈ ಕುರಿಯ.(೪ನೇ ತರಗತಿ ಸಾಂದೀಪನಿ ನರಿಮೊಗರು), ಕು.ಧನ್ವಿ ರೈ ಕೋಟೆ.(೫ನೇ ತರಗತಿ ವಿವೇಕ ವಿದ್ಯಾಲಯ ಪಾಣಾಜೆ), ತನ್ವಿ ಶೆಟ್ಟಿ ಸೂರಂಬೈಲು(೬ನೇ ತರಗತಿ ಪ್ರಿಯದರ್ಶಿನಿ ವಿದ್ಯಾಲಯ ಬೆಟ್ಟಂಪಾಡಿ), ಪೃಥ್ವಿರಾಜ್ ಪೆರ್ಲಂಪಾಡಿ.(೬ನೇ ತರಗತಿ ಪೆರ್ಲಂಪಾಡಿ ಶಾಲೆ), ಶ್ರವಣ್ ವಿದ್ಯಾನಗರ.(೭ನೇ ತರಗತಿ. ಸರಸ್ವತಿ ವಿದ್ಯಾಲಯ ಕಡಬ), ಅಗಮ್ಯ ತೆಂಕಿಲ.(೮ನೇ ತರಗತಿ.ವಿವೇಕಾನಂದ ತೆಂಕಿಲ), ಸ್ವಾತಿ (೯ನೇ ತರಗತಿ ವಿವೇಕಾನಂದ ತೆಂಕಿಲ), ಶ್ರೀಮಾನ್ ಘಾಟೆ(೯ನೇ ತರಗತಿ.ವಿವೇಕಾನಂದ ತೆಂಕಿಲ), ಅಧಿರಾ ಪಾಣಾಜೆ(೧೦ನೇ ತರಗತಿ.ವಿವೇಕಾನಂದ ತೆಂಕಿಲ) ರವರಿಗೆ ಪುಸ್ತಕ, ದೀಪ, ಪ್ರಮಾಣ ಪತ್ರ ವಿತರಿಸಿ, ಶಾಲು ಹೊದಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭ ಪುರಸ್ಕಾರಕ್ಕೆ ಆಯ್ಕೆಗೊಂಡ ಮಕ್ಕಳ ಪೋಷಕರನ್ನು ಗುರುತಿಸಲಾಯಿತು. ಮಕ್ಕಳಿಗೆ ಪುಸ್ತಕದ ಪ್ರಾಯೋಜಕರಾದ ಸಾಹಿತ್ಯಶಕ್ತಿಯುಳ್ಳ ೪೦೦ ಕ್ಕೂ ಹೆಚ್ಚು ಮಕ್ಕಳ ಕವನ ರಚಿಸಿದ ನಿಡ್ಪಳ್ಳಿ ಗ್ರಾಮದ ನಿವಾಸಿಯಾಗಿರಯವ ನಿರ್ಮಲ ಸುರತ್ಕಲ್ ಅವರವನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಮಕ್ಕಳು ನಾಡಿಗೆ ಬೆಳಕಾಗುವ ಜೊತೆಗೆ ಗೌರವ, ಸಂಪಾದನೆಯನ್ನೂ ಬೆಳೆಸಿಕೊಳ್ಳಿ:
ಸುದ್ದಿ ಬಿಡುಗಡೆ ಸಮೂಹಕ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅವರು ಪ್ರತಿಭಾ ದೀಪ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಗುರುತಿಸುವುದು ನೆನಪಿಡುವುದು ನಾರಾಯಣ ರೈ ಕುಕ್ಕುವಳ್ಳಿಯವರಿಗೆ ಅತ್ಯಂತ ಹೆಚ್ಚು ಸಂತೋಷ ಕೊಡುವ ಸಂಗತಿಯಾಗಿದೆ. ಮಕ್ಕಳು ಮಾಡುವ ಕೆಲಸ ಎಲ್ಲರಿಗೂ ಸಂತೋಷ ಕೊಡುವಂತಾಗಲಿ. ಇದು ನಿಮ್ಮ ತಂದೆ ತಾಯಿಗೂ, ನಿಮಗೂ ಕೀರ್ತಿ ತರುತ್ತದೆ ಎಂದು ಹೇಳಿದರು. ಪ್ರತಿಭಾ ರಂಗ ಆರಂಭದಿಂದ ಇಂದಿನ ತನಕ ಭಾಗವಹಿಸಿದ ಮಕ್ಕಳು ಮುಂದೊಂದು ದಿನ ದೊಡ್ಡ ಸಾಧನೆ ಮಾಡಿದಾಗ ಅವರಿಗೆ ನೀಡಿದ ಪ್ರಾರಂಭದ ಪ್ರೋತ್ಸಾಹವೇ ನಮಗೆ ಹೆಮ್ಮೆ ತರುವಂತಹದು. ಈ ನಿಟ್ಟಿನಲ್ಲಿ ಇವತ್ತು ಅವರೊಂದಿಗೆ ನಿಂತು ಪೊಟೋ ತೆಗೆಸುವುದು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಮುಂದೆ ಮಕ್ಕಳು ದೊಡ್ಡ ವ್ಯಕ್ತಿಯಾಗಿ ಹೋದಂತೆ ಅವರಿಗೆ ಒಳ್ಳೆಯ ವ್ಯಕ್ತಿತ್ವ, ಮನಸ್ಸನ್ನು ಬೆಳೆಸಿಕೊಳ್ಳುವ ಶಕ್ತಿ ಬೆಳೆಯಲಿ. ಮಕ್ಕಳು ಸಮಾಜವನ್ನು ಬೆಳೆಸುವ ಶಕ್ತಿಯಾಗಿ ಬೆಳೆಯಬೇಕು. ಮಕ್ಕಳು ನಾಡಿಗೆ ಬೆಳಕಾಗಬೇಕುವುದರ ಜೊತೆಗೆ ಗೌರವ ಮತ್ತು ಸಂಪದಾನೆಯನ್ನು ಬೆಳೆಸಿಕೊಳ್ಳಬೇಕೆಂದರು.

ಮಕ್ಕಳ ಪ್ರತಿಭೆ ನಮ್ಮನ್ನು ಗುರುತಿಸಿದೆ:
ಪ್ರಗತಿ ವಿದ್ಯಾ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಅವರು ಮಾತನಾಡಿ ಮಕ್ಕಳ ಪ್ರತಿಭೆ, ಫಲಿತಾಂಶಗಳು ಒಂದು ವಿದ್ಯಾ ಸಂಸ್ಥೆಯನ್ನು ಗುರುತಿಸುವಷ್ಟರ ಮಟ್ಟಿಗೆ ತಲುಪಿದೆ ಎಂದ ಅವರು ೨೦೦೮ರಲ್ಲಿ ೧೮ ಮಕ್ಕಳಿಂದ ಆರಂಭಗೊಂಡ ನಮ್ಮ ಸಂಸ್ಥೆ ಇವತ್ತು ಬಹಳ ಎತ್ತರಕ್ಕೆ ಬೆಳೆಯಲು ಕಾರಣ ಮಕ್ಕಳು. ಯಾಕೆಂದರೆ ಅನುತೀರ್ಣಗೊಂಡ ಮಕ್ಕಳಿಗೆ ಶಾಲಾ ವಾತಾವರಣವನ್ನೆ ಕೊಡುವ ಪ್ರಯತ್ನ ನಾವು ಮಾಡಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದೇವೆ. ಇವತ್ತು