- ಕೋಟಿ ಚೆನ್ನಯರ ಗರಡಿ ಮುಂಭಾಗದಲ್ಲಿ ಮಾಡಿದ್ದ ಭತ್ತದ ನಾಟಿ
ಪುತ್ತೂರು: ೨೦೧೯-೨೦ನೇ ಸಾಲಿನ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಅರಿಯಡ್ಕ ಗ್ರಾಮದ ಕುಕ್ಕುತ್ತಡಿ ಶ್ರೀ ನಾಗಬಿರ್ಮೆರ್ ಕೋಟಿ ಚೆನ್ನಯ ಸನ್ನಿಧಾನದ ಮುಖ್ಯಸ್ಥ ಜಯರಾಮ ಪೂಜಾರಿಯವರು ಪ್ರಥಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಾಣಿಜ್ಯ ಕೃಷಿಯತ್ತಲೇ ಎಲ್ಲರೂ ಆಕರ್ಷಿತರಾಗುತ್ತಿದ್ದು, ಆಹಾರ ಬೆಳೆಯಲ್ಲಿಯೂ ರೈತ ಉತ್ಸಾಹ ತುಂಬಬೇಕೆಂಬ ಹಿನ್ನೆಲೆಯಲ್ಲಿ ಪ್ರತೀ ವರ್ಷ ಭತ್ತದ ಬೇಸಾಯವನ್ನು ಪ್ರೋತ್ಸಾಹಿಸುವ ಸಲುವಾಗಿ ಕೃಷಿ ಇಲಾಖೆ ಈ ಸ್ಪರ್ಧೆ ಆಯೋಜಿಸುತ್ತಿದೆ. ಜಯರಾಮ ಪೂಜಾರಿಯವರು ಹೆಕ್ಟೇರಿಗೆ ೮೦.೭೧ ಕ್ವಿಂಟಾಲ್ ಭತ್ತ ಬೆಳೆದು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇವರು ಓರ್ವ ಪ್ರಗತಿಪರ ಕೃಷಿಕರಾಗಿದ್ದು, ಏರು ಬೆಟ್ಟದಲ್ಲಿ ಮುರ ಕಲ್ಲಿನ ಪಾದೆಯನ್ನು ಸಮತಟ್ಟುಗೊಳಿಸಿ, ಕೋಟಿ ಚೆನ್ನಯರ ಗರಡಿಯ ಮುಂಭಾಗದಲ್ಲಿ ಭತ್ತದ ಬೇಸಾಯ ಮಾಡಿ ಗಮನ ಸೆಳೆದಿದ್ದರು. ಈ ರೀತಿಯ ಪರಿಶ್ರಮದ ಭತ್ತದ ಕೃಷಿಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ಅವರ ಕೃಷಿಯನ್ನು ಗುರುತಿಸಿ ತಾಲೂಕು ಮಟ್ಟದ ಉತ್ತಮ ಭತ್ತದ ಕೃಷಿಕ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ.