HomePage_Banner
HomePage_Banner
HomePage_Banner
HomePage_Banner

ಕಡಬ: ದಾಖಲೆ ನಿರ್ವಹಣೆ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಾಖಲೆ ನಿರ್ವಹಣೆ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮವು ಕಡಬ ತಾಲೂಕಿನ ಸೆಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಏ. 7ರಂದು ಪ್ರಾರಂಭಗೊಂಡಿತು.



ವಂದನೀಯ ರೆವೆರೆಂಡ್ ಫಾದರ್ ರೊನಾಲ್ಡ್ ಲೋಬೊ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯತೆಯನ್ನು ಪುತ್ತೂರು ತಾಲೂಕಿನ  ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ವಹಿಸಿದ್ದರು.

ಕಡಬ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ತರಬೇತಿಯ ಮಹತ್ವದ ಬಗ್ಗೆ ಮಾತನಾಡಿದರು.  ಬಿ ಆರ್ ಪಿ ವಿಜಯಕುಮಾರ್ ಪ್ರಾಸ್ತವಿಕ ಭಾಷಣ ಮಾಡಿದರು. ಸರಕಾರಿ ನೌಕರರ ಕ್ರೀಡಾ ಕೂಟದಲ್ಲಿ ರಾಷ್ಟ್ರಮಟ್ಟದಲ್ಲಿ ಹಲವು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಬಿಳಿನೆಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ  ಚಂದ್ರಶೇಖರ ಇವರನ್ನು ಕಡಬ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಗೌರವಿಸಲಾಯಿತು.

ಬಿ ಇ ಒ ರವರು ಕಡಬ ತಾಲೂಕಿನ ನೂತನವಾಗಿ ಅಸ್ತಿತ್ವಕ್ಕೆ ‌ಬಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ‌ಎಲ್ಲಾ ಪದಾಧಿಕಾರಿಗಳನ್ನು ಗುಲಾಬಿ ಹೂ ಕೊಡುವುದರ ಮೂಲಕ ಅಧಿಕೃತ ಘೋಷಣೆ ಮಾಡಿದರು.

ವೇದಿಕೆಯಲ್ಲಿ ಇಸಿಒ  ಹರಿಪ್ರಸಾದ್ , ಕಡಬ ಕ್ಲಸ್ಟರ್ ಸಿ ಆರ್ ಪಿ ಶ್ರೀ ‌ಕುಮಾರ್, ಬಿಆರ್ ಪಿ ಓಬಲೇಶ್ ,ಸಂಘದ ಗೌರವಾಧ್ಯಕ್ಷ  ತುಕರಾಮ, ಸಂಪನ್ಮೂಲ ವ್ಯಕ್ತಿ, ಇರ್ದೆ ಉಪ್ಪಳಿಗೆ ಸ ಪ್ರೌಢ ಶಾಲೆ  ಮುಖ್ಯಗುರು  ನಾರಾಯಣ  ಉಪಸ್ಥಿತರಿದ್ದರು. ತುಕರಾಮ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಹಮೀದ್ ರವರು  ವಂದಿಸಿದರು.ಸಂಘದ ನಾಮನಿರ್ದೇಶನ ಸದಸ್ಯ ಅಬ್ರಾಹಂ ಕೊಂಬಾರ್ ಸಹಕರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ  ಬಾಲಕ್ರಷ್ಣ ಸವಣೂರು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.