ಕೊರೋನಾ ಸಂದರ್ಭದಲ್ಲಿ ನಮಗೆ ಪಾಠ ಕಲಿಸಿದೆ. ನಮ್ಮ ಸಂಸ್ಥೆ ಕೇವಲ ಪುತ್ತೂರಿನಲ್ಲಿ ಮತ್ರವಲ್ಲ ಕೊಡಗಿನಲ್ಲಿ ಈಗಾಗಲೇ ೨ ಶಾಖೆ, ಮುಂದೆ ಮಡಿಕೇರಿ, ಹಾಸನ, ಚಿಕ್ಕಮಗಳೂರುನಲ್ಲಿ ಶೀಘ್ರದಲ್ಲಿ ಶಾಖೆ ಆರಂಭಗೊಳ್ಳಲಿದೆ. ಒಟ್ಟಿನಲ್ಲಿ ನಮ್ಮ ಮಕ್ಕಳ ಫಲಿತಾಂಶ ನಮ್ಮನ್ನು ಗುರುತಿಸಿದೆ. ಮಕ್ಕಳಿಗೆ ತುಂಬಿಸುವುದು ಏನಿಲ್ಲ. ಆದರೆ ಅವರಿಗೆ ಭಗವಂತ ಕೊಟ್ಟದನ್ನು ನಾವು ಅವರಿಂದ ಹೊರತರುವುದು ಅಷ್ಟೆ ಎಂದರು.

ಒತ್ತಡದ ಕಲಿಕೆ ಬೇಡ ಆಸಕ್ತಿಯಿಂದ ಕಲಿಯಿರಿ:
ಸುಳ್ಯ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರು, ಪ್ರತಿಭಾ ಪ್ರೋತ್ಸಾಹಕರು ಕವಿ ಸಾಹಿತಿ ಸಂಘಟಕರಾಗಿರುವ ಎಚ್.ಭೀಮರಾವ್ ವಾಷ್ಠರ್ ಸುಳ್ಯ ಅವರು ಮಾತನಾಡಿ ಮಕ್ಕಳಿಗೆ ಒತ್ತಡದ ಕಲಿಕೆ ಬೇಡ. ಅವರ ಆಸಕ್ತಿಗೆ ತಕ್ಕಂತೆ ಕಲಿಕೆ ಇರಲಿ. ಮಕ್ಕಳ ಆಸಕ್ತಿ ಏನಿದೆ ಅದನ್ನು ಮಾಡಿ ಆಗ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಜ್ಞಾನವನ್ನು ಬಿತ್ತರಿಸಬಹುದು ಎಂದರು.

ಛಲವಿದ್ದಾಗ ಏನು ಸಾಧಿಸಬಹುದು:
ಮಂಜುನಾಥ ಕನ್ಸ್ ಸ್ಟ್ರಕ್ಷನ್ ಬಳ್ಳಾರಿಯ ಮುಖ್ಯಸ್ಥರಾದ ಮಂಜುನಾಥ ಮೇಸ್ತ್ರಿ ಸುಳ್ಯ ಅವರು ಮಾತನಾಡಿ ಏನು ಕಲಿಯದೆ ನಾನು ಒಂದು ಹಂತಕ್ಕೆ ಬರಬೇಕಾದರೆ ನನ್ನೊಳಗಿನ ಛಲ ಮುಖ್ಯವಾಗಿತ್ತು. ಅದೇ ರೀತಿ ಮನುಷ್ಯನಾದವನಿಗೆ ಛಲ ಬೇಕು. ಆಗ ಒಂದಲ್ಲ ಒಂದು ದಿನ ಸಾಧನೆ ಮಾಡಬಹುದು. ಚುಚ್ಚು ಮಾತಿಗೆ ಕಿವಿ ಕೊಡಬೇಡಿ. ಪದವಿಗಿಂತ ಪರಿಶ್ರಮ ಮುಖ್ಯ ಎಂದು ನಿಮ್ಮ ಸಾಧನೆಗೆ ಪರಿಶ್ರಮ ಮಾಡಿ ಎಂದರು.

