ಪುತ್ತೂರು : ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಹಾಗೂ ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕೋವಿಡ್ ಕಾರ್ಯಗಾರ ಏ.೬ರಂದು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಚಿತ್ರ ರಾವ್ ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ನೀಡಿದರು.
ಏ.೮ ಮತ್ತು ೯ರಂದು ನೂಜಿಬಾಳ್ತಿಲದಲ್ಲಿ ಲಸಿಕಾ ಕಾರ್ಯಕ್ರಮವಿದ್ದು ೪೫ ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬೇಕು ಎಂದರು. ಕೋವಿಡ್ ಮುನ್ನೆಚ್ಚರಿಕೆ ಕ್ರಮವನ್ನು ಕಡ್ಡಾಯವಾಗಿ ಪಾಲಿಸಬೇಕು,ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದರು. ಗ್ರಾಮ್ ಪಂಚಾಯತ್ ಉಪಾಧ್ಯಕ್ಷ ಇಮ್ಯಾನುವೆಲ್, ಸದಸ್ಯರಾದ ಚಂದ್ರಶೇಖರ ಹಳೆ ನೂಜಿ, ಜೋಸೆಫ್ ಪಿ.ಜೆ ಪಾರೆ ಕಾಟಿಲ್, ಉಮೇಶ ಸಾಕೋಟೆ ಜಾಲು, ಚಂದ್ರಾವತಿ ಜಾಲು, ವಿಜಯಲಕ್ಷ್ಮಿ ಅರಿಮಜಲು, ಕಿರಿಯ ಆರೋಗ್ಯ ಸಹಾಯಕಿ ದಯಾ ಕಿರಣ್, ಅಂಗನವಾಡಿ ಕಾರ್ಯಕರ್ತರಾದ ಅಮೀನ.ಕೆ, ಪ್ರಪುಲ್ಲ, ಸುಮಿತ್ರ, ಕಾರ್ಯಕರ್ತರಾದ ಶಿಲ್ಪ, ಸುಧಾ, ಮರಿಯಮ್ಮ, ವಿನೋದ, ಶಾಲಾ ಮುಖ್ಯಗುರು ಸುಂದರಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಹಕರಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ ಸ್ವಾಗತಿಸಿ ವಂದಿಸಿದರು.