HomePage_Banner
HomePage_Banner
HomePage_Banner
HomePage_Banner

ಬಂದ್ ನಿಂದ ತೊಂದರೆಯಾಗದಂತೆ ಖಾಸಗಿ ವಾಹನ ವ್ಯವಸ್ಥೆ

ಪುತ್ತೂರು: ರಾಜ್ಯಾದ್ಯಂತ ಕೆ.ಎಸ್ಸ್.ಆರ್.ಟಿ.ಸಿ ನೌಕರರ ಸಂಘ ರಾಜ್ಯ ಸರ್ಕಾರದ ವಿರುದ್ದ ಕರೆ ನೀಡಿರುವ ಬಂದ್ ಗೆ ಪುತ್ತೂರಿನಲ್ಲೂ ಬೆಂಬಲ ನೀಡಿದ್ದು ನೌಕರರು ಬಾರದೇ ಇದ್ದುದರಿಂದ ಬಸ್ಸ್ ಗಳು ಹೊರಡದೆ ಬಸ್ಸ್ ನಿಲ್ದಾಣದಲ್ಲೇ ನಿಂತಿವೆ.ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಆರ್.ಟಿ.ಒ ವತಿಯಿಂದ ಖಾಸಗಿ ವಾಹನಗಳಿಗೆ ತಾತ್ಕಾಲಿಕ ಅನುಮತಿ ನೀಡಿ ವಾಹನ ಸಂಚಾರ ಸುಗಮಗೊಳ್ಳುವಂತೆ ಮಾಡಲಾಗಿದೆ ಎಂದು ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ರಾವ್. ಎನ್ ಹೇಳಿದರು.

ಸುದ್ದಿ ನ್ಯೂಸ್ ನೊಂದಿಗೆ ಮಾತನಾಡಿದ ಅವರು “ಸುಳ್ಯದಿಂದ ಪುತ್ತೂರು,ಸುಳ್ಯದಿಂದ ಸುಬ್ರಹ್ಮಣ್ಯ ಹಾಗೂ ಸುಳ್ಯದಿಂದ ಸಂಪಾಜೆ ಪರಿಸರದಲ್ಲಿ ಸುಮಾರು 50 ರಷ್ಟು ಮ್ಯಾಕ್ಸಿ ಕ್ಯಾಬ್ಗಳು ಸಂಚರಿಸುತ್ತಿದ್ದು ಅವರಿಗೆ ಆರ್.ಟಿ.ಒ ವತಿಯಿಂದ ತಾತ್ಕಾಲಿಕ ಅನುಮತಿ ನೀಡಿ ಸಂಚಾರದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ, ಪುತ್ತೂರಿನಿಂದ ಮಂಗಳೂರು, ಉಪ್ಪಿನಂಗಡಿ-ಮಂಗಳೂರು,ಉಪ್ಪಿನಂಗಡಿ-ಧರ್ಮಸ್ಥಳ ಭಾಗಗಳಿಗೆ ಎಂದಿನಂತೆ ಖಾಸಗಿ ವಾಹನಗಳು ಸಂಚಾರ ಮಾಡುತ್ತಿದೆ.ಉಪ್ಪಿನಂಗಡಿ, ಪುತ್ತೂರು,ಸುಳ್ಯ,ಕಡಬದ ಗ್ರಾಮೀಣ ಪ್ರದೇಶಗಳಿಗೆ ತೆರಳುವವರಿಗೆ ತೊಂದರೆಯಾಗದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಜೀಪ್ ಗಳು ಮತ್ತು ಮ್ಯಾಕ್ಸಿ ಕ್ಯಾಬ್ ಗಳು ಚಲಿಸುತ್ತಿವೆ ಆದುದರಿಂದ ಕೆ.ಎಸ್ಸ್.ಆರ್.ಟಿ.ಸಿ ನೌಕರರು ಕರೆ ನೀಡಿರುವ ಬಂದ್ ನಿಂದಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ” ಎಂದು ಅವರು ಹೇಳಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.