HomePage_Banner
HomePage_Banner
HomePage_Banner
HomePage_Banner

ದಶ ವಾರ್ಷಿಕ ಸಂಭ್ರಮದಲ್ಲಿ ಈಶ್ವರಮಂಗಲ ತ್ವೈಬ ಸೆಂಟರ್ | ಸ್ವಾಗತ ಸಮಿತಿ ಚೇರ್‌ಮೆನ್ ಆಗಿ ಸಯ್ಯಿದ್ ಉಮರ್ ಜಿಫ್ರಿ ತಂಙಳ್

ಪುತ್ತೂರು: ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸದೊಂದಿಗೆ ಈಶ್ವರಮಂಗಳದಲ್ಲಿ ಕಾರ್ಯಾಚರಿಸುತ್ತಿರುವ ತ್ವೈಬ ಎಜುಕೇಶನಲ್ ಸೆಂಟರ್ ಇದರ ದಶ ವಾರ್ಷಿಕವು ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತ್ವೈಬ ಅಧ್ಯಕ್ಷ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂರವರ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.

ಸಯ್ಯಿದ್ ಪೂಕುಂಞಿ ತಂಙಳ್ ಅಲ್‌ಅಹ್ದಲ್ ಆದೂರು ದುವಾ ಮಾಡಿ ಉದ್ಘಾಟಿಸಿದರು. ಸ್ವಾಗತ ಸಮಿತಿ ಚೇರ್‌ಮೆನ್ ಆಗಿ ಸಯ್ಯಿದ್ ಉಮರ್ ಜಿಫ್ರಿ ತಂಙಳ್ ವರ್ಕಿಂಗ್ ಚೇರ್‌ಮೆನ್ ಆಗಿ ಮುಹಮ್ಮದ್ ಮದನಿ, ಕನ್ವೀನರ್ ಆಗಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಕೋಶಾಧಿಕಾರಿಯಾಗಿ ಅಬ್ದುಲ್ ಹಮೀದ್ ಪಳ್ಳತ್ತೂರುರವರನ್ನು ಆಯ್ಕೆ ಮಾಡಲಾಯಿತು. ಸೂಫಿ ಮದನಿ ಪಳ್ಳಂಗೋಡು, ದಾವೂದುಲ್ ಹಕೀಂ ಹಿಮಮಿ ಸಖಾಫಿ ತ್ವೈಬ, ಮುಹಮ್ಮದ್ ಮದನಿ, ಎಂ.ಎ ಮುಹಮ್ಮದ್ ಕುಂಞಿ ಮಾತನಾಡಿದರು. ತ್ವೈಬ ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಸ್ವಾಗತಿಸಿದರು. ಅಬ್ದುಲ್ ಜಲೀಲ್ ಸಖಾಫಿ ಕರ್ನೂರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.