ಮಕ್ಳಳ ಸೃಜನಶೀಲತೆಗಾಗಿ ಪ್ರತಿಭಾ ದೀಪ ಪುರಸ್ಕಾರ:
ಸುದ್ದಿ ಬಿಡುಗಡೆ ಪ್ರತಿಭಾ ರಂಗ ಬಳಗದ ಸಂಚಾಲಕರಾಗಿರುವ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಲ ಬದಲಾಗಿಲ್ಲ. ನಮ್ಮೊಳಗಿನ ಗೊಂದಲ ನಿವಾರಣೆ ಮಾಡುವ, ಸ್ವಾಭಿಮಾನದ ಮತ್ತು ಧೈರ್ಯದ ಕೆಲಸ ಮಾಡು ರೀತಿಯಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಕೆಲಸ ಮಾಡುತ್ತದೆ. ಮಕ್ಕಳು ಆರಂಭದಲ್ಲೇ ಪ್ರತಿಭಾವಂತರಾಗಿರುತ್ತಾರೆ. ಅವರ ಬೆಳೆಯುತ್ತಾ ಅವರ ಪ್ರತಿಭೆಗೆ ಆಕಾರಗಳನ್ನು ಕೊಡುವ ಕೆಲಸ ಆಗುತ್ತದೆ. ಮಕ್ಕಳು ಬರೆಯಬೇಕು. ಅವರು ಸೃಜನ ಶೀಲತೆ ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರತಿಭಾ ದೀಪ ಪುರಸ್ಕಾರ ನೀಡುತ್ತೇವೆ. ಅವರ ಭರವಸೆಗೆ ಬೆಳಕು ಕೊಡಲು ಪ್ರಾಮಾಣಿಕವಾಗಿ ಗುರುತಿಸಿದ್ದೇವೆ ಎಂದ ಅವರು ಮಕ್ಕಳು ಲೋಕದ ಮತ್ತು ಜ್ಞಾನದ ಬೆಳಕಾಗಬೇಕೆಂದು ಅವರಿಗೆ ದೀಪ ಕೊಡುತ್ತಿದ್ದೇವೆ ಎಂದರು. ಸುದ್ದಿ ಮೀಡಿಯಾ ಸೆಂಟರ್‌ನ ಹಮೀದ್ ಕೂರ್ನಡ್ಕ ಅವರು ಅತಿಥಿಯಾಗಿ ಭಾಗವಹಿಸಿ ನಮ್ಮೊಳಗಿನ ಪರಿದಿಯನ್ನು ತೆಗೆದು ನೋಡಿದಾಗ ಹೆಚ್ಚಿನ ಜ್ಞಾನ ಸಿಗುತ್ತದೆ. ವಿಜ್ಞಾನದ ಜೊತೆಗೆ ಸುಜ್ಞಾನವನ್ನೂ ಕಲಿಯಿರಿ ಎಂದು ಹೇಳಿ ಶುಭ ಹಾರೈಸಿದರು.

ಅನಿಸಿಕೆ:
ಪ್ರತಿಭಾ ದೀಪ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಪೈಕಿ ಮೋನಿಕಾ, ಪೃಥ್ವಿ ಮತ್ತು ಜ್ಞಾನ ರೈ ಕುರಿಯ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತಮ್ಮ ಬಾಳಿಗೆ ನಾವೆ ಬೆಳಕಾಗಬೇಕು ಮತ್ತು ತಮ್ಮೊಳಗಿನ ಪ್ರತಿಭೆ ನಮ್ಮ ಸ್ನೇಹಿತೆಯಿದ್ದಂತೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಚಿತ್ರರಂಗದಲ್ಲಿ ಪ್ರಸಾದನ ಮಾಡುವ ಪ್ರೇಮ್ ಕುಮಾರ್ ಆರ್ಲಪದವು, ಸುದ್ದಿ ಮೀಡಿಯಾದ ರಾದೇಶ್ ಮಡಪ್ಪಾಡಿ, ಹೇಮ ಜಯರಾಮ್, ಅರ್ಪಿತ್ ಶಂಕರ್, ಸುಧಾಕರ್ ಪಡೀಲ್, ಪೊಟೊ ಶಾಪ್‌ನ ರಘು ಅವರನ್ನು ಗುರುತಿಸಲಾಯಿತು. ತನ್ವಿ, ಧನ್ವಿ ಪ್ರಾರ್ಥಿಸಿದರು. ಸುದ್ದಿ ಬಿಡುಗಡೆ ಪ್ರತಿಭಾರಂಗ ಬಳಗದ ಸಂಚಾಲಕರಾಗಿರುವ ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ ಅವರು ಸ್ವಾಗತಿಸಿ, ವಂದಿಸಿದರು.

ಜಗತ್ತಿನೆಲ್ಲೆಡೆ ಇರುವ ಪುತ್ತೂರಿನವರು ಓದುವ ತಾಲೂಕಿನ ನಂ.೧ಕನ್ನಡ ದಿನಪತ್ರಿಕೆ ಸುದ್ದಿಬಿಡುಗಡೆ ತನ್ನ ಸಮಾಜಮುಖಿ ವರದಿ ವಿಷಯಗಳಿಂದ ಮನೆಮಾತಾಗಿದ್ದು ಎಲ್ಲರ ಗಮನ ಸೆಳೆದಿದ್ದು ಮನ ಮನೆಯ- ಪತ್ರಿಕೆಯಾಗಿದೆ. ಪತ್ರಿಕೆಯ ವ್ಯವಸ್ಥಾಪನಾ ನಿರ್ದೇಶಕರು ಪ್ರಧಾನ ಸಂಪಾದಕರೂ ಆಗಿರುವ ಡಾ.ಯು.ಪಿ ಶಿವಾನಂದರ ಕನಸು ಸೃಜನ ಶೀಲತೆ, ಬಳಗದವರ ಸಹಕಾರದಿಂದ ದೃಶ್ಯ ಮಾಧ್ಯಮವಾಗಿಯೂ ಬೆಳಗಿರುವುದು ಕಾರ್ಯಕ್ರಮ ವೈವಿಧ್ಯಗಳಿಂದ ನಾಡಿನೆಲ್ಲೆಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಸುದ್ದಿ ಮಾತ್ರವಲ್ಲದೆ ಮಕ್ಕಳ ಪ್ರತಿಭೆ ಬೆಳಗಿಸುವ ಕೆಲಸವೂ ಸುದ್ದಿ ಪತ್ರಿಕೆಯಿಂದ ಆಗುತ್ತಿದೆ. ೧೯೮೪-೮೫ರಿಂದ ಮಕ್ಕಳಿಗಾಗಿ ಪ್ರತಿಭಾರಂಗ ಅಂಕಣ, ಆಗಾಗ ಪ್ರಕಟವಾಗುತ್ತಿದ್ದು ತನ್ನ ವಿಷಯ ವೈವಿದ್ಯತೆಗಳಿಂದ ಮಕ್ಕಳ ಹೆತ್ತವರ ಗಮನ ಸೆಳೆದಿದೆ. ೧೯೯೧-೯೨ರಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರತಿಭಾದೀಪ ಪುರಸ್ಕಾರ ನೀಡುವ ಕಾರ್ಯ ಎಲ್ಲ ಹಿರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕೊರೋನಾದ ಸಂಕಷ್ಟ ಕಾಲದಲ್ಲೂ ಮಕ್ಕಳು ತಮ್ಮ ಕಲಿಕೆಯೊಂದಿಗೆ ಪ್ರತಿಭಾ ಪರಿಚಯ ಲೇಖನ ಕವನ ಚಿತ್ರ ಮಾಡುವುದರ ಮೂಲಕ ತಮ್ಮ ಸೃಜನಶೀಲತೆ ಬೆಳೆಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.